ಕರ್ನಾಟಕ

karnataka

EXCLUSIVE: ಬೆಳ್ಳಿ ಗೆದ್ದು ಇತಿಹಾಸ ರಚಿಸಿದ ಕಿಡಂಬಿ ಶ್ರೀಕಾಂತ್​ ಜೊತೆ ಈಟಿವಿ ಭಾರತ್​ ಮಾತು!

By

Published : Dec 25, 2021, 9:01 AM IST

Kidambi Srikanth exclusive interview

ವಿಶ್ವ ಬ್ಯಾಡ್ಮಿಂಟನ್​​ ಚಾಂಪಿಯನ್​ಶಿಪ್​ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದು, ಹೊಸ ದಾಖಲೆ ನಿರ್ಮಾಣ ಮಾಡಿರುವ ಕಿಡಂಬಿ ಶ್ರೀಕಾಂತ್​ ಈಟಿವಿ ಭಾರತ್ ಜೊತೆ ಮಾತನಾಡಿದ್ದು, ತಮ್ಮ ಮನದಾಳ ಹಂಚಿಕೊಂಡಿದ್ದಾರೆ.​​

ಹೈದರಾಬಾದ್​: ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​​​​​​ (BWF World Championships) ಫೈನಲ್​ ಪಂದ್ಯದಲ್ಲಿ ಸೋಲು ಕಂಡರೂ ಐತಿಹಾಸಿಕ ಬೆಳ್ಳಿ ಪದಕ ಗೆದ್ದು ಇತಿಹಾಸ ರಚನೆ ಮಾಡಿರುವ ಕಿಡಂಬಿ ಶ್ರೀಕಾಂತ್​ ಈಟಿವಿ ಭಾರತ್​ ಜೊತೆ ಮಾತನಾಡಿದ್ದು, ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ. ಪದಕ ಗೆಲ್ಲುವುದಕ್ಕಾಗಿ ಅಲ್ಲ, ಬದಲಾಗಿ ಉತ್ತಮವಾದ ಪ್ರದರ್ಶನ ನೀಡುವುದರ ಮೇಲೆ ಹೆಚ್ಚು ಕೇಂದ್ರೀಕರಿಸಿರುವುದಾಗಿ ಅವರು ಈ ವೇಳೆ ತಿಳಿಸಿದರು.

ವಿಶ್ವ ಬ್ಯಾಡ್ಮಿಂಟನ್​​​ ಚಾಂಪಿಯನ್​ಶಿಪ್​​​​ನಲ್ಲಿ ಬೆಳ್ಳಿ ಪದಕ ಗೆದ್ದ ನನಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಟ್ವೀಟ್​​ ಮಾಡಿರುವುದು ನೋಡಿ ತುಂಬಾ ಸಂತೋಷವಾಯಿತು ಎಂದಿರುವ ಕಿಡಂಬಿ ಶ್ರೀಕಾಂತ್​​, ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮವಾಗಿ ಆಡಲು ಪ್ರೇರೇಪಣೆ ನೀಡುತ್ತದೆ ಎಂದರು.

ವಿಶ್ವ ಚಾಂಪಿಯನ್​ಶಿಪ್​​ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಆಟಗಾರನೆಂಬ ಸಾಧನೆ ನಿರ್ಮಿಸಿರುವ ಕಿಡಂಬಿ, 2024ರ ಪ್ಯಾರೀಸ್​​​​​ ಒಲಿಂಪಿಕ್ಸ್​​ನಲ್ಲಿ ಪದಕ ಗೆಲ್ಲುವತ್ತ ಗಮನ ಹರಿಸಿದ್ದಾರೆ. ಇದೇ ವಿಚಾರವಾಗಿ ಈಟಿವಿ ಭಾರತ್​ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

ಇದನ್ನೂ ಓದಿರಿ:Pro Kabaddi League: ತಮಿಳ್​ ತಲೈವಾಸ್​ ವಿರುದ್ಧ ಬೆಂಗಳೂರು ಬುಲ್ಸ್​​ಗೆ ಜಯ

ಸಂದರ್ಶನದ ಆಯ್ದ ಭಾಗ ಇಂತಿದೆ

ಪ್ರಶ್ನೆ: ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ಪ್ಲೇಯರ್ ನೀವು, ನಿಮ್ಮ ಪ್ರತಿಕ್ರಿಯೆ ಏನು?

ಸದ್ಯಕ್ಕೆ ಏನನ್ನೂ ಯೋಚಿಸುತ್ತಿಲ್ಲ. ವಿಶ್ವಚಾಂಪಿಯನ್​ಶಿಪ್​ನಲ್ಲಿ ನಾನು ಉತ್ತಮ ಫಾರ್ಮ್​​ನಲ್ಲಿದ್ದೆನು. ಅದರ ಫಲದಿಂದಲೇ ಪದಕ ಗೆಲ್ಲುವುದಕ್ಕೆ ಸಾಧ್ಯವಾಯಿತು ಎಂದಿದ್ದಾರೆ.

ಪ್ರಶ್ನೆ: ಸೆಮಿಫೈನಲ್​​ ಪಂದ್ಯದಲ್ಲಿ ಭಾರತದ ಲಕ್ಷ್ಯಸೇನ್​​ ಅವರನ್ನ ಎದುರಿಸಿದ ಅನುಭವ ಹೇಗಿತ್ತು?

ನಮ್ಮ ದೇಶದ ಪ್ಲೇಯರ್ಸ್​ ವಿರುದ್ಧ ಆಡುವಾಗ ಕಠಿಣತೆ ಇರುತ್ತದೆ. ಪಂದ್ಯದಲ್ಲಿ ಗೆಲ್ಲುವು ಸಾಧಿಸಬೇಕೆಂಬ ಇರಾದೆಯಿಂದ ಆಟವಾಡುತ್ತೇವೆ. ಗೆಲುವು ಸಾಧಿಸಿರುವುದಕ್ಕೆ ಖುಷಿ ಇದೆ. ಪಂದ್ಯ ಮುಗಿದ ನಂತರ ಮಾತನಾಡಿದ್ದೇವೆ. ಆದರೆ, ಪಂದ್ಯಕ್ಕೆ ಸಂಬಂಧಿಸಿದ ವಿಚಾರದ ಬಗ್ಗೆ ಅಲ್ಲ.

ಪ್ರಶ್ನೆ: ಫೈನಲ್​​ ಪಂದ್ಯದಲ್ಲಿ ಸೋಲು ಕಂಡಿರುವುದಕ್ಕೆ ವಿಷಾದವಿದೆಯೇ?

ವಿಷಾದವಿಲ್ಲ. ಫೈನಲ್​ನಲ್ಲಿ ನಾನು ಆಡಿದ ರೀತಿ ನನಗೆ ಖುಷಿ ನೀಡಿದೆ. ಆದರೆ, ಇನ್ನೂ ಸ್ವಲ್ಪ ಉತ್ತಮವಾಗಿ ಆಡಬಹುದಿತ್ತು ಎಂದು ಭಾವಿಸುತ್ತೇನೆ. ತಪ್ಪುಗಳಿಂದ ಕಲಿಯಬೇಕಿದೆ ಎಂದರು.

ಪ್ರಶ್ನೆ: ಕೋವಿಡ್​​ನಿಂದ ಸಾಕಷ್ಟು ಟೂರ್ನಿ ರದ್ದುಗೊಂಡು, ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ, ನಿರಾಶೆಗೊಂಡಿದ್ದೀರಿ?

ನಾನು ಸ್ವಲ್ಪ ನಿರಾಶೆಗೊಂಡಿದ್ದೆ. ಆದರೆ, ಆ ಸಮಯದಲ್ಲಿ 7-8 ಪಂದ್ಯಾವಳಿ ರದ್ದಾದ ಕಾರಣ ಏನೂ ಮಾಡಲಾಗಲಿಲ್ಲ. ಒಲಿಪಿಂಕ್ಸ್​ಗೆ ಅರ್ಹತೆ ಪಡೆದುಕೊಳ್ಳಲು ಅಗ್ರ 14ರ ಸ್ಥಾನದಲ್ಲಿರಬೇಕು. ಆದರೆ, ನಾನು 16ನೇ ಸ್ಥಾನದಲ್ಲಿದ್ದೆ. ಆದರೆ ಬಿಡಬ್ಲ್ಯೂಎಫ್​​ ಶ್ರೇಯಾಂಕ್​ ವಿಭಿನ್ನವಾಗಿರುತ್ತದೆ ಎಂದರು.

ಪ್ರಶ್ನೆ: ನಿಮ್ಮ ಮುಂದಿನ ಗುರಿ ಬಗ್ಗೆ ತಿಳಿಸಿ?

2024ರ ಪ್ಯಾರೀಸ್​ ಒಲಿಂಪಿಕ್ಸ್​​ನಲ್ಲಿ ಪದಕ ಗೆಲ್ಲುವುದು ನನ್ನ ಅಂತಿಮ ಗುರಿಯಾಗಿದೆ. ಅದರ ಮೇಲೆ ಗಮನಹರಿಸಿದ್ದು, ಇದರ ಮಧ್ಯೆ ಬರುವ ಕೆಲವೊಂದು ಟೂರ್ನಿಗಳ ಮೇಲೂ ಗಮನ ಹರಿಸಿದ್ದೇನೆ ಎಂದಿದ್ದಾರೆ.

ABOUT THE AUTHOR

...view details