ಕರ್ನಾಟಕ

karnataka

ಕೊರೊನಾ ಮಾರ್ಗಸೂಚಿ ಪಾಲನೆಗೆ ಹಿರಿಯ IPS ಅಧಿಕಾರಿಗಳ ನಿಯೋಜನೆ

By

Published : Apr 22, 2021, 9:35 AM IST

ಕೊರೊನಾ ಮಾರ್ಗಸೂಚನೆ ಪಾಲನೆ ಮಾಡುವ ನಿಟ್ಟಿನಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿ ಡಿಜಿ ಪ್ರವೀಣ್ ಸೂದ್ ಆದೇಶಿಸಿದ್ದಾರೆ. ನಿಯೋಜನೆಗೊಂಡ ಅಧಿಕಾರಿಗಳು ಏ.22ರಿಂದ ತಮ್ಮ ವಲಯಗಳಿಗೆ ಭೇಟಿ ನೀಡಿ ಆಯಾ ಜಿಲ್ಲೆಗಳಲ್ಲಿ ಕೊರೊನಾ ವಿರುದ್ಧ ಜರುಗಿಸಬೇಕಾದ ಕಾನೂನು ಕ್ರಮಗಳ ಬಗ್ಗೆ ಹಾಗೂ ಪೊಲೀಸ್ ಇಲಾಖೆಯಿಂದ ತೆಗೆದುಕೊಳ್ಳಬೇಕಾದ ಕಾರ್ಯಗಳನ್ನು ಪರಾಮರ್ಶಿಸುವಂತೆ ಸೂಚಿಸಲಾಗಿದೆ.

DG Praveen Sood
ಡಿಜಿ ಪ್ರವೀಣ್ ಸೂದ್

ಬೆಂಗಳೂರು: ಕೊರೊನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಇಲಾಖೆಯಿಂದ ತೆಗೆದುಕೊಳ್ಳುವ ಕ್ರಮಗಳನ್ನು ಪರಾಮರ್ಶಿಸಲು ಹಾಗೂ ಮಾರ್ಗಸೂಚನೆಗಳನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಉಸ್ತುವಾರಿಗಾಗಿ ಪೊಲೀಸ್ ಪ್ರಧಾನ ಕಚೇರಿಯಿಂದ ಹಿರಿಯ ಅಧಿಕಾರಿಗಳನ್ನು ನೇಮಿಸಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಆದೇಶಿಸಿದ್ದಾರೆ.

ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ (ಉತ್ತರ ವಲಯ)- ವಿಜಯಪುರ, ಬಾಗಲಕೋಟೆ, ಬೆಳಗಾವಿ. ಕೆಎಸ್‌ಪಿಎಚ್‌ಸಿಯ ವ್ಯವಸ್ಥಾಪಕ ನಿರ್ದೇಶಕ ಎ.ಎಸ್.ಎನ್.ಮೂರ್ತಿ (ಬಳ್ಳಾರಿ ವಲಯ)-ಬಳ್ಳಾರಿ, ರಾಯಚೂರು. ನೇಮಕಾತಿ ವಿಭಾಗದ ಎಡಿಜಿಪಿ ಅಮ್ರೀತ್ ಪೌಲ್(ದಕ್ಷಿಣ ವಲಯ)-ಮೈಸೂರು, ಮಂಡ್ಯ, ಹಾಸನ. ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಅರುಣ್ ಜೆಜಿ ಚಕ್ರವರ್ತಿ (ಈಶಾನ್ಯ ವಲಯ)-ಬೀದರ್, ಕಲ್ಬುರ್ಗಿ. ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ (ಕೇಂದ್ರ ವಲಯ)-ಬೆಂ.ಗ್ರಾಮಾಂತರ, ತುಮಕೂರು. ಸಿಐಡಿ ಎಡಿಜಿಪಿ ಉಮೇಶ್ ಕುಮಾರ್ (ಪೂರ್ವ ವಲಯ)-ಶಿವಮೊಗ್ಗ, ದಾವಣಗೆರೆ. ಡಿಸಿಆರ್‌ಇ ಪೊಲೀಸ್ ಮಹಾ ನಿರೀಕ್ಷಕ ಹೇಮಂತ್ ನಿಂಬಾಳ್ಕರ್ (ಪಶ್ಚಿಮ ವಲಯ)-ದಕ್ಷಿಣ ಕನ್ನಡ, ಉಡುಪಿ ಉಸ್ತುವಾರಿಗಾಗಿ ನಿಯೋಜಿಸಲಾಗಿದೆ.

ನಿಯೋಜನೆಗೊಂಡ ಅಧಿಕಾರಿಗಳು ಏ.22ರಿಂದ ತಮ್ಮ ವಲಯಗಳಿಗೆ ಭೇಟಿ ನೀಡಿ ಆಯಾ ಜಿಲ್ಲೆಗಳಲ್ಲಿ ಕೊರೊನಾ ವಿರುದ್ಧ ಜರುಗಿಸಬೇಕಾದ ಕಾನೂನು ಕ್ರಮಗಳ ಬಗ್ಗೆ ಹಾಗೂ ಪೊಲೀಸ್ ಇಲಾಖೆಯಿಂದ ತೆಗೆದುಕೊಳ್ಳಬೇಕಾದ ಕಾರ್ಯಗಳನ್ನು ಪರಾಮರ್ಶಿಸಬೇಕು. ಡಿಜಿ-ಐಜಿಪಿ ಅವರಿಗೆ ಏ.26ರೊಳಗೆ ವಿವರವಾದ ವರದಿ ಸಲ್ಲಿಸಲು ಸೂಚಿಸಲಾಗಿದೆ. ಕೊರೊನಾ ಸಮಸ್ಯೆ ಬಗೆಹರಿಯುವವರೆಗೂ ಕಾಲಕಾಲಕ್ಕೆ ಭೇಟಿ ನೀಡಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪರಾಮರ್ಶಿಸಬೇಕು ಎಂದು ತಿಳಿಸಲಾಗಿದೆ.

ಇದನ್ನೂ ಓದಿ:ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಸಿಬ್ಬಂದಿಗೆ ಡಿಜಿ ಪ್ರವೀಣ್ ಸೂದ್ ಸೂಚನೆ

ABOUT THE AUTHOR

...view details