ಕರ್ನಾಟಕ

karnataka

ಯುಎಸ್​ ಓಪನ್​ನಲ್ಲಿ ಅರ್ನರ್ಹಗೊಂಡಿದ್ದರಿಂದ ದೊಡ್ಡ ಪಾಠ ಕಲಿತೆ : ಜೋಕೊವಿಕ್

By

Published : Sep 14, 2020, 9:43 PM IST

ನಾನು ಇದನ್ನು ದೊಡ್ಡ ಪಾಠವಾಗಿ ಸಾಧ್ಯವಾದಷ್ಟು ಆಳವಾಗಿ ತೆಗೆದುಕೊಳ್ಳಲಿದ್ದೇನೆ. ನಾನು ಅದರ ಬಗ್ಗೆ ಸದಾ ಯೋಚಿಸುತ್ತಿದ್ದೇನೆ. ನಾನು ಗ್ರಹಿಸುತ್ತಿದ್ದೇನೆ, ನನ್ನ ತಂಡದೊಂದಿಗೆ ಇದರ ಬಗ್ಗೆ ಮಾತನಾಡುತ್ತಿದ್ದೇನೆ. ಇದೊಂದು ದುರದೃಷ್ಟಕರ ಸಂಗತಿಗಳಲ್ಲೊಂದಾಗಿದೆ. ಇದನ್ನು ಬಿಟ್ಟು ನಾವು ಮುಂದುವರಿಯಬೇಕು ..

ನೊವಾಕ್‌ ಜೊಕೊವಿಕ್
ನೊವಾಕ್‌ ಜೊಕೊವಿಕ್

ರೋಮ್ ​:ಯುಎಸ್​ ಓಪನ್​ನಲ್ಲಿ ಉದ್ದೇಶಪೂರ್ಕವಲ್ಲದೆ ಲೈನ್​ ಅಂಪೈರ್​ಗೆ ಚೆಂಡನ್ನು ಹೊಡೆದು ಅನರ್ಹಗೊಂಡ ಘಟನೆಯಿಂದ ದೊಡ್ಡ ಪಾಠ ಕಲಿತಿರುವುದಾಗಿ ವಿಶ್ವದ ನಂಬರ್​ ಒನ್​ ಟೆನ್ನಿಸ್​ ಪ್ಲೇಯರ್​ ನೊವಾಕ್​ ಜೋಕೊವಿಕ್ ಹೇಳಿಕೊಂಡಿದ್ದಾರೆ.

ರೋಜರ್ ಫೆಡರರ್​, ರಾಫೆಲ್​ ನಡಾಲ್​ರ ಅನುಪಸ್ಥಿತಿಯಲ್ಲಿ ಯುಎಸ್​ ಓಪನ್​ ಕಿರೀಟ ಎತ್ತಿ ಹಿಡಿಯುವ ನಂಬರ್​ ಒನ್​ ಆಟಗಾರನಾಗಿ ಗುರುತಿಸಿಕೊಂಡಿದ್ದ ಜೋಕೊವಿಕ್​ ಆಕಸ್ಮಿಕವಾಗಿ ನಡೆದ ಆ ಘಟನೆಯಿಂದ ಅವರ 18 ನೇ ಗ್ರ್ಯಾಂಡ್ ಸ್ಲಾಮ್​ ಗೆಲುವಿನ ಆಸೆಗೆ ತಣ್ಣೀರೆರಚಿತು. ಅಲ್ಲದೆ ಅವರ ಸತತ 29 ಜಯದ ಓಟಕ್ಕೂ ಬ್ರೇಕ್​ ನೀಡಿತು.

ಅನರ್ಹಗೊಂಡ ನಂತರ ದೈಹಿಕವಾಗಿ ಸದೃಢನಾಗಲು ಕೆಲಸ ಮಾಡುತ್ತಿರುವಷ್ಟು ಮಾನಸಿಕ ಮತ್ತು ಭಾವನಾತ್ಮಕವಾಗಿಯೂ ಕೆಲಸ ಮಾಡುತ್ತಿದ್ದೇನೆ ಎಂದು ಇಟಾಲಿಯನ್​ ಓಪನ್​ ಸಿದ್ಧತೆಯಲ್ಲಿರುವ ಜೋಕೊವಿಕ್​ ಸೋಮವಾರ ತಿಳಿಸಿದ್ದಾರೆ.

ನೊವಾಕ್​ ಜೋಕೊವಿಕ್​

ಮೈದಾನದ ಹೊರಗೆ ಮತ್ತು ಮೈದಾನದೊಳಗೆ ನನ್ನ ಅತ್ಯುತ್ತಮ ಆವೃತ್ತಿ ಅಭಿವೃದ್ಧಿಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನಾನೊಬ್ಬ ಪ್ರಕೋಪಗಳನ್ನು ಹೊಂದಿರುವ ವ್ಯಕ್ತಿತ್ವದ ಆಟಗಾರ ಎಂದು ಅರ್ಥಮಾಡಿಕೊಂಡಿದ್ದೇನೆ ಎಂದು ಸರ್ಬಿಯನ್​ ಆಟಗಾರ ತಿಳಿಸಿದ್ದಾರೆ.

ನಾನು ಇದನ್ನು ದೊಡ್ಡ ಪಾಠವಾಗಿ ಸಾಧ್ಯವಾದಷ್ಟು ಆಳವಾಗಿ ತೆಗೆದುಕೊಳ್ಳಲಿದ್ದೇನೆ. ನಾನು ಅದರ ಬಗ್ಗೆ ಸದಾ ಯೋಚಿಸುತ್ತಿದ್ದೇನೆ. ನಾನು ಗ್ರಹಿಸುತ್ತಿದ್ದೇನೆ, ನನ್ನ ತಂಡದೊಂದಿಗೆ ಇದರ ಬಗ್ಗೆ ಮಾತನಾಡುತ್ತಿದ್ದೇನೆ. ಇದೊಂದು ದುರದೃಷ್ಟಕರ ಸಂಗತಿಗಳಲ್ಲೊಂದಾಗಿದೆ. ಇದನ್ನು ಬಿಟ್ಟು ನಾವು ಮುಂದುವರಿಯಬೇಕು ಎಂದು ಅವರು ಹೇಳಿದ್ದಾರೆ.

ಕಳೆದ ವಾರ ಪಬ್ಲೋ ಕರೆನೊ ಬುಸ್ಟ್ ವಿರುದ್ಧದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಜೋಕೊವಿಕ್​ ಮೊದಲ ಸೆಟ್​ನ 6-5ರಲ್ಲಿ ಸೋತ ನಂತರ ಕೋಪದಲ್ಲಿ ಚೆಂಡಿಗೆ ಹೊಡೆದರು. ಅದು ಆಕಸ್ಮಿತವಾಗಿ ಲೈನ್​ ಅಂಪೈರ್​ ಕುತ್ತಿಗೆಗೆ ಬಡಿಯಿತು. ಇದು ಯುಎಸ್​ ಓಪನ್​ನ ನಿಯಮ ಉಲ್ಲಂಘನೆಯಾಗಿದ್ದರಿಂದ ಜೋಕೊವಿಕ್​ರನ್ನು ಪಂದ್ಯದಿಂದ ಅನರ್ಹಗೊಳಿಸಲಾಯಿತು.

ಆದರೆ, ಈ ಘಟನೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಿರುವ ಜೋಕೊವಿಕ್​ ಇದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

ABOUT THE AUTHOR

...view details