ಕರ್ನಾಟಕ

karnataka

ಸಮಾಜದ ಶಾಂತಿ ಕದಡುವವರನ್ನು ಒದ್ದು ಒಳಗೆ ಹಾಕಿ.. ಮಾಜಿ ಸಿಎಂ ಹೆಚ್‌ಡಿಕೆ ಗುಡುಗು

By

Published : May 9, 2022, 4:04 PM IST

ಸಮಾಜದಲ್ಲಿ ಪ್ರಸ್ತುತ ಇರುವ ಸಮಸ್ಯೆ ಆಜಾನ್​ ಹನುಮಾನ್​ ಚಾಲೀಸಾ ಅಲ್ಲ. ಇದು ಸಮಾಜದ ಶಾಂತಿ ಕದಡಲು ಕೆಲವರು ಮಾಡುವ ಕಾರ್ಯ. ಅಂತಹವರನ್ನು ಒದ್ದು ಜೈಲಿಗೆ ಹಾಕುವ ಕೆಲಸವನ್ನ ಸರ್ಕಾರ ಮಾಡಬೇಕು. ಸಮಾಜದಲ್ಲಿ ಶಾಂತಿ ಹಾಳಾಗುವ ಮೊದಲೇ ಸರಿಪಡಿಸಬೇಕು ಎಂದು ಕುಮಾರಸ್ವಾಮಿ ಬಾದಾಮಿಯಲ್ಲಿ ಹೇಳಿದರು..

H. D. Kumaraswamy reaction about present political issue and azan mike issue
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

ಬಾಗಲಕೋಟೆ :ಸಮಾಜದಲ್ಲಿ ಶಾಂತಿ ಕದಡುತ್ತಿರುವ ಮುತಾಲಿಕ್​ ಅಂತಹವರನ್ನು ಒದ್ದು ಒಳಗೆ ಹಾಕಬೇಕು. ಮಾಧ್ಯಮಗಳ ಮುಂದೆ ಬಂದು ಸಮಾಜದ ಶಾಂತಿ ಹಾಳು ಮಾಡುವವರನ್ನು ಸರ್ಕಾರ ನಿಯಂತ್ರಿಸಬೇಕು. ಸಾಮಾಜಿಕ ಕಲಹಗಳಾದ ಮೇಲೆ ಅವುಗಳನ್ನು ತಿದ್ದುವ ಕಾರ್ಯಮಾಡಿ ಪ್ರಯೋಜನ ಇಲ್ಲ. ಸರ್ಕಾರ ಆಜಾನ್​ ಬಗ್ಗೆ ಕೋರ್ಟ್‌ ಏನು ತೀರ್ಪು ನೀಡಿದೆ ಎಂಬುದನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಶಾಂತಿ ಕದಡುವವರನ್ನು ಒದ್ದು ಒಳಗಡೆ ಹಾಕಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಬಾದಾಮಿ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದುತ್ವ ಉಳಿಸೋಕೆ ಹನುಮಾನ ಚಾಲೀಸಾ ಹೇಳ್ತಿದ್ದಾರೆ ಅಂತಾ ಏನಿಲ್ಲ, ದಿನಂಪ್ರತಿ ಮನೆಯಲ್ಲಿ ನಾವು ಹೇಳೋಲ್ವೆ?. ಏನಾದ್ರೂ ಸಮಸ್ಯೆ ಆದ್ರೆ, ಆರೋಗ್ಯ ತೊಂದರೆ ಆದ್ರೆ ಹನುಮಾನ ಚಾಲೀಸಾ ಪಠಣ ನಾವು ಮಾಡುತ್ತೇವೆ.

ಇದು ಈಗಿನ ನಿಜವಾದ ಸಮಸ್ಯೆ ಅಲ್ಲ, ಹೋದ ವರ್ಷದ ಬೆಳೆ ವಿಮೆ ದುಡ್ಡೇ ಬಂದಿಲ್ಲ, ಇದಕ್ಕೆ ನಮ್ಮ ಹೋರಾಟ ಇರಬೇಕು. 120 ರೂ.ಪೆಟ್ರೋಲ್, 100 ಡೀಸೆಲ್​, ಸಾವಿರ ರೂಪಾಯಿ ಗ್ಯಾಸ್ ರೇಟ್ ಏರಿಕೆಯಾಗಿದೆ. ಈ ವಿಷಯ ಹಿಡಿದುಕೊಂಡು ನಾವು ಹೊರಟಿದ್ದೇವೆ. ಜನರು ಸಾಯಿತ್ತಿದ್ದಾರೆ, ಜನರ ಜೀವನದ ಜೊತೆ ಆಟಬೇಡಿ. ಇದರ ಬಗ್ಗೆ ಹೋರಾಟಗಾರರು, ಸಂಘಟನೆಗಳು ಮಾತನಾಡಬೇಕು ಎಂದರು.

ಸಮಾಜದಲ್ಲಿ ಶಾಂತಿ ಕದಡುವವರನ್ನು ಒದ್ದು ಒಳಗೆ ಹಾಕಿ ಎಂದು ಆಕ್ರೋಶ ಹೊರ ಹಾಕಿರುವ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ..

ಆಲಿ ಬಾಬಾ ಮತ್ತು 40 ಮಂದಿ ಕಳ್ಳರ ರೀತಿಯ ಸಚಿವ ಸಂಪುಟ :ಶಾಸಕ ಯತ್ನಾಳ್‌ ಹೇಳಿಕೆ ವಿಚಾರವಾಗಿ ಮಾತನಾಡಿ, ಒಬ್ಬ ಜವಾಬ್ದಾರಿಯುತ ಶಾಸಕರು, ಸರ್ಕಾರದಲ್ಲಿ ಮಂತ್ರಿಯಾಗಿದ್ದವರು ಆಪಾದನೆ ಮಾಡಿದ್ದಾರೆ. ಪಾಪದ ಹಣದ ಮೂಲಕ ಕೆಲವು ಎಂಎಲ್​ಎಗಳನ್ನು ತೆಗೆದುಕೊಂಡು ಈ ಸರ್ಕಾರ ಮಾಡಿದ್ದಾರೆ. ಇದು ಪರಿಶುದ್ಧ ಸರ್ಕಾರವಾ, ಜನ ಇವರನ್ನು ಆಯ್ಕೆ ಮಾಡಿದ್ದಾರಾ.? ನಾನು ಪ್ರಧಾನಮಂತ್ರಿಗಳ ಮೇಲೆ ಚರ್ಚೆ ಮಾಡಲ್ಲ.

ಅವರನ್ನು ಬಿಟ್ಟು ಕೆಲ ಮುಖಂಡರು, ಚುನಾವಣೆ ತಂತ್ರಗಾರಿಕೆ ಮಾಡೋರು ಇದ್ದಾರಲ್ಲ ಅವರ ಜೊತೆ ಇರೋರು ಪರಿಶುದ್ಧರಿಲ್ಲ. ಬಿಜೆಪಿ ಅನ್ನೋದು ಭ್ರಷ್ಟ ಜನರ ಸರ್ಕಾರ ಅಂತ ಅನ್ನಬೇಕಾಗಿದೆ. ಆಲಿ ಬಾಬಾ ಮತ್ತು 40 ಮಂದಿ ಕಳ್ಳರ ರೀತಿಯ ಸಚಿವ ಸಂಪುಟ ಇದಾಗಿದೆ. 40 ಮಂದಿ ಕಳ್ಳರ ಸರ್ಕಾರ ಎಂದು ಲೇವಡಿ ಮಾಡಿದರು.

ಹಿಟ್​ ಆ್ಯಂಡ್​ ರನ್​ ಮಾಡಲ್ಲ:2008ರಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಕ್ಕೆ ಯಡಿಯೂರಪ್ಪ ಅವರ ಸರ್ಕಾರ ಬಿದ್ದದ್ದು. ಆದರೆ, ಅಂದು ನಾನು ಕೊಟ್ಟ ದಾಖಲೆಗಳಿಂದ ಯಾರೋ ದುಡ್ಡು ಮಾಡಿಕೊಂಡರು. ಅವರ ಬಳಿ ಅರ್ಕಾವತಿ ಬಗ್ಗೆ ದಾಖಲೆಗಳಿವೆ, ಅವನ್ನು ಕೊಟ್ಟರೆ ಸಿದ್ದರಾಮಯ್ಯ ಜೈಲಿಗೆ ಹೊಗುತ್ತಾರೆ ಅಂತಾರೆ. ಆದರೆ, ಅದನ್ನು ಅವರು ಯಾಕೆ ಇಟ್ಟುಕೊಂಡಿದ್ದಾರೆ. ವರದಿ ಇಟ್ಟುಕೊಂಡು ಪೂಜೆ ಮಾಡ್ತಿದ್ದೀರಾ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಹನುಮಾನ್​ ಚಾಲೀಸಾ ವಿವಾದ : ರಾಣಾ ದಂಪತಿಗೆ ಮುಂಬೈ ಸೆಷನ್​ ಕೋರ್ಟ್​​ನಿಂದ ನೋಟಿಸ್​

ABOUT THE AUTHOR

...view details