ಕರ್ನಾಟಕ

karnataka

ETV Bharat / state

ಹೊಸ ವರ್ಷಾಚರಣೆ ಘಾಟಿ ಸುಬ್ರಹ್ಮಣ್ಯ ಮತ್ತು ಶಿವಗಂಗೆಯಲ್ಲಿ ಭಕ್ತಸಾಗರ

ಹೊಸ ವರ್ಷದಂದು ರಾಜ್ಯದ ಬಹುತೇಕ ದೇವಾಲಯಗಳು ಭರ್ತಿಯಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಜನಜಂಗುಳಿ ಹೆಚ್ಚಾಗಿತ್ತು.

temples-filled-with-devotees
ದೇವಾಲಯಗಳಲ್ಲಿ ಭಕ್ತ ಸಾಗರ

By

Published : Jan 2, 2021, 2:32 AM IST

ದೊಡ್ಡಬಳ್ಳಾಪುರ :ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಮಣ್ಯ ದೇವಸ್ಥಾನದಲ್ಲಿ ಸಂಜೆಯಾದರೂ ಭಕ್ತರ ಸಂಖ್ಯೆ ಕಡಿಮೆಯಾಗಲಿಲ್ಲ.

ದೇವಾಲಯಗಳಲ್ಲಿ ಭಕ್ತ ಸಾಗರ

ಬೆಳಗ್ಗೆಯಿಂದಲೂ ಸಹ ದೇವಾಲಯಕ್ಕೆ ಸಾವಿರಾರು ಜನ ಬಂದು ದೇವರು ದರ್ಶನ ಪಡೆದರು. ನಂದಿಬೆಟ್ಟ ಹಾಗೂ ನಂದಿಬೆಟ್ಟದ ಸುತ್ತಮುತ್ತಲಿನ ಚಾರಣ ಪ್ರದೇಶಗಳಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನಿರ್ಬಂಧ ವಿಧಿಸಿದ್ದ ಕಾರಣ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಸ್ವಾಮಿ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.

ಇದನ್ನೂ ಓದಿ:ಕೋತಿರಾಜ್​​ ಮನರಂಜನೆ.. ಕೋಟೆಯ ಮಡಿಲಲ್ಲಿ ಹೆಚ್ಚಾದ ಹೊಸ ವರ್ಷದ ಸಂಭ್ರಮ

ಹೊಸ ವರ್ಷದ ಮೊದಲ ದಿನ ದೇವರ ದರ್ಶನ ಪಡೆಯಲು ನೆಲಮಂಗಲ ತಾಲೂಕಿನ ಶಿವಗಂಗೆಯ ಗಂಗಾಧರೇಶ್ವರ ದೇವಾಲಯಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು. ಭಕ್ತರ ಸಂಖ್ಯೆ ಹೆಚ್ಚಾಗಿ ನೂಕುನುಗ್ಗಲು ಕೂಡಾ ಸಂಭವಿಸಿತ್ತು.

ಮತ್ತೊಂದೆಡೆ ದೇವರ ದರ್ಶನ ಪಡೆಯಲು ಬಂದ ಭಕ್ತರು ಕೋವಿಡ್ ಮಾರ್ಗಸೂಚಿ ಪಾಲಿಸದೇ ಬೇಜವಾಬ್ದಾರಿ ತೋರಿದ್ದರು. ಶಾಲಾ-ಕಾಲೇಜು ಮುಗಿಸಿಕೊಂಡು ದೇವಾಲಯದ ಕಡೆ ಮುಗಿಬಿದ್ದ ವಿದ್ಯಾರ್ಥಿಗಳು ಸಾಲು ಶಿವಗಂಗೆಯಲ್ಲಿ ಜೋರಾಗಿತ್ತು.

ABOUT THE AUTHOR

...view details