ನ್ಯೂಜಿಲ್ಯಾಂಡ್:ಮುಂದಿನ ತಿಂಗಳಿಂದ ಆರಂಭಗೊಳ್ಳಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೋಸ್ಕರ ನ್ಯೂಜಿಲ್ಯಾಂಡ್ ತಂಡ ಪ್ರಕಟವಾಗಿದೆ. 15 ಸದಸ್ಯರ ಬಳಗದಲ್ಲಿ ಅನುಭವಿ ಆಟಗಾರ ಮಾರ್ಟಿನ್ ಗಪ್ಟಿಲ್ಗೆ ಮಣೆ ಹಾಕಲಾಗಿದೆ. ಈ ಮೂಲಕ ಕಿವೀಸ್ ಆಟಗಾರ ವಿಶ್ವಕಪ್ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ನಾಥನ್ ಮೆಕಲಮ್ ಹಾಗೂ ರಾಸ್ ಟೇಲರ್ ಈಗಾಗಲೇ ದಾಖಲೆಯ 6ನೇ ಸಲ ವಿಶ್ವಕಪ್ನಲ್ಲಿ ಭಾಗಿಯಾಗಿದ್ದರು. 35 ವರ್ಷದ ಗಪ್ಟಿಲ್ ಜೊತೆಗೆ ಉದಯೋನ್ಮುಖ ಆಟಗಾರರಾದ ಫಿನ್ ಅಲೆನ್, ಮಿಚೆಲ್ ಬ್ರಾಚ್ವೆಲ್ಗೆ ಚೊಚ್ಚಲ ಅವಕಾಶ ದೊರೆತಿದೆ.
ವಿಶ್ವಕಪ್ಗೆ ನ್ಯೂಜಿಲ್ಯಾಂಡ್ ತಂಡ ಹೀಗಿದೆ:ಕೇನ್ ವಿಲಿಯಮ್ಸನ್(ಕ್ಯಾಪ್ಟನ್), ಫಿನ್ ಅಲೆನ್, ಟ್ರೆಂಟ್ ಬೌಲ್ಟ್, ಮಿಚೆಲ್ ಬ್ರಾಚ್ವೆಲ್, ಮಾರ್ಕ್ ಚಾಂಪನ್, ಡ್ವೇನ್ ಕಾನ್ವೆ, ಲೂಕಿ ಫರ್ಗ್ಯೂಸನ್,ಮಾರ್ಟಿಲ್ ಗಫ್ಟಿಲ್, ಆ್ಯಡಂ ಮಿಲ್ನೆ, ಡ್ರಾಲ್ ಮಿಚೆಲ್, ಜಿಮಿ ನಿಶಾಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ ಹಾಗೂ ಥಿಮ್ ಸೌಥಿ