ಕರ್ನಾಟಕ

karnataka

ಹೊರರಾಜ್ಯದಲ್ಲಿ 'ಚಿನ್ನ'ದಂತ ಸಾಧನೆ..! ರಾಜ್ಯ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ 'ದ್ರೋಣ'

By

Published : Sep 20, 2019, 3:22 AM IST

Updated : Sep 20, 2019, 9:47 AM IST

ಪ್ರಮುಖವಾಗಿ ಸ್ಫೋಟಕ ವಸ್ತುಗಳ ಕುರಿತು ಹಾಗೂ ಕೊಲೆ ಸುಲಿಗೆ, ದರೋಡೆ, ಕಳ್ಳತನ ಮತ್ತು ಮಾದಕ ಸೇವನೆಯ ಗಾಂಜಾ, ಅಫೀಮುಗಳಂತ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಶ್ವಾನಗಳಿಗೆ ವಿಶಿಷ್ಟ ಮತ್ತು ವಿನೂತನ ತರಬೇತಿ ನೀಡಲಾಗುತ್ತಿದೆ.

ಹೊರರಾಜ್ಯದಲ್ಲಿ ಸಾಧನೆ ಮೆರೆದ ರಾಜ್ಯ ಪೊಲೀಸ್ ಇಲಾಖೆಯ ಶ್ವಾನ

ಬೆಂಗಳೂರು:ಅಪರಾಧ ಪ್ರಕರಣ ಪತ್ತೆ ಹಚ್ಚುವಲ್ಲಿ ರಾಜ್ಯ ಪೊಲೀಸ್ ಇಲಾಖೆ ಮುಂಚೂಣಿಯಲ್ಲಿದ್ದು. ಈ ಕಾರ್ಯದಲ್ಲಿ ಪೊಲೀಸ್ ಶ್ವಾನದಳದ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ಪ್ರಮುಖವಾಗಿ ಸ್ಫೋಟಕ ವಸ್ತುಗಳ ಕುರಿತು ಹಾಗೂ ಕೊಲೆ ಸುಲಿಗೆ, ದರೋಡೆ, ಕಳ್ಳತನ ಮತ್ತು ಮಾದಕ ಸೇವನೆಯ ಗಾಂಜಾ, ಅಫೀಮುಗಳಂತ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಶ್ವಾನಗಳಿಗೆ ವಿಶಿಷ್ಟ ಮತ್ತು ವಿನೂತನ ತರಬೇತಿ ನೀಡಲಾಗುತ್ತಿದೆ.

ಹೊರರಾಜ್ಯದಲ್ಲಿ ಸಾಧನೆ ಮೆರೆದ ರಾಜ್ಯ ಪೊಲೀಸ್ ಇಲಾಖೆಯ ಶ್ವಾನ

ಇದಕ್ಕೆ ಪುಷ್ಟಿ ನೀಡುವಂತೆ ಈ ಬಾರಿ ಉತ್ತರ ಪ್ರದೇಶದ ಲಖನೌದಲ್ಲಿ ನಾಲ್ಕು ದಿನಗಳ ಕಾಲ ನಡೆದ 62ನೇ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ ರಾಜ್ಯದ ಡಾಬರ್ ಮನ್ ತಳಿಯ ದ್ರೋಣ ಹೆಸರಿನ ಶ್ವಾನವು ಚಿನ್ನದ ಪದಕ ಗಳಿಸುವ ಮೂಲಕ ರಾಜ್ಯ ಪೊಲೀಸ್ ಇಲಾಖೆಗೆ ಹೆಸರು ತಂದುಕೊಟ್ಟಿದೆ.

ದೇಶದ 29 ರಾಜ್ಯಗಳ ಪೊಲೀಸ್ ಶ್ವಾನಗಳು ಮತ್ತು ಅರೆ ಸೇನಾ ಪಡೆಗಳಾದ ಬಿಎಸ್​​​ಎಫ್, ಸಿಆರ್​​ಪಿಎಫ್, ಸಿಐಎಸ್​​ಎಫ್, ಎಸ್ಎಸ್​​ಬಿ, ಮತ್ತು ಆರ್​ಪಿಎಫ್ ಶ್ವಾನ ತಂಡಗಳು ಸ್ಫರ್ಧೆಯಲ್ಲಿ ಪಾಲ್ಗೊಂಡಿದ್ದವು.

ಶ್ವಾನ ದ್ರೋಣ ಜೊತೆ ಪರಿಚಾರಕ ರವಿ ದೇಶಭಂಡಾರಿ

ರಾಜ್ಯ ಪೊಲೀಸ್ ಶ್ವಾನದಳದಿಂದ ದ್ರೋಣ ಎಂಬ ಅಪರಾಧ ಪತ್ತೆಯ ಡಾಬರ್​​ಮನ್ ತಳಿಯ ಶ್ವಾನ ಮತ್ತು ಇದರ(ಹ್ಯಾಂಡ್ಲರ್) ಪರಿಚಾರಕ ರವಿ ದೇಶಭಂಡಾರಿ ಪ್ರತಿನಿಧಿಸಿದ್ದರು.

ಅಣಕು ಅಪರಾಧ ಪತ್ತೆ ಕಾರ್ಯಾಚರಣೆಯ ವಾಸನೆ ಗ್ರಹಿಕೆ, ಜಂಪಿಂಗ್ ಟೆಸ್ಟ್, ಫೈಂಡ್ ಟೆಸ್ಟ್ ,ಐಡೆಂಟಿಫಿಕೇಷನ್ ಹಾಗೂ ಟ್ರಾಕಿಂಗ್ ಟೆಸ್ಟ್ ಸೇರಿ ಏಳು ಪರೀಕ್ಷಾ ವಿಭಾಗಗಳಲ್ಲಿ ಅತ್ಯುತ್ತಮ ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ಅವರಿಂದ ಚಿನ್ನದ ಪದಕ ಹಾಗೂ ಗೌರವ ಸಂಪಾದಿಸಿದೆ.

ಶ್ವಾನ ದ್ರೋಣದ ಪರಿಚಾರಕ ರವಿ ದೇಶಭಂಡಾರಿಗೆ ಸನ್ಮಾನ

ರಾಜ್ಯ ಪೊಲೀಸ್ ಶ್ವಾನದಳದ ಗಣನೀಯ ಸಾಧನೆಯನ್ನು ಕಂಡು ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಸೇರಿದಂತೆ ಇಲಾಖೆಯ ಹಲವು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿವಿಧ ರಾಜ್ಯಗಳಲ್ಲಿ ನಡೆದಿರುವ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ ರಾಜ್ಯ ಪೊಲೀಸ್ ಶ್ವಾನದಳ ಭಾಗವಹಿಸಿ ಈವರೆಗೂ ಒಟ್ಟು 22 ಚಿನ್ನದ ಪದಕ, 12 ಬೆಳ್ಳಿಯ ಪದಕ, 8 ಕಂಚಿನ ಪದಕ, 3 ಪಾರಿತೋಷಕ ಪ್ರಶಸ್ತಿಗಳನ್ನು ಪಡೆದುಕೊಂಡು ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮೆರೆದಿದೆ.

Last Updated : Sep 20, 2019, 9:47 AM IST

ABOUT THE AUTHOR

...view details