ETV Bharat / sports

101 ರನ್​ಗಳ ಭರ್ಜರಿ ಜಯದೊಂದಿಗೆ ಏಷ್ಯಾ ಕಪ್​ ಅಭಿಯಾನ ಮುಗಿಸಿದ ಭಾರತ, ಆಫ್ಘನ್​ಗೆ ಸೋಲು

author img

By

Published : Sep 8, 2022, 11:05 PM IST

ಏಷ್ಯಾ ಕಪ್​ ಟೂರ್ನಿಯಿಂದ ಹೊರಬಿದ್ದ ಬಳಿಕ ಬ್ಯಾಟಿಂಗ್, ಬೌಲಿಂಗ್​ ಸಾಂಘಿಕ ಪ್ರದರ್ಶನ ನೀಡಿದ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ನಡೆದ ಸೂಪರ್​ 4 ಹಂತದ ಕೊನೆಯ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ.

india-won-by-101-runs-against-afghanistan
ಏಷ್ಯಾ ಕಪ್​ ಅಭಿಯಾನ ಮುಗಿಸಿದ ಭಾರತ

ದುಬೈ: ಏಷ್ಯಾ ಕಪ್​ ಟೂರ್ನಿಯಿಂದ ಹೊರಬಿದ್ದ ಬಳಿಕ ಬ್ಯಾಟಿಂಗ್, ಬೌಲಿಂಗ್​ ಸಾಂಘಿಕ ಪ್ರದರ್ಶನ ನೀಡಿದ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ನಡೆದ ಸೂಪರ್​ 4 ಹಂತದ ಕೊನೆಯ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ.

ದುಬೈ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಭಾರತ 20 ಓವರ್​ಗಳಲ್ಲಿ 2 ವಿಕೆಟ್​ಗೆ 212 ರನ್​ ಗಳಿಸಿದರೆ, ಅಫ್ಘಾನಿಸ್ತಾನ 8 ವಿಕೆಟ್​​ಗೆ 111 ರನ್​ ಗಳಿಸಿ ಸೋಲು ಕಂಡಿತು. ಉಭಯ ತಂಡಗಳಿಗೂ ಔಪಚಾರಿಕವಾಗಿದ್ದ ಪಂದ್ಯದಲ್ಲಿ ಭಾರತ ಗೆದ್ದು ಅಭಿಯಾನವನ್ನು ಅಂತ್ಯಗೊಳಿಸಿತು.

ಝದರ್ನ್​ ಏಕಾಂಗಿ ಹೋರಾಟ: ಅಫ್ಘಾನಿಸ್ತಾನ ಪರ ಇಬ್ರಾಹಿಂ ಝದರ್ನ್​ ಏಕಾಂಗಿ ಹೋರಾಟ ನಡೆಸಿದರು. ಇಡೀ ತಂಡ 50 ರನ್​ ಗಳಿಸಿಲು ಪರದಾಡಿದರೆ, ಝದರ್ನ್​ ಒಬ್ಬರೇ 64 ರನ್​ ಬಾರಿಸಿದರು. ಕೊನೆಯಲ್ಲಿ ರಶೀದ್​ ಖಾನ್​ 15, ಮುಜೀಬವ್​ ಉರ್​ ರೆಹಮಾನ್​ 18 ರನ್​ ಗಳಿಸಿದರು. ಒಂದರ ಹಿಂದೆ ಒಂದು ವಿಕೆಟ್​ ಕಳೆದುಕೊಂಡ ಆಫ್ಘನ್​ 20 ಓವರ್​ಗಳಲ್ಲಿ 8 ವಿಕೆಟ್​ಗೆ 111 ಗಳಿಸಿ ಸೋಲೊಪ್ಪಿಕೊಂಡಿತು.

ಮಿಂಚಿದ ಭುವಿ: ಪಾಕಿಸ್ತಾನ, ಶ್ರೀಲಂಕಾ ವಿರುದ್ಧ ವೈಫಲ್ಯ ಅನುಭವಿಸಿ ಭಾರೀ ಟೀಕೆಗೆ ಗುರಿಯಾಗಿದ್ದ ಭುವನೇಶ್ವರ್ ಕುಮಾರ್​ 5 ವಿಕೆಟ್​ ಕಿತ್ತು ಮಿಂಚಿದರು.

ಭಾರತದ ಇನಿಂಗ್ಸ್​: ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ವಿರಾಟ್ ಕೊಹ್ಲಿ ಶತಕದ ನೆರವಿನಿಂದ 20 ಓವರ್​ಗಳಲ್ಲಿ 212 ರನ್​ ಬಾರಿಸಿತು. ವಿರಾಟ್​ ರೂಪ ತೋರಿದ ಕೊಹ್ಲಿ 61 ಎಸೆತಗಳಲ್ಲಿ 122 ರನ್​ ಬಾರಿಸಿದರು. ರೋಹಿತ್​ ಶರ್ಮಾಗೆ ವಿಶ್ರಾಂತಿ ನೀಡಿದ ಕಾರಣ ಆರಂಭಿಕನಾಗಿ ನಾಯಕ ಕೆ ಎಲ್​ ರಾಹುಲ್​ ಜೊತೆ ಕಣಕ್ಕಿಳಿದ ವಿರಾಟ್​ ಮೊದಲ ವಿಕೆಟ್​ಗೆ 119 ರನ್​ ಪೇರಿಸಿದರು.

ಈ ಪಂದ್ಯದಲ್ಲಿ ನಾಯಕತ್ವ ವಹಿಸಿಕೊಂಡ ಕೆ ಎಲ್​ ರಾಹುಲ್​ ಟೂರ್ನಿಯಲ್ಲಿ ಮೊದಲ ಅರ್ಧಶತಕ ಬಾರಿಸಿದರು. 41 ಎಸೆತಗಳಲ್ಲಿ 62 ರನ್​ ಬಾರಿಸಿದರು. ಸೂರ್ಯಕುಮಾರ್​ ಯಾದವ್​ 6 ಗಳಿಸಿ ಔಟಾದರೆ, ರಿಷಭ್​​ ಪಂತ್​ 20 ರನ್​ ಗಳಿಸಿದರು. ಇನ್ನು ಆಫ್ಘನ್​ ಬೌಲಿಂಗ್​ ಪಡೆ ಸಂಪೂರ್ಣವಾಗಿ ನೆಲಕಚ್ಚಿತು. ಫರೀದ್​ ಅಹ್ಮದ್​ 4 ಓವರ್​ಗಳಲ್ಲಿ 57 ರನ್​ ಚಚ್ಚಿಸಿಕೊಂಡು 2 ವಿಕೆಟ್​ ಮಾತ್ರ ಕಿತ್ತರು.

ಓದಿ: 1024 ದಿನಗಳ ಬಳಿಕ ವಿರಾಟ್​ ಕೊಹ್ಲಿ ಶತಕ: ಭಾರತ 2 ವಿಕೆಟ್​ಗೆ 212 ರನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.