ಕರ್ನಾಟಕ

karnataka

'ನಾವು ಮನುಷ್ಯರೇ, ನಮಗೂ ನೀರು ಕೊಡಿ'.. ಖಾಲಿ ಕೊಡ ಹಿಡಿದು ಗ್ರಾಪಂ ಮುಂದೆ ನಾರಿಯರ ಪ್ರತಿಭಟನೆ..

By

Published : Sep 13, 2021, 5:10 PM IST

ಹಲವು ತಿಂಗಳುಗಳಿಂದ ನೀರು ಕೊಡಿ ಎಂದು ಮನವಿ ಸಲ್ಲಿಸಿದರೂ ನಿರ್ಲಕ್ಷ್ಯವಹಿಸುತ್ತಿದ್ದೀರಿ. ಈ ಧೋರಣೆ ಸರಿಯೇ? ಎಂದು ಪ್ರಶ್ನಿಸಿದರು. ಜಿಲ್ಲಾ ಪಂಚಾಯತ್ ಸಿಇಒ ರವಿಕುಮಾರ್‌ ಅಥವಾ ತಾಲೂಕು ಪಂಚಾಯತ್ ಇಒ ಸ್ಥಳಕ್ಕೆ ಬರುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು..

water-shortage-sparks-protest-in-doddaballapura
ಖಾಲಿ ಕೊಡ ಹಿಡಿದು ಪ್ರತಿಭಟಿಸಿದ ಮಹಿಳೆಯರು

ದೊಡ್ಡಬಳ್ಳಾಪುರ :ಕುಡಿಯುವ ನೀರಿಗಾಗಿ ತಿರುಮಗೊಂಡಹಳ್ಳಿ ಗ್ರಾಮದ ಮಹಿಳೆಯರು ಆಗ್ರಹಿಸಿದ್ದಾರೆ. ಅಲ್ಲದೆ, ಹಾಡೋನಹಳ್ಳಿ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ತಾಲೂಕಿನ ತಿರುಮಗೊಂಡನಹಳ್ಳಿಯಲ್ಲಿ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ.

ಹೀಗಾಗಿ, ಖಾಲಿ ಬಿಂದಿಗೆಗಳನ್ನು ಹಿಡಿದು ಪಂಚಾಯತ್ ಕಚೇರಿ ಮುಂದೆ ಜಮಾಯಿಸಿದ ಮಹಿಳೆಯರು ಸಮರ್ಪಕವಾಗಿ ನೀರು ಪೂರೈಕೆ ಮಾಡದ ಪಂಚಾಯತ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿದರು. 'ನಾವು ಮನುಷ್ಯರೇ, ನಮಗೂ ನೀರು ಕೊಡಿ. ನೀರು ಕೊಡದಿದ್ದರೆ ಪಂಚಾಯತ್ ಖಾಲಿ ಮಾಡಿಕೊಂಡು ಹೋಗಿ' ಎಂದು ತಮ್ಮ ಅಸಮಾಧಾನ ಹೊರ ಹಾಕಿದರು.

ಹಲವು ತಿಂಗಳುಗಳಿಂದ ನೀರು ಕೊಡಿ ಎಂದು ಮನವಿ ಸಲ್ಲಿಸಿದರೂ ನಿರ್ಲಕ್ಷ್ಯವಹಿಸುತ್ತಿದ್ದೀರಿ. ಈ ಧೋರಣೆ ಸರಿಯೇ? ಎಂದು ಪ್ರಶ್ನಿಸಿದರು. ಜಿಲ್ಲಾ ಪಂಚಾಯತ್ ಸಿಇಒ ರವಿಕುಮಾರ್‌ ಅಥವಾ ತಾಲೂಕು ಪಂಚಾಯತ್ ಇಒ ಸ್ಥಳಕ್ಕೆ ಬರುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

'ನೀರಿಲ್ಲದೆ ನಾನಾ ಕಷ್ಟಗಳನ್ನು ಅನುಭವಿಸುತ್ತಿದ್ದೇವೆ. ನೀರು ತರಲು ಹೋಗಿ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದೇವೆ. ಅದಕ್ಕಾಗಿ ದೂರದ ತೋಟಕ್ಕೆ ಹೋಗಬೇಕಾಗಿದೆ' ಎಂದು ನೋವು ತೋಡಿಕೊಂಡ ಅವರು, ಖಾಲಿ ಕೊಡ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಭೇಟಿಕೊಟ್ಟ ಇಒ ಮುರುಡಯ್ಯ:ಸ್ಥಳಕ್ಕೆ ಭೇಟಿ ನೀಡಿದ ಇಒ ಮುರುಡಯ್ಯ ಅವರು ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು. ಸಂಜೆ ವೇಳೆಗೆ ಹಾಲಿ ಇರುವ ಕೊಳವೆ ಬಾವಿಗೆ ಹೊಸ ಪಂಪ್‌ ಮೋಟಾರ್‌ ಇಳಿಸಿ ನೀರು ಬಿಡಲು ವ್ಯವಸ್ಥೆ ಮಾಡುತ್ತೇವೆ.

ಅದರಲ್ಲೂ ನೀರು ಬರದಿದ್ದರೆ ನಾಳೆಯೇ ಹೊಸ ಬೋರ್​ವೆಲ್​ ಕೊರೆಯಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಅಷ್ಟೇ ಅಲ್ಲ, ತಿರುಮಗೊಂಡಹಳ್ಳಿ ಗ್ರಾಮಕ್ಕೂ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿದರು.

ಓದಿ:ಮೈಸೂರು ಚಿನ್ನದಂಗಡಿ ದರೋಡೆ ಪ್ರಕರಣ: 7 ಆರೋಪಿಗಳಿಗೆ ನ್ಯಾಯಾಂಗ ಬಂಧನ

For All Latest Updates

ABOUT THE AUTHOR

...view details