ಕರ್ನಾಟಕ

karnataka

'ನಿನ್ನೆ ನಮ್ಮ ದಿನವಲ್ಲ': ಪ್ರಧಾನಿ ಸಾಂತ್ವನ ಹೇಳುತ್ತಿರುವ ಭಾವುಕ ಫೋಟೋ ಹಂಚಿಕೊಂಡ ಶಮಿ

By ETV Bharat Karnataka Team

Published : Nov 20, 2023, 4:55 PM IST

Shami heartbreaking picture with PM Modi: ಭಾನುವಾರ ನಡೆದ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲಿನ ನಂತರ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸಾಂತ್ವನ ಹೇಳಿದ್ದಾರೆ.

mohammed shami
mohammed shami

ಅಹಮದಾಬಾದ್ (ಗುಜರಾತ್)​: ಭಾನುವಾರ ರಾತ್ರಿ ಇಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಆಘಾತಕಾರಿ ಸೋಲಿನ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಂತ್ವನ ಹೇಳುವ ಚಿತ್ರವನ್ನು ಭಾರತದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಹಂಚಿಕೊಂಡಿದ್ದಾರೆ.

"ದುರದೃಷ್ಟವಶಾತ್ ನಿನ್ನೆ ನಮ್ಮ ದಿನವಾಗಿರಲಿಲ್ಲ. ಪಂದ್ಯಾವಳಿ ಉದ್ದಕ್ಕೂ ನಮ್ಮ ತಂಡ ಮತ್ತು ನನ್ನನ್ನು ಬೆಂಬಲಿಸಿದ್ದಕ್ಕಾಗಿ ನಾನು ಎಲ್ಲ ಭಾರತೀಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ವಿಶೇಷವಾಗಿ ಡ್ರೆಸ್ಸಿಂಗ್ ಕೋಣೆಗೆ ಬಂದು ನಮ್ಮ ಉತ್ಸಾಹವನ್ನು ಹೆಚ್ಚಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನಾವು ಮತ್ತೆ ಪುಟಿದೇಳುತ್ತೇವೆ!" ಸೋಮವಾರ ಎಕ್ಸ್​ ಆ್ಯಪ್​ನಲ್ಲಿ ಶಮಿ ಪೋಸ್ಟ್​ ಮಾಡಿದ್ದಾರೆ. ಮೋದಿ ಅಪ್ಪಿಕೊಂಡು ಸಾಂತ್ವನ ಹೇಳುತ್ತಿರುವ ಚಿತ್ರವನ್ನು ಪೋಸ್ಟ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಸ್ಪಿನ್ನರ್ ರವೀಂದ್ರ ಜಡೇಜಾ ಅವರು ಆಟಗಾರರನ್ನು ಪ್ರೇರೇಪಿಸಲು ಪ್ರಧಾನಿ ಮೋದಿ ಭಾರತೀಯ ಡ್ರೆಸ್ಸಿಂಗ್ ಕೋಣೆಗೆ ಭೇಟಿ ನೀಡಿದ ಕ್ಷಣವನ್ನು ಹಂಚಿಕೊಂಡಿದ್ದಾರೆ. "ನಾವು ಉತ್ತಮ ಟೂರ್ನಿಯನ್ನು ಕಳೆದಿದ್ದೇವೆ, ಅದೀಗ ಕೊನೆಗೊಂಡಿದೆ. ನಾವೆಲ್ಲರೂ ಹೃದಯವಿದ್ರಾವಕರಾಗಿದ್ದೇವೆ, ಆದರೆ ನಮ್ಮ ಜನರ ಬೆಂಬಲವು ನಮಗೆ ಧೈರ್ಯ ತಂದಿದೆ. ನಿನ್ನೆ ಡ್ರೆಸ್ಸಿಂಗ್ ಕೋಣೆಗೆ ಪ್ರಧಾನಿ ಮೋದಿ ಅವರ ಭೇಟಿ ವಿಶೇಷ ಮತ್ತು ಬಹಳ ಪ್ರೇರಕವಾಗಿದೆ" ಎಂದು ಜಡೇಜಾ ಬರೆದಕೊಂಡಿದ್ದಾರೆ.

ಸೋಮವಾರ ಮಧ್ಯಾಹ್ನದ ನಂತರ ಪೋಸ್ಟ್​ ಮಾಡಿದ ಗಿಲ್​ 16 ಗಂಟೆ ಕಳೆದರೂ ನೋವು ಕಡಿಮೆ ಆಗಿಲ್ಲ ಎಂದು ಬರೆದುಕೊಂಡಿದ್ದಾರೆ. "ಸುಮಾರು 16 ಗಂಟೆಗಳು ಕಳೆದಿವೆ, ಆದರೆ ಕಳೆದ ರಾತ್ರಿಯಂತೆ ಇನ್ನೂ ನೋವುಂಟುಮಾಡುತ್ತದೆ. ಕೆಲವೊಮ್ಮೆ ಎಲ್ಲ ಪ್ರಯತ್ನ ಮಾಡಿದರೂ ಸಾಕಾಗುವುದಿಲ್ಲ. ನಾವು ನಮ್ಮ ಅಂತಿಮ ಗುರಿಯನ್ನು ಕಳೆದುಕೊಂಡಿದ್ದೇವೆ. ಆದರೆ ಈ ಪ್ರಯಾಣದ ಪ್ರತಿಯೊಂದು ಹೆಜ್ಜೆಯೂ ನಮ್ಮ ತಂಡದ ಉತ್ಸಾಹ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ನಮ್ಮ ಅಭಿಮಾನಿಗಳ ಅಚಲ ಬೆಂಬಲವು ನಮಗೆ ಜಗತ್ತು ಎಂದರ್ಥ. ಇದು ಅಂತ್ಯವಲ್ಲ, ನಾವು ಗೆಲ್ಲುವವರೆಗೂ ಇದು ಮುಗಿಯುವುದಿಲ್ಲ. ಜೈ ಹಿಂದ್ ಎಂದು ಪೋಸ್ಟ್​ ಮಾಡಿದ್ದಾರೆ.

ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ಸೋತ ಭಾರತ ತಂಡಕ್ಕೆ ಪ್ರಧಾನಿ ಮೋದಿ ಬೆಂಬಲದ ಮಾತುಗಳನ್ನು ಆಡಿದರು. "ಪ್ರೀತಿಯ ಟೀಮ್ ಇಂಡಿಯಾ, ವಿಶ್ವಕಪ್ ಮೂಲಕ ನಿಮ್ಮ ಪ್ರತಿಭೆ ಮತ್ತು ದೃಢನಿರ್ಧಾರವು ಗಮನಾರ್ಹವಾಗಿದೆ. ನೀವು ಉತ್ತಮ ಉತ್ಸಾಹದಿಂದ ಆಡಿದ್ದೀರಿ ಮತ್ತು ರಾಷ್ಟ್ರಕ್ಕೆ ಅಪಾರ ಹೆಮ್ಮೆ ತಂದಿದ್ದೀರಿ. ನಾವು ಇಂದು ಮತ್ತು ಯಾವಾಗಲೂ ನಿಮ್ಮೊಂದಿಗೆ ಇರುತ್ತೇವೆ" ಎಂದು ಬರೆದುಕೊಂಡಿದ್ದರು. ಅಲ್ಲದೇ ಫೈನಲ್​ ಪಂದ್ಯ ಮುಗಿದ ನಂತರ ಪ್ರಧಾನಿ ಮೋದಿ ಭಾರತ ತಂಡದ ಡ್ರೆಸ್ಸಿಂಗ್​ ರೂಮ್​ಗೆ ತೆರಳಿ ಪ್ರತಿಯೊಬ್ಬರಿಗೂ ಸಾಂತ್ವನದ ಮಾತುಗಳನ್ನು ಆಡಿದ್ದಾರೆ.

ಇದನ್ನೂ ಓದಿ:ವಿಶ್ವಕಪ್​ನಲ್ಲಿ ಮರೆಯಲಾಗದು ಕನ್ನಡಿಗ ರಾಹುಲ್​ ಆಟ: ಸೋತರೂ ದಾಖಲೆ ಗೌಣವಲ್ಲ

ABOUT THE AUTHOR

...view details