ಕರ್ನಾಟಕ

karnataka

ಸರ್ಕಾರಿ ವೈದ್ಯನ ವಿರುದ್ಧ ಲಂಚದ ಆರೋಪ... ಡಿಎಚ್​ಒ ಹೇಳಿದ್ದೇನು?

By

Published : May 22, 2019, 8:03 PM IST

Updated : May 22, 2019, 8:32 PM IST

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಲಂಚ ಕೊಡದೇ ಇದ್ರೆ ಚಿಕಿತ್ಸೆ ಕೊಡಲ್ವಂತೆ ಎಂಬ ಆರೋಪ ಕೇಳಿ ಬಂದಿದೆ. ಸರ್ಕಾರಿ ಆಸ್ಪತ್ರೆ ವೈದ್ಯರೊಬ್ಬರು ಒಂದು ಆಪರೇಷನ್ ಮಾಡಲು ನಾಲ್ಕೈದು ಸಾವಿರ ದುಡ್ಡು ಕೇಳ್ತಾರಂತೆ, ದುಡ್ಡು ಕೊಟ್ಟಿಲ್ಲ ಅಂದ್ರೆ ಖಾಸಗಿ ಆಸ್ಪತ್ರೆಗೆ ಹೋಗಿ ಅಂತಾ ಮಹಿಳೆಯರಿಗೆ ಅವಾಜ್ ಹಾಕ್ತಾರೆ ಎಂಬ ಆರೋಪ ಮಾಡಲಾಗಿದೆ. ‌

ಸರ್ಕಾರಿ ಆಸ್ಪತ್ರೆ ವೈದ್ಯನ ಲಂಚವತಾರ..!

ಬೆಂಗಳೂರು: ಸರ್ಕಾರಿ ಆಸ್ಪತ್ರೆ ಬಡವರ ಪಾಲಿನ ದೇವಾಲಯವಿದ್ದಂತೆ. ಅಲ್ಲಿರುವ ವೈದ್ಯರು ದೇವರಿದ್ದಂತೆ. ಆದರೆ ಇಲ್ಲೊಬ್ಬ ಸರ್ಕಾರಿ ವೈದ್ಯರಿದ್ದಾರೆ. ಇವರಿಗೆ ಹಣ ಮಾಡುವುದೊಂದೇ ಕೆಲಸವಾಗಿ ಬಿಟ್ಟಿದೆ ಎಂಬ ಆರೋಪ ನಾಗರಿಕರಿಂದ ವ್ಯಕ್ತವಾಗಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರ ವರ್ಷದಿಂದ ವರ್ಷಕ್ಕೆ ಸರ್ಕಾರಿ ಆಸ್ಪತ್ರೆಗಳು ಅಭಿವೃದ್ಧಿಯಾಗಬೇಕು, ಬಡವರಿಗೆ ಉಚಿತವಾಗಿ ಎಲ್ಲ ರೀತಿಯ ಚಿಕಿತ್ಸೆ ಸಿಗಬೇಕು ‌ಅಂತ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ. ಹಾಗೆ, ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡೋ ವೈದ್ಯರಿಗೆ ಲಕ್ಷ ಲಕ್ಷ ಸಂಬಳ ನೀಡುತ್ತೆ. ಆದ್ರೆ ಅಷ್ಟು ಸಂಬಳ ತೆಗೆದುಕೊಳ್ಳೊ ವೈದ್ಯರು ಲಂಚ ಪಡೆಯುವುದನ್ನು ಮಾತ್ರ ಬಿಡಲ್ಲ. ಲಂಚ ಕೊಟ್ಟಿಲ್ಲ ಅಂದ್ರೆ ರೋಗಿಗಳಿಗೆ ಚಿಕಿತ್ಸೆ ಸಿಗೋದೆ ಇಲ್ಲ. ಈ ರೀತಿ ನಡೆಯುತ್ತಿರುವುದು ಬೇರೆಲ್ಲೂ ಅಲ್ಲ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ.

ಸರ್ಕಾರಿ ಆಸ್ಪತ್ರೆ ವೈದ್ಯನ ವಿರುದ್ಧ ಲಂಚದ ಆರೋಪ...!

ಉದರ ದರ್ಶಕ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಮಹಿಳೆಯರಿಗೆ ಸರ್ಕಾರದಿಂದಲೇ ಇಂತಿಷ್ಟು ದುಡ್ಡು ಕೊಡುತ್ತಾರೆ.‌ ಆದ್ರೆ, ಈ ವೈದ್ಯರೊಬ್ಬರು ಬಡವರಿಂದ ದುಡ್ಡು ವಸೂಲಿ ಮಾಡಿ ಶಸ್ತ್ರ ಚಿಕಿತ್ಸೆ ಮಾಡ್ತಿದ್ದಾರೆ ಎಂದು ಜನ ಆರೋಪಿಸಿದ್ದಾರೆ. ಆಶಾ ಕಾರ್ಯಕರ್ತೆಯರೊಬ್ಬರನ್ನು ಹಣ ವಸೂಲಿಗೆ ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಎಷ್ಟು ದೂರುಗಳು ನೀಡಿದ್ರು, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದಷ್ಟು ಬೇಗ ಈ ವೈದ್ಯನ ವಿರುದ್ಧ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಈ ಬಗ್ಗೆ ಮಾತನಾಡಿರುವ ಡಿಎಚ್​ಒ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಎಫ್​​ಐಆರ್​ ದಾಖಲಾಗಿದೆ. ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ, ಆರೋಪಿತ ವೈದ್ಯರು ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಂಪರ್ಕಕ್ಕೆ ಸಿಕ್ಕಿಲ್ಲ.

.

Last Updated : May 22, 2019, 8:32 PM IST

TAGGED:

ABOUT THE AUTHOR

...view details