ಕರ್ನಾಟಕ

karnataka

ಚೆನ್ನೈ ವಿರುದ್ಧದ ಸೋಲಿಗೆ ಮಧ್ಯಮ ಕ್ರಮಾಂಕವೇ ಕಾರಣ: ಕೆಕೆಆರ್ ಕೋಚ್ ಮೆಕಲಮ್

By

Published : Oct 16, 2021, 1:59 PM IST

mccullum

ಧೋನಿ ಬಳಗದ ವಿರುದ್ಧ ಫೈನಲ್ ಹಣಾಹಣಿಯಲ್ಲಿ ಸೋಲೊಪ್ಪಿಕೊಂಡ ಕೆಕೆಆರ್ ಮೂರನೆ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಎಡುವಿದೆ. ಪಂದ್ಯದ ಬಳಿಕ ಸೋಲಿಗೆ ಕಾರಣ ತಿಳಿಸಿರುವ ಕೋಚ್ ಮೆಕಲಮ್​, ತಂಡದ ಮಧ್ಯಮ ಕ್ರಮಾಂಕದ ಪತನ ಸೋಲಿಗೆ ಹೊಣೆ ಎಂದಿದ್ದಾರೆ.

ದುಬೈ: ನಿನ್ನೆ ನಡೆದ ಕೋಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ಕೆಕೆಆರ್ ಮುಗ್ಗರಿಸಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ತಂಡ ಆರಂಭದಲ್ಲಿ ಉತ್ತಮ ಬ್ಯಾಟಿಂಗ್​ ನಡೆಸಿ ಧೋನಿ ಬಳಗಕ್ಕೆ ತಕ್ಕ ಉತ್ತರ ನೀಡಿತ್ತಾದರೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ತಂಡದ ಸೋಲಿಗೆ ಕಾರಣವಾಗಿದೆ.

ಈ ಕುರಿತು ಮಾತನಾಡಿರುವ ಕೆಕೆಆರ್ ತಂಡದ ಮುಖ್ಯ ತರಬೇತುದಾರ ಬ್ರೆಂಡನ್ ಮೆಕಲಮ್​, ಕೆಕೆಆರ್​ಗಿಂತಲೂ ಚೆನ್ನೈ ಉತ್ತಮ ಪ್ರದರ್ಶನ ನೀಡಿತು. ಕೆಕೆಆರ್​ ತಂಡದ ಮಧ್ಯಮ ಕ್ರಮಾಂಕದ ಕುಸಿತ ಪಂದ್ಯದ ಸೋಲಿಗೆ ಕಾರಣವಾಯಿತು ಎಂದಿದ್ದಾರೆ.

ಜೊತೆ ಆಂಡ್ರೆ ರಸೆಲ್​ ತಂಡದಿಂದ ಹೊರಗುಳಿದಿದಕ್ಕೆ ಸ್ಪಷ್ಟನೆ ನೀಡಿದ ಅವರು, ಫಿಟ್​ನೆಸ್​ ಕಾರಣದಿಂದಾಗಿ ಹಾಗೂ ಅವರಿಗೆ ತೊಡೆ ಭಾಗದ ಗಾಯದಿಂದಾಗಿ ಅಭ್ಯಾಸಕ್ಕಿಳಿದರೂ ಆಡುವ 11ರ ಬಳಗಲದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ನಾವು ಕಡಿಮೆ ಮೊತ್ತಕ್ಕೆ ಕುಸಿದಿದ್ದಕ್ಕೆ ನಾಚಿಕೆಯಾಗುತ್ತದೆ. ಬಲಿಷ್ಠ ಸಿಎಸ್​ಕೆ ತಂಡದ ವಿರುದ್ಧ ಕಳಪೆ ಪ್ರದರ್ಶನ ನೀಡಿದೆವು ಎಂದು ಪಂದ್ಯದ ಬಳಿಕ ಬೇಸರ ವ್ಯಕ್ತಪಡಿಸಿದರು. ನಮ್ಮ ಬೌಲಿಂಗ್ ತಂಡ ಉತ್ತಮ ಪ್ರದರ್ಶನ ನೀಡಿತು. ಜೊತೆಗೆ ಫೀಲ್ಡಿಂಗ್​​ನಲ್ಲೂ ಉತ್ತಮವಾಗಿತ್ತು, ಬ್ಯಾಟಿಂಗ್ ವಿಚಾರಕ್ಕೆ ಬಂದಾಗ ಆರಂಭಿಕರು ಪಂದ್ಯದ ಆರಂಭದಲ್ಲೇ ಸ್ಕೋರ್ ಹೆಚ್ಚಿಸಿದ್ದರು. ಆದರೆ, ಮಧ್ಯಮ ಕ್ರಮಾಂಕ ಕುಸಿತದಿಂದ ಗೆಲುವು ದೂರಾಯಿತು ಎಂದು ವಿಶ್ಲೇಷಣೆ ಮಾಡಿದರು.

ಆದರೆ ಮತ್ತೊಮ್ಮೆ ನಾನು ತಂಡದ ಪ್ರಯತ್ನಗಳಿಗಾಗಿ ಎಲ್ಲ ಆಟಗಾರರ ಬಗ್ಗೆ ಹೆಮ್ಮೆ ಪಡುತ್ತೇನೆ. ನಾವು ಖಂಡಿತ ನಮ್ಮ ತಲೆಯನ್ನ ಎತ್ತಿಕೊಂಡು ಹೊರ ಹೋಗುತ್ತಿದ್ದೇವೆ. ದುರಾದೃಷ್ಟವಶಾತ್ ಕೊನೆಯ ಪಂದ್ಯಗಳಲ್ಲಿ ತಂಡಕ್ಕೆ ಗಾಯಾಳು ಸಮಸ್ಯೆ ಕಾಡಿತು ಎಂದು ಸೋಲಿಗೆ ಸಮರ್ಥನೆ ನೀಡಿದರು.

ಇದನ್ನೂ ಓದಿ:ನಾವು ಫೈನಲ್​​​ನಲ್ಲಿ ತೋರಿದ ಪ್ರದರ್ಶನಕ್ಕೆ ಹೆಮ್ಮೆಯಿದೆ: ಕೆಕೆಆರ್​ ನಾಯಕ ಮಾರ್ಗನ್

ABOUT THE AUTHOR

...view details