ಕರ್ನಾಟಕ

karnataka

ಪಿ.ವಿ ಸಿಂಧುಗೆ 30 ಲಕ್ಷ ನಗದು ಬಹುಮಾನ ಘೋಷಿಸಿದ ಜಗನ್​ ಸರ್ಕಾರ

By

Published : Aug 3, 2021, 1:05 PM IST

ಪಿವಿ ಸಿಂಧುಗೆ 30 ಲಕ್ಷ ನಗದು ಬಹುಮಾನ ನೀಡಿದ ಜಗನ್​ ಸರ್ಕಾರ

ಟೋಕಿಯೋ ಒಲಂಪಿಕ್ಸ್​​​ನಲ್ಲಿ ಕಂಚು ಗೆದ್ದಿರುವ ಪಿ.ವಿ ಸಿಂಧು ಅವರಿಗೆ ಆಂಧ್ರಪ್ರದೇಶ ಸರ್ಕಾರ 30 ಲಕ್ಷ ನಗದು ಬಹುಮಾನ ಘೋಷಿಸಿದೆ.

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಕಂಚಿನ ಪದಕ ಗೆದ್ದು ದೇಶದ ಹಿರಿಮೆ ಹೆಚ್ಚಿಸಿದ್ದಾರೆ. ಬ್ಯಾಡ್ಮಿಂಟನ್‌ ಆಟಗಾರ್ತಿಯ ಸ್ಮರಣಾರ್ಹ ಸಾಧನೆಗೆ ಆಂಧ್ರಪ್ರದೇಶ ಸರ್ಕಾರ 30 ಲಕ್ಷ ರೂ ನಗದು ಬಹುಮಾನ ಘೋಷಿಸಿದೆ.

ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರು ಸೋಮವಾರ ರಾಜ್ಯ ಕ್ರೀಡಾ ನೀತಿಯ ಪ್ರಕಾರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಶಟ್ಲರ್ ಪಿ.ವಿ ಸಿಂಧುಗೆ ನಗದು ಬಹುಮಾನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಾಗ ಸಿಂಧು ಅವರನ್ನು ಹಲವು ಪ್ರಶಸ್ತಿ, ಬಹುಮಾನಗಳು ಅರಸಿಕೊಂಡು ಬಂದಿದ್ದವು. ಭಾರತದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸಿಂಧುಗೆ BMW ಕಾರು ಉಡುಗೊರೆಯಾಗಿ ನೀಡಿದ್ದರು.

ಟೋಕಿಯೋ ಕ್ರೀಡಾಕೂಟಕ್ಕೆ ತೆರಳುವ ಮುನ್ನ ಸಿಂಧು ಜಗನ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ವಿಶಾಖಪಟ್ಟಣದಲ್ಲಿ ಬ್ಯಾಡ್ಮಿಂಟನ್ ಅಕಾಡೆಮಿ ಸ್ಥಾಪಿಸಲು ಸರ್ಕಾರ ಅವರಿಗೆ ಎರಡು ಎಕರೆ ಭೂಮಿ ಮಂಜೂರು ಮಾಡಿತ್ತು.

ಓದಿ: ಸಿಂಧುಗೆ 'ದೇವರ' ಉಡುಗೊರೆ BMW.. ಕಂಚಿಗೆ ಮುತ್ತಿಕ್ಕಿದ 'ಬೆಳ್ಳಿ'ಚುಕ್ಕಿಯ ಇಂಟ್ರೆಸ್ಟಿಂಗ್‌ ಸಂಗತಿಗಳು..

ABOUT THE AUTHOR

...view details