ಕರ್ನಾಟಕ

karnataka

ನಾನು ಮತ್ತೆ ಸಿಎಂ ಆದಲ್ಲಿ ರಾಜ್ಯವನ್ನ ಅಭಿವೃದ್ಧಿ ಪಥದತ್ತ ಸಾಗುವಂತೆ ಮಾಡುತ್ತೇನೆ : ಸಿದ್ದರಾಮಯ್ಯ

By

Published : Sep 27, 2021, 6:21 PM IST

siddaramaiah

ಬಸವಣ್ಣನವರ ವಚನದಂತೆ ಇವನಾರವ, ಇವನಾರವ, ಇವನಾರವನೆಂದೆಣಿಸದಿರಯ್ಯ.. ಇವರ ನಮ್ಮವ, ಇವ ನಮ್ಮವ ಎಂದೆಣಿಸಯ್ಯ.. ಎಂದ ಅವರು, ಎಲ್ಲರನ್ನೂ ಸಮಾನವಾಗಿ ಕಾಣಿ. ಆದರೆ, ಕೆಲವರು ವಚನ ಹೇಳಿ ತದನಂತರ ಇವ ಯಾವ ಪೈಕಿ ಅನ್ನುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು..

ಬಾಗಲಕೋಟೆ :ಮುಂದಿನ ದಿನಗಳಲ್ಲಿ ಜನ ಬೆಂಬಲ ಸಿಕ್ಕಿ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬರಲಿ ಎಂದು ಮಹಾದೇವ ಸ್ವಾಮೀಜಿ ಆಶೀವಾ೯ದ ಮಾಡಿದ್ದಾರೆ. ನಾನು ಮತ್ತೆ ಸಿಎಂ ಆದಲ್ಲಿ ರಾಜ್ಯವು ಅಭಿವೃದ್ಧಿ ಪಥದತ್ತ ಸಾಗುವಂತೆ ಮಾಡುತ್ತೇನೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮತ್ತೊಮ್ಮೆ ಸಿಎಂ ಆಗ್ಬೇಕೆಂದ ಆಕಾಂಕ್ಷೆ ವ್ಯಕ್ತಪಡಿಸಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ..

ಜಮಖಂಡಿ ತಾಲೂಕಿನ ಜಕನೂರು ಗ್ರಾಮದಲ್ಲಿ ನಡೆದ ಸಿದ್ದಶ್ರೀ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ ಚಾಲನೆ ನೀಡಿದರು. ನಂತರ ಈ ಕುರಿತು ಮಾತನಾಡಿದರು. ಸಿದ್ದಶ್ರೀ ಉತ್ಸವಕ್ಕೆ ಬಂದದ್ದು ಖುಷಿ ತಂದಿದೆ. ಕಾಯ೯ಕ್ರಮಕ್ಕೆ ಬರಲೇಬೇಕು ಅಂತಾ ಮಹಾದೇವ ಸ್ವಾಮೀಜಿ ಹೇಳಿದ್ರು ಎಂದರು.

ಈ ಭಾಗದಲ್ಲಿ ಕುರಿಗಾಹಿಗಳು ಹೆಚ್ಚಿದ್ದಾರೆ. ಅವರಿಗೆ ಅರಣ್ಯದಲ್ಲಿ ಕುರಿ ಮೇಯಿಸೋಕೆ ಬಿಡಬೇಕು. ಮುಂದಿನ ಬಾರಿ ಪಕ್ಷ ಅಧಿಕಾರಕ್ಕೆ ಬಂದ್ರೆ ಮತ್ತೆ ಹೆಚ್ಚೆಚ್ಚು ಕೆಲಸ ಮಾಡುತ್ತೇನೆ ಎಂದರು. ಜಾತಿ-ಧರ್ಮ ಯಾರೂ ಮಾಡಬೇಡಿ.

ಬಸವಣ್ಣನವರ ವಚನದಂತೆ ಇವನಾರವ, ಇವನಾರವ, ಇವನಾರವನೆಂದೆಣಿಸದಿರಯ್ಯ.. ಇವರ ನಮ್ಮವ, ಇವ ನಮ್ಮವ ಎಂದೆಣಿಸಯ್ಯ.. ಎಂದ ಅವರು, ಎಲ್ಲರನ್ನೂ ಸಮಾನವಾಗಿ ಕಾಣಿ. ಆದರೆ, ಕೆಲವರು ವಚನ ಹೇಳಿ ತದನಂತರ ಇವ ಯಾವ ಪೈಕಿ ಅನ್ನುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ನಮ್ಮ ಸಮಾಜದಲ್ಲಿ ಯಾರೂ ಹಸಿವಿನಿಂದ ಮಲಗಬಾರದು, ನಮ್ಮ ಸಮಾಜ ಹಸಿವು ಮುಕ್ತ ಆಗಬೇಕು ಎಂಬ ಕಾರಣದಿಂದ ನಾನು ಮುಖ್ಯಮಂತ್ರಿ ಆದ ಬಳಿಕ ನೇರವಾಗಿ ವಿಧಾನಸೌಧಕ್ಕೆ ಹೋದೆ. ಪ್ರತಿಯೊಬ್ಬರಿಗೂ ಅನ್ನ ಸಿಗುವ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿದೆ. ಆದರೆ, ಕೆಲವರು ಅನ್ನಭಾಗ್ಯದಿಂದ ಕೂಲಿ ಮಾಡುವವರು ಸಿಗುತ್ತಿಲ್ಲ ಎಂದು ವ್ಯಂಗ್ಯ ಮಾಡುತ್ತಾರೆ ಎಂದರು.

ಈಗ ಸರ್ಕಾರ ಪ್ರತಿಯೊಬ್ಬರಿಗೆ 7 ಕೆಜಿ ಅಕ್ಕಿ ಕೊಡುತ್ತದೆ. ಮುಂದೆ ನಮ್ಮ ಸರ್ಕಾರ ಬಂದು, ನಾನು ಮತ್ತೆ ಮುಖ್ಯಮಂತ್ರಿ ಆದಲ್ಲಿ ಅನ್ನಭಾಗ್ಯ ಯೋಜನೆಯಿಂದ ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದರು.

ಸಿದ್ದರಾಮಯ್ಯ ಅವರ ಕಾರ್ಯಕ್ರಮ ಪ್ರಾರಂಭ ಆಗುತ್ತಿದ್ದಂತೆ ಮಳೆ ಬಂದಿತು. ಈ ವೇಳೆ ನೆರೆದಿದ್ದ ಜನ ಕುರ್ಚಿಯನ್ನು ತಲೆ ಮೇಲೆ ಇಟ್ಟುಕೊಂಡು ಭಾಷಣ ಆಲಿಸಿದರು. ನಂತರ ಹೆಲಿಕಾಪ್ಟರ್ ಮೂಲಕ ಬಾದಾಮಿಗೆ ಪ್ರವಾಸ ಬೆಳೆಸಿದರು.

ಓದಿ:ಈ ಬಾರಿಯೂ ಪ್ರವಾಸಿಗರಿಗೆ ಸಿಂಹಾಸನ ದರ್ಶನ ಇರುವುದಿಲ್ಲ : ಯದುವೀರ್

ABOUT THE AUTHOR

...view details