ಕರ್ನಾಟಕ

karnataka

FIH ಮಹಿಳಾ ಹಾಕಿ ವಿಶ್ವಕಪ್​ನಲ್ಲಿ ಭಾರತ-ಇಂಗ್ಲೆಂಡ್ ಪಂದ್ಯ​ ಡ್ರಾ

By

Published : Jul 3, 2022, 11:00 PM IST

ನೆದರ್ಲೆಂಡ್ಸ್‌ ಹಾಗೂ ಸ್ಪೇನ್‌ನಲ್ಲಿ ಜುಲೈ 1ರಿಂದ ಎಫ್‌ಐಎಚ್‌ ಮಹಿಳಾ ಹಾಕಿ ವಿಶ್ವಕಪ್‌ ಟೂರ್ನಿ ಆರಂಭವಾಗಿದ್ದು, ಜುಲೈ 17ರ ವರೆಗೆ ನಡೆಯಲಿದೆ.

ಮಹಿಳಾ ಹಾಕಿ ವಿಶ್ವಕಪ್
ಮಹಿಳಾ ಹಾಕಿ ವಿಶ್ವಕಪ್

ಎಫ್‌ಐಹೆಚ್‌ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ಭಾರತ ತಂಡ ಭಾನುವಾರ ಚುರುಕಿನ ಪ್ರದರ್ಶನವನ್ನು ತೋರಿಸಿದ್ದು, ಮೊದಲ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್‌ ಜೊತೆ 1-1 ರ ಡ್ರಾ ಸಾಧಿಸಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧವೇ ಸೋತು ಕಂಚಿನ ಪದಕ ತಪ್ಪಿಸಿಕೊಂಡಿದ್ದ ಭಾರತ ಈ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲು ಎದುರು ನೋಡಿತ್ತು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡವು ಸೆಮಿಫೈನಲ್ ಪ್ರವೇಶಿಸಿತ್ತಾದರೂ, ಪದಕ ಗೆಲ್ಲಲು ವಿಫಲವಾಗಿತ್ತು.

2018 ರಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವಕಪ್‌ನ ಹಿಂದಿನ ಆವೃತ್ತಿಯಲ್ಲಿ ರೌಂಡ್ ರಾಬಿನ್ ಲೀಗ್ ಪಂದ್ಯದಲ್ಲಿ ಭಾರತ 1-1 ಡ್ರಾದೊಂದಿಗೆ ಇಂಗ್ಲೆಂಡ್ ಪ್ರದರ್ಶನವನ್ನು ಸರಿಗಟ್ಟಿತು. ಅದೇ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಮಹಿಳಾ ತಂಡವು ಗ್ರೂಪ್ ಹಂತದಲ್ಲಿ ಇಂಗ್ಲೆಂಡ್‌ನ್ನು 2-1 ಗೋಲುಗಳಿಂದ ಸೋಲಿಸಿತ್ತು. ಆದರೆ, ಕಂಚಿನ ಪದಕದ ಪಂದ್ಯದಲ್ಲಿ ಅವರ ವಿರುದ್ಧ ಸೋತಿತ್ತು. ಈ ಎರಡು ತಂಡಗಳು 2006 ರ ವಿಶ್ವಕಪ್‌ನಲ್ಲಿ 1-1 ಮತ್ತು 2002 ರ ಚಾಂಪಿಯನ್ಸ್ ಚಾಲೆಂಜ್ ಅನ್ನು 3-3 ರಿಂದ ಡ್ರಾ ಮಾಡಿಕೊಂಡವು ಮತ್ತು 1998 ರ ಮಹಿಳಾ ವಿಶ್ವಕಪ್ ಗುಂಪಿನ ಪಂದ್ಯದಲ್ಲಿ 1-0 ರಿಂದ ಸೋತಿದ್ದವು.

ನೆದರ್ಲೆಂಡ್ಸ್‌ ಹಾಗೂ ಸ್ಪೇನ್‌ನಲ್ಲಿ ಜುಲೈ 1ರಿಂದ ಎಫ್‌ಐಎಚ್‌ ಮಹಿಳಾ ಹಾಕಿ ವಿಶ್ವಕಪ್‌ ಟೂರ್ನಿ ಆರಂಭವಾಗಿದ್ದು, ಜುಲೈ 17ರ ವರೆಗೆ ನಡೆಯಲಿದೆ.

ಓದಿ:ಏಷ್ಯಾ-ಓಶಿಯಾನಿಯಾ 24 ಗಂಟೆ ಓಟದ ಚಾಂಪಿಯನ್‌ಶಿಪ್‌: ಭಾರತದ ಪುರುಷರಿಗೆ ಚಿನ್ನ, ಮಹಿಳೆಯರಿಗೆ ಬೆಳ್ಳಿ

ABOUT THE AUTHOR

...view details