ETV Bharat / crime

ಬೆಳಗಾವಿಯಲ್ಲಿ ರಾಜಕೀಯ ವೈಷಮ್ಯ; ಕೊಡಲಿಯಿಂದ ತಲೆಗೆ ಹೊಡೆದು ಯುವಕನ ಹತ್ಯೆಗೆ ಯತ್ನ..!

author img

By

Published : Jan 19, 2022, 3:21 PM IST

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ದಡ್ಡಿ ಕುಟುಂಬದ ವಿರುದ್ಧ ಸ್ಪರ್ಧಿಸಿದ್ದ ವೈಷಮ್ಯದಿಂದ ಯುವಕನ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ.

Election hatred; Murder attempt in belgavi
ಬೆಳಗಾವಿಯಲ್ಲಿ ರಾಜಕೀಯ ವೈಷಮ್ಯ; ಕೊಡಲಿಯಿಂದ ತಲೆಗೆ ಹೊಡೆದು ಯುವಕನ ಹತ್ಯೆಗೆ ಯತ್ನ..!

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನ ಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ. ಶ್ರೀಕಾಂತ ಕಟಾಬಳಿ ಎಂಬಾತನ ಮೇಲೆ ಕುಡಗೋಲಿನಿಂದ ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೆ ಯತ್ನಿಸಲಾಗಿದೆ.

ಹಲ್ಲೆಯಿಂದ ಶ್ರೀಕಾಂತನ ತಲೆಗೆ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮುತ್ಯಾನಟ್ಟಿ ಗ್ರಾಮದ ಲಕ್ಷ್ಮಣ್ ದಡ್ಡಿ, ಲಕ್ಷ್ಮಣ್ ಪುತ್ರ ಸಚಿನ್, ರಂಜಿತ್‌ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ.

ಜಮೀನಿಗೆ ಹಸು ಮೇಯಿಸಲು ಬಿಟ್ಟಿದ್ದಿಯಾ ಎಂದು ಆರೋಪಿಸಿ ಹಲ್ಲೆ ಮಾಡಲಾಗಿದೆ. ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ದಡ್ಡಿ ಕುಟುಂಬ ದಾದಾಗಿರಿ ಮಾಡುತ್ತಿದೆ ಎಂದು ಕಟಾಬಳಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಇತ್ತೀಚೆಗೆ ನಡೆದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ದಡ್ಡಿ ಕುಟುಂಬದ ವಿರುದ್ಧ ಗಾಯಾಳು ಶ್ರೀಕಾಂತ ಅತ್ತಿಗೆ ಸ್ಪರ್ಧೆ ಮಾಡಿದ್ದರು. ಇದೇ ವೈಷಮ್ಯ ಇಟ್ಟುಕೊಂಡು ಹಲ್ಲೆ ಮಾಡಿದ್ದಾರೆಂದು ಕಟಾಬಳಿ ಕುಟುಂಬಸ್ಥರು ದೂರಿದ್ದಾರೆ. ಲಕ್ಷ್ಮಣ್ ದಡ್ಡಿ ಹಾಗೂ ಮಕ್ಕಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಟಾಬಳಿ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಚುಚ್ಚುಮದ್ದು ಪಡೆದು ಮೂರು ಮಕ್ಕಳ ಸಾವು ಪ್ರಕರಣ: ಸಿಎಂಗೆ ವರದಿ ಸಲ್ಲಿಸಿದ ಡಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.