ಕರ್ನಾಟಕ

karnataka

ಯುಎಸ್‌ ಓಪನ್: ಮಹಿಳೆಯರ ಸಿಂಗಲ್ಸ್‌ನಲ್ಲಿ ಫೈನಲ್‌ಗೇರಿದ ಮೊದಲ ಆಫ್ರಿಕನ್‌ ಮಹಿಳೆ!

By

Published : Sep 9, 2022, 7:39 AM IST

ಇದೇ ಮೊದಲ ಬಾರಿಗೆ ಆಫ್ರಿಕಾ ಖಂಡದ ಮಹಿಳಾ ಸ್ಪರ್ಧಿಯೊಬ್ಬರು ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಅಂತಿಮ ಪ್ರಶಸ್ತಿ ಸುತ್ತು ಪ್ರವೇಶಿಸಿ, ಐತಿಹಾಸಿಕ ಸಾಧನೆ ತೋರಿದ್ದಾರೆ.

US Open
ಓನ್ಸ್ ಜಬೇರ್

ನ್ಯೂಯಾರ್ಕ್‌: ಪ್ರತಿಷ್ಟಿತ ಟೆನಿಸ್‌ ಗ್ರ್ಯಾಂಡ್‌ಸ್ಲಾಮ್‌ ಯುಎಸ್ ಓಪನ್‌ ಮಹಿಳೆಯ ಸಿಂಗಲ್ಸ್‌ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಆಫ್ರಿಕಾ ಖಂಡದ ಮಹಿಳಾ ಸ್ಪರ್ಧಿಯೊಬ್ಬರು ಅಂತಿಮ ಪ್ರಶಸ್ತಿ ಸುತ್ತು ಪ್ರವೇಶಿಸಿ ಐತಿಹಾಸಿಕ ಸಾಧನೆ ತೋರಿದ್ದಾರೆ. ಇವರ ಹೆಸರು ಒನ್ಸ್‌ ಜಬೇರ್. ದೇಶ ಟ್ಯುನಿಷಿಯಾ.

5ನೇ ಶ್ರೇಯಾಂಕದ ಗಟ್ಟಿಗಿತ್ತಿ ಜಬೇರ್‌ ತಮ್ಮ ಪ್ರತಿಸ್ಪರ್ಧಿ ಕೆರೋಲಿನಾ ಗಾರ್ಸಿಯಾ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಈ ಸಾಧನೆ ತೋರಿದ್ದಾರೆ. ಇಲ್ಲಿನ ಆರ್ಥರ್‌ ಆ್ಯಶ್ಲೆ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಈಕೆ, ಫ್ರಾನ್ಸ್‌ ಆಟಗಾರ್ತಿ ಕೆರೋಲಿನಾ ಗಾರ್ಸಿಯಾ ಅವರನ್ನು 6-1, 6-3 ರಲ್ಲಿ ಸೋಲಿಸಿದರು.

ಇದಕ್ಕೂ ಹಿಂದೆ ವಿಂಬಲ್ಡನ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ ಹಂತ ತಲುಪಿದ ಆಫ್ರಿಕಾದ ಮೊದಲ ಮಹಿಳೆ ಎಂಬ ಗುರುತರ ಸಾಧನೆಯನ್ನು ಜಬೇರ್‌ ಮಾಡಿದ್ದರು. ಈ ಪಂದ್ಯ ಕಳೆದ ಜುಲೈನಲ್ಲಿ ನಡೆದಿತ್ತು.

ಮುಂದಿನ ಶನಿವಾರ ನಡೆಯಲಿರುವ ಯುಎಸ್ ಓಪನ್‌ ಫೈನಲ್‌ನಲ್ಲಿ ಜಬೇರ್ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಇಗಾ ಸ್ವಿಕೆಟ್‌ ಅಥವಾ ಬೆಲಾರಸ್‌ನ ಅರಿನಾ ಸಬಲೆಂಕಾ ಸವಾಲು ಎದುರಿಸುವರು.

ಇದನ್ನೂ ಓದಿ :101 ರನ್​ಗಳ ಭರ್ಜರಿ ಜಯದೊಂದಿಗೆ ಏಷ್ಯಾ ಕಪ್​ ಅಭಿಯಾನ ಮುಗಿಸಿದ ಭಾರತ, ಆಫ್ಘನ್​ಗೆ ಸೋಲು

ABOUT THE AUTHOR

...view details