ಕರ್ನಾಟಕ

karnataka

ಕೊಹ್ಲಿ ಒಬ್ಬ ಲೀಡರ್​, ಫ್ರಾಂಚೈಸಿಗೆ ಅವರ ಕೊಡುಗೆ ಅಪಾರ: ಹರ್ಷಲ್ ಪಟೇಲ್

By

Published : Oct 12, 2021, 5:48 PM IST

ಆರ್​ಸಿಬಿ ನಾಯಕನಾಗಿ ಕೊಹ್ಲಿ ತಮ್ಮ ಕೊನೆಯ ಪಂದ್ಯವನ್ನಾಡಿದ್ದಾರೆ. ಆದರೆ 9 ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದರೂ ಒಮ್ಮೆಯೂ ತಂಡವನ್ನು ಚಾಂಪಿಯನ್​ಪಟ್ಟಕ್ಕೇರಿಸುವಲ್ಲಿ ಅವರು ವಿಫಲರಾದರು. ಆದರೂ ಕೊಹ್ಲಿ ಒಬ್ಬ ಬ್ಯಾಟರ್​ ಆಗಿ ತಂಡಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ.

Kohli is a leader, team will celebrate his contributions: Harshal Patel
ಹರ್ಷಲ್ ಪಟೇಲ್

ಶಾರ್ಜಾ: ವಿರಾಟ್​ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14ನೇ ಆವೃತ್ತಿಯಲ್ಲೂ ಟ್ರೋಫಿ ವಂಚಿತರಾಗಿ ಟೂರ್ನಿಯಿಂದ ಹೊರಬಿದ್ದಿದೆ. ಆದರೆ, ಇಷ್ಟು ವರ್ಷಗಳ ಕಾಲ ನಾಯಕನಾಗಿ ಅವರ ಕೊಡುಗೆಯನ್ನು ಫ್ರಾಂಚೈಸಿ ಸ್ಮರಿಸಿಕೊಳ್ಳಲಿದೆ ಎಂದು ವೇಗಿ ಹರ್ಷಲ್ ಪಟೇಲ್ ಹೇಳಿದ್ದಾರೆ.

ಆರ್​ಸಿಬಿ ನಾಯಕನಾಗಿ ಕೊಹ್ಲಿ ತಮ್ಮ ಕೊನೆಯ ಪಂದ್ಯವನ್ನಾಡಿದ್ದಾರೆ. ಆದರೆ, 9 ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದರೂ ಒಮ್ಮೆಯೂ ತಂಡವನ್ನು ಚಾಂಪಿಯನ್​ಪಟ್ಟಕ್ಕೇರಿಸುವಲ್ಲಿ ಅವರು ವಿಫಲರಾದರು. ಆದರೂ ಕೊಹ್ಲಿ ಒಬ್ಬ ಬ್ಯಾಟರ್​ ಆಗಿ ತಂಡಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ.

" ನಾಯಕತ್ವ ಎಂದರೆ ಅಲ್ಲಿ ನಾಯಕರಿರುತ್ತಾರೆ ಮತ್ತು ಲೀಡರ್​ಗಳು ಇರುತ್ತಾರೆ. ಆದರೆ, ಕೊಹ್ಲಿ ಕೇವಲ ನಾಯಕ ಮಾತ್ರವಲ್ಲ, ಒಬ್ಬ ನಿಜವಾದ ಲೀಡರ್​. ಅವರಿಗೆ ನಾಯಕತ್ವದ ಟ್ಯಾಗ್​ ಇಲ್ಲ ಎಂಬ ಕಾರಣದಿಂದ, ಅವರನ್ನು ಲೀಡರ್​ಗಿಂತ ಕಡಿಮೆಯಾಗಿ ನೋಡಲು ಸಾಧ್ಯವಿಲ್ಲ. ಹಾಗಾಗಿ, ಅವರು ಈ ತಂಡಕ್ಕೆ ನೀಡಿದ ಕೊಡುಗೆ ಮತ್ತು ನನ್ನ ಬೆಳವಣಿಗೆಗೆ ನೆರವಾಗಿರುವುದಕ್ಕೆ ಧನ್ಯವಾದ ಅರ್ಪಿಸಲು ಇಷ್ಟಪಡುತ್ತೇನೆ" ಎಂದು ಹರ್ಷಲ್ ಪಟೇಲ್ ಕೆಕೆಆರ್ ವಿರುದ್ಧ ಎಲಿಮಿನೇಟರ್​ ಪಂದ್ಯದಲ್ಲಿ ಸೋಲಿನ ಬಳಿಕ ನಾಯಕನನ್ನು ಗುಣಗಾನ ಮಾಡಿದ್ದಾರೆ.

ತಂಡಕ್ಕೆ ಅವರ ಕೊಡುಗೆ ಅಪಾರವಾಗಿದೆ. ಟ್ರೋಪಿಯೊಂದಿಗೆ ಅವರ ಕೊಡುಗೆಯನ್ನು ಸ್ಮರಿಸಿಕೊಳ್ಳಲು ಬಯಸಿದ್ದೆವು. ಆದರೆ, ಅದು ಸಾಧ್ಯವಾಗಲಿಲ್ಲ. ಟ್ರೋಪಿ ಗೆಲ್ಲಲಾಗಲಿಲ್ಲ ಎಂದ ಕಾರಣಕ್ಕೆ ಅವರು ಇಷ್ಟು ವರ್ಷಗಳ ಕಾಲ ತಂಡಕ್ಕಾಗಿ ಪಟ್ಟಿರುವ ಶ್ರಮ ವ್ಯರ್ಥವಾಗುವುದಿಲ್ಲ, ಅದನ್ನು ಇಡೀ ತಂಡ ಸದಾಕಾಲ ಸ್ಮರಿಸಿಕೊಳ್ಳುತ್ತದೆ ಎಂದಿದ್ದಾರೆ.

ಬ್ರಾವೋ ದಾಖಲೆ ಸರಿಗಟ್ಟಿದ ಪಟೇಲ್

ಇನ್ನು 2021ರ ಆವೃತ್ತಿಯಲ್ಲಿ 15 ಪಂದ್ಯಗಳಿಂದ 32 ವಿಕೆಟ್ ಪಡೆಯುವ ಮೂಲಕ ಹರ್ಷಲ್ ಪಟೇಲ್ ಐಪಿಎಲ್​ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಗರಿಷ್ಠ ವಿಕೆಟ್​ ಪಡೆದ ಭಾರತೀಯ ಎಂಬ ದಾಖಲೆಗೆ ಪಾತ್ರರಾದರು. ಜೊತೆಗೆ ಗರಿಷ್ಠ ವಿಕೆಟ್ ಪಡೆದ ದಾಖಲೆಯನ್ನು ಸಿಎಸ್​ಕೆ ತಂಡದ ಡ್ವೇನ್ ಬ್ರಾವೊ ಅವರ ದಾಖಲೆಯನ್ನು ಸರಿಗಟ್ಟಿದರು.

ಇದನ್ನು ಓದಿ:ಮತ್ತೊಂದು ವೈಫಲ್ಯದೊಂದಿಗೆ ಕೊಹ್ಲಿ ನಾಯಕತ್ವ ಅಂತ್ಯ.. ಆರ್​ಸಿಬಿಯ ಮುಂದಿದೆ ಬಲಿಷ್ಠ ತಂಡ ಕಟ್ಟುವ ಸವಾಲು..

ABOUT THE AUTHOR

...view details