ಕರ್ನಾಟಕ

karnataka

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಐಸಿಸಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಚೆನ್ನಾಗಿ ನಡೆದಿದೆ: ಡಿ ಕೆ ಶಿವಕುಮಾರ್​

By

Published : Oct 17, 2022, 5:50 PM IST

ಖರ್ಗೆಯವರನ್ನ ರಬ್ಬರ್ ಸ್ಟಾಂಪ್ ರೀತಿ ಬಳಸ್ತಾರೆಂಬ ಬಿಜೆಪಿ ಆರೋಪ ಆಧಾರರಹಿತ. ಖರ್ಗೆಯವರು ಹಿರಿಯ ನಾಯಕರು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.

ಡಿ ಕೆ ಶಿವಕುಮಾರ್​
ಡಿ ಕೆ ಶಿವಕುಮಾರ್​

ಬೆಂಗಳೂರು: ಎಐಸಿಸಿ ಅಧ್ಯಕ್ಷರ ಆಯ್ಕೆಗೆ ಇಂದು ನಗರದಲ್ಲಿ ನಡೆದ ಮತದಾನ ಪ್ರಕ್ರಿಯೆ ಮುಕ್ತಾಯ ಆಗಿದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ಶಶಿ ತರೂರ್ ಅಭ್ಯರ್ಥಿಗಳಾಗಿ ಕಣದಲ್ಲಿದ್ದು, ಬಹುತೇಕ ಎಲ್ಲರೂ ಮತಚಲಾವಣೆ ಮಾಡಿದ್ದಾರೆ. ಆನ್​ಲೈನ್​ನಲ್ಲಿ 7 ಮಂದಿಯಿಂದ ಮತಚಲಾವಣೆ ಮಾಡಿದ್ದಾರೆ.

ಮತದಾನ ಪ್ರಕ್ರಿಯೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ

ಸಂಜೆ ನಾಲ್ಕು ಗಂಟೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​, ನಾಲ್ಕು ಗಂಟೆಗೆ ಮತದಾನ ಮುಗಿದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಚೆನ್ನಾಗಿ ನಡೆದಿದೆ.‌ ಹೊರಗಡೆಯಲ್ಲಿ ಡ್ಯೂಟಿ ಮಾಡಿದವರು ಅಲ್ಲೇ ಮತದಾನ ಮಾಡಿದ್ದಾರೆ. ಬಿ ವಿ ಶ್ರೀನಿವಾಸ್, ನಾಗೇಂದ್ರ, ಡಿ. ಕೆ ಸುರೇಶ್ ಹಾಗೂ ಜಯರಾಂ ರಮೇಶ್, ಆಂಜನೇಯಲು ಕ್ಯಾಂಪ್ ಸೈಟ್​ನಲ್ಲಿ ಮತದಾನ ಮಾಡಿದ್ದಾರೆ. ಇಬ್ಬರು ಮತದಾರರು ವಿದೇಶದಲ್ಲಿ ಇದ್ದಾರೆ. ರೆಹಮಾನ್ ಖಾನ್ ಕೋವಿಡ್ ಕಾರಣಕ್ಕಾಗಿ ಅವರ ಪರವಾಗಿ ಪಿಆರ್​ಓ ಮತದಾನ ಮಾಡಿದ್ದಾರೆ. ಕೆಪಿಸಿಸಿ ಸದಸ್ಯತ್ವದ ಅರಿವು ಎಲ್ಲರಿಗೂ ಗೊತ್ತಾಗಿದೆ. ಮುಂದಿನ ‌ದಿನಗಳಲ್ಲಿ ಇನ್ನು ಹೆಚ್ಚಿನ ಸದಸ್ಯತ್ವ ಆಗಲಿದೆ ಎಂಬ ವಿಶ್ವಾಸ ಇದೆ ಎಂದರು.

ವಿಪಕ್ಷ ನಾಯಕ ಸಿದ್ದರಾಮಯ್ಯ

ಖರ್ಗೆ ಗೆಲುವು ವಿಶ್ವಾಸ ಇದೆಯೇ ಎಂಬುದಕ್ಕೆ ಮತದಾನ ಮಾಡಿದವರಲ್ಲಿ ಅಭಿಪ್ರಾಯ ಕೇಳಿ. ಗುಪ್ತ ಮತದಾನ ನಡೆದಿದೆ. ಯಾರು ಗೆಲ್ಲುತ್ತಾರೆ ಎಂದು ಹೇಳಲು ಆಗಲ್ಲ ಎಂದು ವಿವರಿಸಿದರು.

ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ

ರೇವಣ್ಣ ಆಕ್ರೋಶ:ಖರ್ಗೆ ರಬ್ಬರ್ ಸ್ಟಾಂಪ್ ರೀತಿ ಬಳಸಿಕೊಳ್ತಾರೆಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಹೆಚ್ ಎಂ ರೇವಣ್ಣ, ಪಾಪ ಬಿಜೆಪಿಯವರಿಗೆ ತಡೆದುಕೊಳ್ಳೋಕೆ ಆಗ್ತಿಲ್ಲ. ರಾಷ್ಟ್ರಾದ್ಯಂತ ಚುನಾವಣೆ ನಡೆಯುತ್ತಿದೆ. ಅವರಿಗೆ ಟ್ವೀಟ್ ಮಾಡೋದಷ್ಟೇ ಕೆಲಸ. ಅನೇಕ‌ ಸಾರಿ ಕಾಂಗ್ರೆಸ್ ನಲ್ಲಿ ಚುನಾವಣೆ ನಡೆದಿವೆ. ಚುನಾವಣೆ ಬಗ್ಗೆ ಅವಹೇಳನ ಮಾಡ್ತಾರೆ. ಪಾರದರ್ಶಕವಾಗಿ ಈ ಚುನಾವಣೆ ನಡೆಯುತ್ತಿದೆ. ರಬ್ಬರ್ ಸ್ಟಾಂಪ್ ಅಂತ ಖರ್ಗೆಯವರನ್ನ ಲೇವಡಿ ಮಾಡ್ತಾರೆ. ಹಾಗಾದ್ರೆ ಇವರ ನಡ್ಡಾ ಯಾರು? ಅಮಿತ್ ಶಾ, ಮೋದಿ ಯಾರು? ಜನ ಎಲ್ಲವನ್ನೂ ನೋಡ್ತಿದ್ದಾರೆ. ಮುಂದೆ ಜನರೇ ಅವರಿಗೆ ಬುದ್ಧಿ ಕಲಿಸ್ತಾರೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಒಳ್ಳೆಯ ದಿನಗಳು ಬರಲಿದೆ: ಒಬಿಸಿ ಘಟಕದ ಅಧ್ಯಕ್ಷ ಮಧುಬಂಗಾರಪ್ಪ ಮಾತನಾಡಿ, ಚುನಾವಣೆ ಆದಮೇಲೆ ಬದಲಾವಣೆಯಾಗಲಿದೆ. ಕಾರ್ಯಕರ್ತರಿಗೂ ಇದು ಹುಮ್ಮಸ್ಸು ತಂದಿದೆ. ದೇಶದ ಜನ ಕಾಂಗ್ರೆಸ್ ನತ್ತ ತಿರುಗಬೇಕು. ದೇಶದಲ್ಲಿ ಹೊಸಬದಲಾವಣೆಗೆ ಅವಕಾಶ ಮಾಡಿಕೊಡಬೇಕು. ನಮಗೆ ವಿಶ್ವಾಸವಿದೆ ಬದಲಾವಣೆಯಾಗಲಿದೆ. ಮುಂದೆ ಒಳ್ಳೆಯ ದಿನಗಳು ಬರಲಿದೆ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು

ದೊಡ್ಡ ಅಂತರದಿಂದ ಖರ್ಗೆ ಗೆಲ್ತಾರೆ: ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಮಾತನಾಡಿ, ಖರ್ಗೆಯವರು ಐದು ದಶಕ ಸೇವೆ ಸಲ್ಲಿಸಿದ್ದಾರೆ. ಶಶಿತರೂರ್, ಖರ್ಗೆಯವರು ಕಣದಲ್ಲಿದ್ದಾರೆ. ಬಹುತೇಖರ ಅಭಿಪ್ರಾಯ ಖರ್ಗೆಯವರ ಪರವಿದೆ. ಸುದೀರ್ಘ ಸೇವೆಯನ್ನು ಸಲ್ಲಿಸಿರೋದು ನೆನಪಿದೆ. ಅವರಿಗೆ ಅಪಾರ ಅನುಭವವಿದೆ. ಅವರ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಪಾರದರ್ಶಕವಾಗಿ ಚುನಾವಣೆ ನಡೆಯುತ್ತಿದೆ. ದೊಡ್ಡ ಅಂತರದಿಂದ ಖರ್ಗೆ ಗೆಲ್ತಾರೆ ಎಂದು ಭವಿಷ್ಯ ನುಡಿದರು.

ಬಿಜೆಪಿಯವರಿಗೆ ಹತಾಶೆಯಾಗಿರಬಹುದು: ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಖರ್ಗೆಯವರನ್ನು ರಬ್ಬರ್ ಸ್ಟಾಂಪ್ ರೀತಿ ಬಳಸ್ತಾರೆಂಬ ಬಿಜೆಪಿ ಆರೋಪ ಆಧಾರರಹಿತ. ಖರ್ಗೆಯವರು ಹಿರಿಯ ನಾಯಕರು. ಅವರ ಬಗ್ಗೆ ಗೊತ್ತಿದ್ದರೆ ಇಂತ ಹೇಳಿಕೆ ಕೊಡ್ತಿರಲಿಲ್ಲ. ಅವರ ಅನುಭವ ಗೊತ್ತಿಲ್ಲ. ಅವರು ರಬ್ಬರ್ ಸ್ಟಾಂಪ್ ಅಲ್ಲ. ಕಾಂಗ್ರೆಸ್​ನಲ್ಲಿ ಚುನಾವಣೆ ನಡೆಯುತ್ತಿದೆ. ಫ್ಯಾಮಿಲಿ ರಾಜಕಾರಣ ಅಂತ ಹೇಳಿಕೊಂಡು ಓಡಾಡ್ತಿದ್ದಾರೆ. ಇಂತಹ ಬೂಟಾಟಿಕೆ ಮಾತು ನಂಬಲ್ಲ. ಖರ್ಗೆಯವರು ನೂರಕ್ಕೆ ನೂರು ಅಧ್ಯಕ್ಷರಾಗ್ತಾರೆ. ಬಿಜೆಪಿಯವರಿಗೆ ಹತಾಶೆಯಾಗಿರಬಹುದು ಎಂದರು.

ಕೇಂದ್ರದಲ್ಲಿ ಮಂತ್ರಿಯಾದ ಅನುಭವವಿದೆ: ಮಾಜಿ ಸಚಿವ ಆರ್ ವಿ ದೇಶಪಾಂಡೆ ಮಾತನಾಡಿ, ಖರ್ಗೆಯವರ ಮೇಲೆ ವಿಶ್ವಾಸವಿದೆ. ಖರ್ಗೆ, ಶಶಿ ತರೂರ್ ಕಣದಲ್ಲಿದ್ದಾರೆ. ಪ್ರಚಂಡ ಬಹುಮತದ ಮೇಲೆ ಖರ್ಗೆ ಆಯ್ಕೆಯಾಗ್ತಾರೆ. ಖರ್ಗೆಯವರಿಗೆ ಎಲ್ಲ ಅನುಭವವಿದೆ. ಶಾಸಕಾಂಗ ಪಕ್ಷ, ಸದನದ ಹೋರಾಟದ ಅನುಭವಿದೆ. 9 ಬಾರಿ ಅಸೆಂಬ್ಲಿಗೆ ಆರಿಸಿ ಬಂದಿದ್ದಾರೆ. ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ರಾಜ್ಯ, ಕೇಂದ್ರದಲ್ಲಿ ಮಂತ್ರಿಯಾದ ಅನುಭವವಿದೆ. ಗುಜರಾತ್ ಸೇರಿ ಹಲವು ಕಡೆ ಚುನಾವಣೆ ಇವೆ. ಖರ್ಗೆಯವರ ಅನುಭವ ಲಾಭವಾಗಲಿದೆ. ಎಲ್ಲಾ ಕಡೆ ಕಾಂಗ್ರೆಸ್ ಜಯಭೇರಿ ಮೊಳಗಿಸಲಿದೆ. ಅವರ ನೇತೃತ್ವದಲ್ಲಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರುತ್ತದೆ ಎಂದಿದ್ದಾರೆ.

ಓದಿ:ವಸೂಲಿ ಮಾಡುವುದೇ ಸರ್ಕಾರದ ಕೆಲಸ : ಹೆಚ್​ ಡಿ ಕುಮಾರಸ್ವಾಮಿ ಕಿಡಿ

ABOUT THE AUTHOR

...view details