ಕರ್ನಾಟಕ

karnataka

ಆರು ವರ್ಷಗಳ ಬಳಿಕ ಈ ಮೈದಾನದಲ್ಲಿ ಮೊದಲ ಏಕದಿನ ಪಂದ್ಯ.. ಈ ಮ್ಯಾಚ್​ ಗೆದ್ದು ಅಗ್ರಸ್ಥಾನಕ್ಕೇರುವುದೇ ಭಾರತ!

By

Published : Jan 23, 2023, 1:46 PM IST

India and new Zealand third odi  cricket stars reached Indore  cricket stars reached Indore stadium this morning  India and new Zealand third odi news  India and new Zealand third odi 2023  ಈ ಮೈದಾನದಲ್ಲಿ ಮೊದಲ ಏಕದಿನ ಪಂದ್ಯ  ಮ್ಯಾಚ್​ ಗೆದ್ದು ಅಗ್ರಸ್ಥಾನಕ್ಕೇರುವುದೇ ಭಾರತ  ಭಾರತ ನ್ಯೂಜಿಲೆಂಡ್ ಮೂರನೇ ಏಕದಿನ ಪಂದ್ಯ  ಕ್ರಿಕೆಟ್ ತಾರೆಯರು ಮೈದಾನಕ್ಕೆ  ಏಕದಿನ ಸರಣಿಯ ಮೂರನೇ ಪಂದ್ಯ  ಹೋಳ್ಕರ್ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡ  ಭಾರತ ತಂಡಕ್ಕೆ ನಂಬರ್ ಒನ್ ಆಗುವ ಅವಕಾಶ  ಸಂಜೆ ಭಾರತ ತಂಡ ಅಭ್ಯಾಸ  ಜಾಹೀರಾತಿನ ಚಿತ್ರೀಕರಣಕ್ಕೆ ಬೇಗ ಬಂದ ವಿರಾಟ್  ಇಂದೋರ್‌ನಲ್ಲಿ ನಿತಿನ್ ಮೆನನ್ ಆನ್ ಫೀಲ್ಡ್ ಅಂಪೈರ್

ಭಾರತ ನ್ಯೂಜಿಲ್ಯಾಂಡ್​ ಮೂರನೇ ಏಕದಿನ ಪಂದ್ಯಕ್ಕೆ ಇಂದೋರ್​ ಸ್ಟೇಡಿಯಂ ಸಜ್ಜಾಗಿದ್ದು, ಇಂದು ಬೆಳಗ್ಗೆ ಕ್ರಿಕೆಟ್ ತಾರೆಯರು ಮೈದಾನಕ್ಕೆ ತಲುಪಿದ್ದಾರೆ. ನಾಳೆ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳ ಲೆಕ್ಕಾಚಾರವನ್ನು ತಿಳಿಯೋಣಾ ಬನ್ನಿ..

ಇಂದೋರ್, ಮಧ್ಯಪ್ರದೇಶ: ಏಕದಿನ ಸರಣಿಯ ಮೂರನೇ ಪಂದ್ಯವನ್ನು ಆಡಲು ಕ್ರಿಕೆಟ್‌ನ ಸ್ಟಾರ್ ಆಟಗಾರರು ಭಾನುವಾರ ಇಂದೋರ್ ತಲುಪಿದ್ದಾರೆ. ಮಂಗಳವಾರ ಹೋಳ್ಕರ್ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್​​ ತಂಡಗಳು ಮುಖಾಮುಖಿಯಾಗಲಿವೆ. ಜನವರಿ 24 ರಂದು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಭಾನುವಾರ ಮಧ್ಯಾಹ್ನ ಎರಡೂ ತಂಡಗಳು ರಾಯ್‌ಪುರದಿಂದ ವಿಶೇಷ ವಿಮಾನದ ಮೂಲಕ ಇಂದೋರ್ ತಲುಪಿದವು. ವಿಮಾನ ನಿಲ್ದಾಣದ ಎರಡೂ ತಂಡಗಳು ವಿಐಪಿ ಬಸ್ ಹತ್ತಿ ನೇರವಾಗಿ ಹೋಟೆಲ್ ತಲುಪಿದವು. ಭಾರತೀಯ ತಂಡವು ಹೋಟೆಲ್ ರಾಡಿಸನ್ ಮತ್ತು ನ್ಯೂಜಿಲ್ಯಾಂಡ್​ ತಂಡ ಮ್ಯಾರಿಯಟ್ ಹೋಟೆಲ್ ತಲುಪಿತು. ಭಾರತೀಯ ತಂಡದ ಆಟಗಾರರನ್ನು ವೀಕ್ಷಿಸಲು ಹೊಟೇಲ್‌ನ ಹೊರಗೆ ಅಪಾರ ಸಂಖ್ಯೆಯ ಜನರು ಜಮಾಯಿಸಿದ್ದರು. ಆದರೆ, ಬಸ್‌ಗಳು ನೇರವಾಗಿ ಹೋಟೆಲ್‌ಗೆ ಪ್ರವೇಶಿಸಿದ್ದರಿಂದ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತು.

ಮಧ್ಯಾಹ್ನ ನ್ಯೂಜಿಲ್ಯಾಂಡ್​, ಸಂಜೆ ಭಾರತ ತಂಡ ಅಭ್ಯಾಸ:ಮೂರನೇ ಏಕದಿನ ಪಂದ್ಯಕ್ಕೂ ಮೊದಲ ಸೋಮವಾರದಂದು ಎರಡೂ ತಂಡಗಳು ಹೋಳ್ಕರ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲಿವೆ. ನ್ಯೂಜಿಲ್ಯಾಂಡ್​ ತಂಡ ಮಧ್ಯಾಹ್ನ 1ರಿಂದ 4ರವರೆಗೆ ಅಭ್ಯಾಸ ನಡೆಸಿದರೆ, ಭಾರತ ತಂಡ ಸಂಜೆ 5 ರಿಂದ 8ರವರೆಗೆ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದೆ. ಆರು ವರ್ಷಗಳ ನಂತರ ಹೋಳ್ಕರ್ ಕ್ರೀಡಾಂಗಣದಲ್ಲಿ ಏಕದಿನ ಪಂದ್ಯ ನಡೆಯಲಿದೆ. ಭಾರತ ಮತ್ತು ನ್ಯೂಜಿಲ್ಯಾಂಡ್​​ ತಂಡಗಳು ಇದುವರೆಗೆ ಇಂದೋರ್‌ನಲ್ಲಿ 1 ಟೆಸ್ಟ್ ಮತ್ತು 2 ಏಕದಿನ ಪಂದ್ಯಗಳನ್ನು ಆಡಿವೆ. ಇದುವರೆಗೆ ಇಂದೋರ್‌ನಲ್ಲಿ ನ್ಯೂಜಿಲ್ಯಾಂಡ್​ ತಂಡಕ್ಕೆ ಗೆಲ್ಲುವ ಭಾಗ್ಯ ಸಿಕ್ಕಿಲ್ಲ.

ಭಾರತ ತಂಡಕ್ಕೆ ನಂಬರ್ ಒನ್ ಆಗುವ ಅವಕಾಶ:ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗವಹಿಸಲು ಬಂದಿದ್ದ ಕಿವೀಸ್ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯವನ್ನು ಸೋತರೆ ವಿಶ್ವದ ನಂಬರ್ ಒನ್ ಏಕದಿನ ತಂಡವಾಗಿ ಹೊರಹೊಮ್ಮುತ್ತದೆ. ಎರಡನೇ ಏಕದಿನ ಪಂದ್ಯದ ಗೆಲುವಿನೊಂದಿಗೆ ಟೀಂ ಇಂಡಿಯಾ 113 ಅಂಕಗಳೊಂದಿಗೆ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್​ಗೆ ಸರಿಸಮಾನವಾಗಿದೆ. ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯವನ್ನು ಗೆದ್ದ ನಂತರ, ರೋಹಿತ್ ಶರ್ಮಾ ನೇತೃತ್ವದ ತಂಡ ಈಗ T20 ನಂತರ ಏಕದಿನದಲ್ಲಿ ವಿಶ್ವದ ನಂಬರ್ ಒನ್ ತಂಡವಾಗಿ ಹೊರಹೊಮ್ಮಲಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡ ಮೂರನೇ ಪಂದ್ಯವನ್ನು ಹಗುರವಾಗಿ ಪರಿಗಣಿಸುವುದಿಲ್ಲ.

ಜಾಹೀರಾತಿನ ಚಿತ್ರೀಕರಣಕ್ಕೆ ಬೇಗ ಬಂದ ವಿರಾಟ್: ವಿರಾಟ್ ಕೊಹ್ಲಿ ಭಾರತ ತಂಡದೊಂದಿಗೆ ಬಾರದೆ ಇಂದು ಮುಂಜಾನೆ 11 ಗಂಟೆಗೆ ಇಂದೋರ್ ತಲುಪಿದ್ದರು. ಮೊಬೈಲ್ ಕಂಪನಿಯೊಂದರ ಜಾಹೀರಾತಿಗಾಗಿ ಅವರು ಇಂದೋರ್‌ಗೆ ಬೇಗ ತಲುಪಿದ್ದರು ಎಂದು ಹೇಳಲಾಗುತ್ತಿದೆ. ಎರಡು ದಿನಗಳ ಕಾಲ ಹೋಟೆಲ್‌ನಲ್ಲಿ ಮಾತ್ರ ಜಾಹೀರಾತನ್ನು ಶೂಟ್ ನಡೆಯಲಿದ್ದು, ಚಿತ್ರೀಕರಣಕ್ಕೆ ಸ್ಥಳೀಯ ನಟರನ್ನೂ ಕರೆಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಇಂದೋರ್‌ನಲ್ಲಿ ನಿತಿನ್ ಮೆನನ್ ಆನ್ - ಫೀಲ್ಡ್ ಅಂಪೈರ್:ಮಂಗಳವಾರ ನಡೆಯಲಿರುವ ಕೊನೆಯ ಏಕದಿನ ಪಂದ್ಯಕ್ಕೆ ಇಂದೋರ್‌ನ ನಿತಿನ್ ಮೆನನ್ ಅವರನ್ನು ಆನ್ ಫೀಲ್ಡ್ ಅಂಪೈರ್ ಆಗಿ ಬಿಸಿಸಿಐ ನೇಮಿಸಿದೆ. ನಗರದಲ್ಲಿ 40 ವರ್ಷಗಳಲ್ಲಿ ಮೊದಲ ಬಾರಿಗೆ ಇಂದೋರ್​ ಅಂಪೈರ್​ವೊಬ್ಬರನ್ನು ತಮ್ಮ ತವರು ಮೈದಾನದಲ್ಲಿ ಅಂತರಾಷ್ಟ್ರೀಯ ODI ಪಂದ್ಯಕ್ಕೆ ಅಂಪೈರಿಂಗ್ ಮಾಡುವುದನ್ನು ಕಾಣಬಹುದಾಗಿದೆ.

ಓದಿ:ಕನ್ನಡಿಗ ಕೆಎಲ್​ ರಾಹುಲ್​ ಜೊತೆ ಇಂದು ಅಥಿಯಾ ಕಲ್ಯಾಣ..

ABOUT THE AUTHOR

...view details