ಕರ್ನಾಟಕ

karnataka

ನಮ್ಮನ್ನು ಸರ್ಕಾರ ಕಾಮಾಲೆ‌ಕಣ್ಣಿನಲ್ಲಿ ನೋಡ್ತಿದೆ: ಡಿ ಕೆ ಶಿವಕುಮಾರ್​​

By

Published : Aug 23, 2022, 3:44 PM IST

ಈ ಸರ್ಕಾರ ಭಯದಿಂದಲೇ ನಡೆಯುತ್ತಿದೆ. ನಾವೇನು ಕೊಡಗಿಗೆ ಕುಸ್ತಿ ಮಾಡಲು ಹೋಗುತ್ತಿರಲಿಲ್ಲ. ನಾವು ಹೋರಾಟ ಮಾಡಲು ಮುಂದಾದ್ರೆ, ಯಾವಾಗ್ಲೂ144 ಸೆಕ್ಷನ್ ಹಾಕ್ತಾರೆ. ನಮ್ಮನ್ನು ಸರ್ಕಾರ ಕಾಮಾಲೆ‌ಕಣ್ಣಿನಲ್ಲಿ ನೋಡ್ತಿದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

D K Shivakumar speaks aganist BJP
ಡಿ ಕೆ ಶಿವಕುಮಾರ್​​

ಬೆಂಗಳೂರು:ನಮ್ಮ ಪ್ರತಿಯೊಂದು ಹೋರಾಟವನ್ನ ತಡೆಯುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಮಡಿಕೇರಿ ಚಲೋ ಇದಕ್ಕೆ ಒಂದು ಉದಾಹರಣೆ.ಆ.26 ರಂದು ಮಡಿಕೇರಿ ಚಲೋ ನಡೆಸುವ ವಿಚಾರವಾಗಿ ಶಾಸಕಾಂಗ ಪಕ್ಷದ ನಾಯಕರ ಜೊತೆ ಮಾತನಾಡ್ತೇನೆ. ನಮ್ಮ ಹೋರಾಟಕ್ಕೆ ಯಾವಗ್ಲೂ144 ಸೆಕ್ಷನ್ ಹಾಕ್ತಾರೆ. ನಮ್ಮನ್ನು ಸರ್ಕಾರ ಕಾಮಾಲೆ‌ಕಣ್ಣಿನಲ್ಲಿ ನೋಡ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಭಯದಿಂದಲೇ ನಡೆಯುತ್ತಿದೆ. ನಾವೇನು ಅಲ್ಲಿ ಕುಸ್ತಿ ಮಾಡೋಕೆ ಹೋಗ್ತಿದ್ದೇವಾ ಎಂದು ಪ್ರಶ್ನಿಸಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಡಿಕೇರಿ ಚಲೋ ಮುಂದೂಡುವ ನಿರ್ಧಾರ ಕೈಗೊಂಡಿರುವ ಬಗ್ಗೆಯೂ ಪ್ರತಿಕ್ರಿಯಿಸಿ, ಈ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು.

ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವಿಚಾರವಾಗಿ ಮಾತನಾಡಿ, ನನಗೆ ಅದ್ರ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ತಿಳಿದುಕೊಂಡು ಮಾತನಾಡ್ತೀನಿ. ಕೋರ್ಟ್ ವಿಚಾರ ತುಂಬಾ ಸೆನ್ಸಿಟಿವ್. ನಾನು ಈಗಾಗಲೇ ಹೈಕೋರ್ಟ್ ನಿರ್ಧಾರವನ್ನು ಸ್ವಾಗತ ಮಾಡಿದ್ದೆ ಎಂದರು.

ಇದನ್ನೂ ಓದಿ: ಮಡಿಕೇರಿ ಚಲೋ ಮುಂದೂಡಿಕೆ, ಚರ್ಚಿಸಿ ಮುಂದಿನ ದಿನಾಂಕ ನಿರ್ಧಾರ: ಸಿದ್ದರಾಮಯ್ಯ

ರಾಜ್ಯದಲ್ಲಿ ಲಾ ಆಂಡ್ ಆರ್ಡರ್ ಈಗ ಎಚ್ಚೆತ್ತುಕೊಂಡಿದ್ಯಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಲಾ ನೇ ಇಲ್ಲ ಇನ್ನು ಆರ್ಡರ್ ಎಲ್ಲಿ ಬಂತು. ನಾವು ಮಡಿಕೇರಿಗೆ ಹೋದ್ರೆ ಒಂದು ಲಕ್ಷ ಜನ ಸೇರುತ್ತಾರಂತೆ. ಒಂದು ಲಕ್ಷ ಜನ ಮಡಿಕೇರಿಯಲ್ಲಿ ಸೇರಿದ್ರೆ ಸಮಸ್ಯೆ ಆಗುತ್ತಂತೆ. ಮಡಿಕೇರಿ ಒಳಗಡೆ ಹೋಗುವ ಎಲ್ಲಾ ಬಾರ್ಡರ್​​ ಸೀಜ್​​ ಮಾಡ್ತಿದ್ದಾರಂತೆ. ನಮ್ಮ ಶಾಸಕರ ಮೇಲೆ ಸರ್ಕಾರ ಕಣ್ಣಿಟ್ಟಿದೆ. ನನ್ನ ಎಲ್ಲಾ ಆ್ಯಕ್ಟಿವಿಟಿಗಳ ಮೇಲೆ ಕೂಡ ಕಣ್ಣಿಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಏನ್​ ಮಾಡ್ತಿದ್ದಾರೆ ಎಂಬ ಮಾಹಿತಿ ಕಲೆ ಹಾಕ್ತಿದ್ದಾರೆ ಎಂದು ಡಿಕೆಶಿ ಆರೋಪಿಸಿದರು.

ABOUT THE AUTHOR

...view details