ಕರ್ನಾಟಕ

karnataka

ಬೆದರಿಕೆ ಬಳಿಕವೂ ನಾವು ಪಾಕಿಸ್ತಾನದಲ್ಲಿ ಉಳಿಯಲು ಸಾಧ್ಯವಿರಲಿಲ್ಲ.. ನ್ಯೂಜಿಲ್ಯಾಂಡ್ ಕ್ರಿಕೆಟ್ CEO

By

Published : Sep 19, 2021, 6:15 PM IST

ಡೇವಿಡ್ ವೈಟ್
ಡೇವಿಡ್ ವೈಟ್ ()

ಪಾಕಿಸ್ತಾನ ಪ್ರವಾಸಕ್ಕೆ ನಮಗೆ ಯಾವ ತೊಂದರೆಯಿರಲಿಲ್ಲ. ಆದರೆ, ಬೆದರಿಕೆ ಬಂದ ಬಳಿಕ ಎಲ್ಲವೂ ಬದಲಾಯಿತು. ನಮ್ಮ ತಂಡವು ನಿರ್ದಿಷ್ಟ ಮತ್ತು ವಿಶ್ವಾಸಾರ್ಹ ಬೆದರಿಕೆ ಪಡೆದ ಮೇಲೂ ಅಲ್ಲಿ ಉಳಿಯಲು ನಮ್ಮಿಂದ ಸಾಧ್ಯವಿರಲಿಲ್ಲ..

ಆಕ್ಲೆಂಡ್ (ನ್ಯೂಜಿಲ್ಯಾಂಡ್): 'ನಿರ್ದಿಷ್ಟ ಮತ್ತು ವಿಶ್ವಾಸಾರ್ಹ' ಬೆದರಿಕೆ ಪಡೆದ ನಂತರವೂ ನಮ್ಮ ಕ್ರಿಕೆಟ್​ ತಂಡವು ಪಾಕಿಸ್ತಾನದಲ್ಲಿ ಉಳಿಯಲು ಸಾಧ್ಯವಿರಲಿಲ್ಲ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ (NZC) ಮಂಡಳಿಯ ಸಿಇಒ ಡೇವಿಡ್ ವೈಟ್ ಹೇಳಿದ್ದಾರೆ.

18 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್ ತಂಡ ಭದ್ರತಾ ದೃಷ್ಟಿಯಿಂದ ತಮ್ಮ ಪ್ರವಾಸ ರದ್ದುಪಡಿಸಿದೆ. ಸೆ.17ರಂದು ನ್ಯೂಜಿಲ್ಯಾಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ಆರಂಭಗೊಳ್ಳಲು ಕೆಲ ನಿಮಿಷ ಬಾಕಿ ಇರುವಾಗಲೇ ಭದ್ರತಾ ಎಚ್ಚರಿಕೆ ಬಂದಿದ್ದರಿಂದ ಸರಣಿ ರದ್ದು ಮಾಡುವುದಾಗಿ ಕಿವೀಸ್​ ಕ್ರಿಕೆಟ್​ ಮಂಡಳಿ ಘೋಷಣೆ ಮಾಡಿದೆ. 34 ಸದಸ್ಯರ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡವು ಶನಿವಾರ ರಾತ್ರಿ ಚಾರ್ಟರ್ ವಿಮಾನದಲ್ಲಿ ಇಸ್ಲಾಮಾಬಾದ್‌ನಿಂದ ಹೊರಟು ದುಬೈ ತಲುಪಿದೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ: ಭದ್ರತಾ ಕಾರಣಕ್ಕೆ ನ್ಯೂಜಿಲ್ಯಾಂಡ್‌-ಪಾಕ್‌ ಕ್ರಿಕೆಟ್‌ ಸರಣಿ ರದ್ದು

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೇವಿಡ್ ವೈಟ್, ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ)ಗೆ ಇದು ಅತ್ಯಂತ ಕಷ್ಟಕರ ಸಮಯ ಎಂಬುದು ನಮಗೆ ತಿಳಿದಿದೆ. ಅವರ ವೃತ್ತಿಪರತೆ ಮತ್ತು ಕಾಳಜಿಗಾಗಿ ಪಿಸಿಬಿ ಸಿಇಒ ವಾಸಿಂ ಖಾನ್ ಮತ್ತು ಅವರ ತಂಡಕ್ಕೆ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ನ್ಯೂಜಿಲ್ಯಾಂಡ್ ತಂಡಕ್ಕೆ ಎಲ್ಲ ರೀತಿಯ ಭದ್ರತೆ ನೀಡಿತ್ತು, ಅವರು ಈ ರೀತಿ ನಡೆದುಕೊಳ್ಳಬಾರದಿತ್ತು: ಇಂಜಮಾಮ್​

ಪಾಕಿಸ್ತಾನ ಪ್ರವಾಸಕ್ಕೆ ನಮಗೆ ಯಾವ ತೊಂದರೆಯಿರಲಿಲ್ಲ. ಆದರೆ, ಬೆದರಿಕೆ ಬಂದ ಬಳಿಕ ಎಲ್ಲವೂ ಬದಲಾಯಿತು. ನಮ್ಮ ತಂಡವು ನಿರ್ದಿಷ್ಟ ಮತ್ತು ವಿಶ್ವಾಸಾರ್ಹ ಬೆದರಿಕೆ ಪಡೆದ ಮೇಲೂ ಅಲ್ಲಿ ಉಳಿಯಲು ನಮ್ಮಿಂದ ಸಾಧ್ಯವಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details