ಕರ್ನಾಟಕ

karnataka

ಮಿಥಾಲಿ ರಾಜ್​ ದಾಖಲೆ ಉಡೀಸ್​, ವಿರಾಟ್​ ಕೊಹ್ಲಿ ಸಾಲಿಗೆ ಸ್ಮೃತಿ ಮಂಧಾನಾ..ಏನದು ಗೊತ್ತಾ?

By

Published : Sep 21, 2022, 8:24 PM IST

smriti-mandhana-3000-runs-milestone

ಭಾರತದ ಮಹಿಳಾ ಡ್ಯಾಶಿಂಗ್​ ಬ್ಯಾಟರ್​ ಸ್ಮೃತಿ ಮಂದಾನಾ ಅತಿ ವೇಗದ 3 ಸಾವಿರ ರನ್​ ಶಿಖರ ನಿರ್ಮಿಸಿದರು. ಮಹಿಳಾ ಕ್ರಿಕೆಟ್​ನ ದಂತಕಥೆ ಮಿಥಾಲಿ ರಾಜ್​ ದಾಖಲೆಯನ್ನು ಅಳಿಸಿ ಹಾಕಿದರು.

ಭಾರತ ಮಹಿಳಾ ಕ್ರಿಕೆಟ್​ ಸ್ಟಾರ್​ ಪ್ಲೇಯರ್​ ಸ್ಮೃತಿ ಮಂಧಾನಾ ವಿರಾಟ್​ ಕೊಹ್ಲಿ, ಶಿಖರ್​ ಧವನ್​ ಅವರ ಸಾಧನೆಯ ಸಾಲಿಗೆ ಸೇರಿದ್ದಾರೆ. ಏಕದಿನದಲ್ಲಿ ಕಡಿಮೆ ಇನಿಂಗ್ಸ್​ನಲ್ಲಿ ವೇಗದ 3 ಸಾವಿರ ರನ್​ ಪೂರೈಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿಯಾದರೆ, ಮೂರನೇ ಭಾರತೀಯ ಕ್ರಿಕೆಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸ್ಮೃತಿ ಮಂಧಾನಾ ಅಂತಾರಾಷ್ಟ್ರೀಯ ಏಕದಿನದಲ್ಲಿ 76 ಇನಿಂಗ್ಸ್​ನಲ್ಲಿ 3023 ರನ್​ ಗಳಿಸಿದ್ದಾರೆ. ಈ ಮೂಲಕ ಮಹಿಳಾ ಕ್ರಿಕೆಟ್​ನ ದಂತಕಥೆ ಮಿಥಾಲಿ ರಾಜ್ ಅವರನ್ನು ಹಿಂದಿಕ್ಕಿದರು. ಮಿಥಾಲಿ ರಾಜ್​ 88 ಇನ್ನಿಂಗ್ಸ್‌ಗಳಲ್ಲಿ ಈ ಗಡಿ ದಾಟಿದ್ದರು.

ಕ್ಯಾಂಟರ್​ಬರಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನದ ಪಂದ್ಯದಲ್ಲಿ 40 ರನ್​ ಗಳಿಸಿದ ಮಂಧಾನಾ ಈ ಸಾಧನೆ ಪೂರೈಸಿದರು. ಏಕದಿನದಲ್ಲಿ 43+ ಸರಾಸರಿ ಮತ್ತು 85 ರ ಸ್ಟ್ರೈಕ್ ರೇಟ್‌ ಹೊಂದಿದ್ದಾರೆ.

ಶಿಖರ್​, ಕೊಹ್ಲಿ ಬಳಿಕದ ಪ್ಲೇಯರ್​:ಭಾರತದ ಶಿಖರ್ ಧವನ್ ಮತ್ತು ಬ್ಯಾಟಿಂಗ್​ ಕಿಂಗ್​ ವಿರಾಟ್ ಕೊಹ್ಲಿ ನಂತರ ಸ್ಮೃತಿ ಮಂಧಾನಾ ಕಡಿಮೆ ಇನಿಂಗ್ಸ್​ನಲ್ಲಿ 3 ಸಾವಿರ ರನ್​ ಬಾರಿಸಿದ ಮೂರನೇ ಭಾರತದ ಕ್ರಿಕೆಟರ್​ ಎಂಬ ದಾಖಲೆ ಬರೆದರು. ಧವನ್ 72 ಇನ್ನಿಂಗ್ಸ್‌ಗಳಲ್ಲಿ 3000 ಏಕದಿನ ರನ್‌ಗಳನ್ನು ಪೂರೈಸಿದರೆ, ಕೊಹ್ಲಿ 75 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ವಿಶೇಷ ಅಂದರೆ ಮಂಧಾನಾ ಮತ್ತು ಕೊಹ್ಲಿ ಮಧ್ಯೆ ಒಂದೇ ಇನಿಂಗ್ಸ್​ ಅಂತರವಿದೆ.

2013 ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಎಡಗೈ ಆರಂಭಿಕ ಆಟಗಾರ್ತಿ ಮಂಧಾನಾ 5 ಶತಕಗಳು ಮತ್ತು 24 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಮಾಜಿ ಆಟಗಾರ್ತಿ ಮಿಥಾಲಿ ರಾಜ್ ಮತ್ತು ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಬಳಿಕ 3 ಸಾವಿರ ರನ್‌ ಗಡಿ ದಾಟಿದ ಮೂರನೇ ಭಾರತೀಯ ಮಹಿಳಾ ಆಟಗಾರ್ತಿಯಾಗಿದ್ದಾರೆ.

ಓದಿ:ಮಹಿಳಾ ಏಷ್ಯಾಕಪ್​ನಲ್ಲಿ ಅ. 7ರಂದು ಭಾರತ-ಪಾಕಿಸ್ತಾನ ಫೈಟ್​.. ಟೀಂ ಇಂಡಿಯಾ ಪ್ರಕಟ

ABOUT THE AUTHOR

...view details