ಕರ್ನಾಟಕ

karnataka

IPL ಟೂರ್ನಿ ಪ್ರಸಾರದ ಹಕ್ಕು ಮಾರಾಟ: ರೇಸ್​​ನಿಂದ ಅಮೆಜಾನ್​ ಔಟ್​​.. ಸ್ಪರ್ಧೆಯಲ್ಲಿ ಸೋನಿ, ಸ್ಟಾರ್​​

By

Published : Jun 11, 2022, 2:48 PM IST

IPL Media Rights Explained

2023ರಿಂದ 2027ರ ಐಪಿಎಲ್ ಪಂದ್ಯಗಳ ಪ್ರಸಾರದ ಹಕ್ಕು ಮಾರಾಟ ಪ್ರಕ್ರಿಯೆ ನಾಳೆ, ನಾಡಿದ್ದು ನಡೆಯಲಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಪ್ರಸಾರದ ಹಕ್ಕು ದೊಡ್ಡ ಮೊತ್ತಕ್ಕೆ ಸೇಲ್​ ಆಗುವ ಸಾಧ್ಯತೆ ದಟ್ಟವಾಗಿದೆ.

ನವದೆಹಲಿ:ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್​ ಐಪಿಎಲ್​​ನ ಮುಂದಿನ ಐದು ವರ್ಷಗಳ ಪ್ರಸಾರದ ಹಕ್ಕು ಮಾರಾಟದ ಪ್ರಕ್ರಿಯೆ ನಾಳೆ-ನಾಡಿದ್ದು ನಡೆಯಲಿದೆ. ಈ ರೇಸ್​​ನಿಂದ ಈಗಾಗಲೇ ಅಮೆಜಾನ್​ ಹೊರಬಿದ್ದಿದೆ. ಸದ್ಯ ಸೋನಿ, ಸ್ಟಾರ್​, ಜೀ ಸೇರಿದಂತೆ ಕೆಲವೊಂದು ಕಂಪನಿಗಳು ಸ್ಪರ್ಧೆಯಲ್ಲಿವೆ. ಭಾರತೀಯ ಕ್ರಿಕೆಟ್ ಮಂಡಳಿ ಇ-ಹರಾಜು ಮೂಲಕ ಪ್ರಸಾರದ ಹಕ್ಕು ಮಾರಾಟ ಮಾಡಲಿದ್ದು, ಈ ರೇಸ್​​ನಿಂದ ಇ-ಕಾಮರ್ಸ್​ ದೈತ್ಯ ಕಂಪನಿ ಅಮೆಜಾನ್​ ಹೊರಬಿದ್ದಿದೆ ಎಂದು ಬಿಸಿಸಿಐ ತಿಳಿಸಿದೆ.

ಇದೀಗ ರೇಸ್​ನಲ್ಲಿ ಸ್ಟಾರ್​ ಇಂಡಿಯಾ, ಜೀ ಎಂಟರ್​ಟೈನ್​ಮೆಂಟ್, ರಿಲಯನ್ಸ್​​ Viacom18, ಸೋನಿ ಗ್ರೂಪ್​, ಡ್ರಿಮ್​​ 11, ಆ್ಯಪಲ್​ ಇನ್​, ಸೂಪರ್​ ಸ್ಪೋರ್ಟ್ಸ್​​ ಭಾಗಿಯಾಗಲಿವೆ. 2017ರ ಬಿಡ್ಡಿಂಗ್​ ವೇಳೆ 16,347 ಕೋಟಿ ರೂಪಾಯಿ ನೀಡುವ ಮೂಲಕ ಸ್ಟಾರ್​ ಇಂಡಿಯಾ ಹಕ್ಕು ಖರೀದಿಸಿತ್ತು. ಈ ಸಲದ ಮೂಲ ಬೆಲೆ 32,890 ಕೋಟಿ ರೂಪಾಯಿ ಆಗಿದ್ದು, ಮೂಲಗಳ ಪ್ರಕಾರ ಬಿಡ್ಡಿಂಗ್​ 45,000 ಕೋಟಿ ರೂ. ಗಡಿ ದಾಟುವ ಸಾಧ್ಯತೆ ಇದೆ.

ಇದನ್ನೂ ಓದಿ:ಹಾರ್ದಿಕ್ ಪಾಂಡ್ಯ ತಂಡಕ್ಕೆ ಕಮ್​​ಬ್ಯಾಕ್ ಮಾಡಿದ್ದು ರೋಚಕ.. 4 ತಿಂಗಳ ಕಾಲ ಬೆಳಗ್ಗೆ 5 ಗಂಟೆಗೆ ಎದ್ದು ತರಬೇತಿ

ನಾಳೆ-ನಾಡಿದ್ದು ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ 2023-27ರ ಅವಧಿಯ ಐಪಿಎಲ್ ಪ್ರಸಾರದ ಹಕ್ಕು ಪಡೆಯಲು ಬಿಡ್​ ನಡೆಸಲಿದೆ. ಟಿವಿ ಹಕ್ಕು ಮೂಲ ಬೆಲೆಗಿಂತ ಕನಿಷ್ಠ ಶೇ.20ರಿಂದ 25ರಷ್ಟು ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗುವ ನಿರೀಕ್ಷೆ ಇದ್ದು, ಡಿಜಿಟಲ್‌ ಹಕ್ಕು ಇನ್ನೂ ಹೆಚ್ಚಿನ ಮೊತ್ತಕ್ಕೆ ಹರಾಜಾಗಲಿದೆ ಎಂದು ತಿಳಿದುಬಂದಿದೆ. 2023-2027ರ ಅವಧಿಯಲ್ಲಿ ಆರಂಭದಲ್ಲಿ 74 ಪಂದ್ಯಗಳು ನಡೆಯಲಿದ್ದು, ನಂತರ ಇದನ್ನ 94 ಪಂದ್ಯಗಳಿಗೆ ಏರಿಕೆ ಮಾಡುವ ನಿರೀಕ್ಷೆ ಬಿಸಿಸಿಐ ಮುಂದಿದೆ.

ABOUT THE AUTHOR

...view details