ಕರ್ನಾಟಕ

karnataka

ನಿವೃತ್ತಿಯ ಬಳಿಕ ಕೊಕೇನ್‌ಗೆ ವ್ಯಸನಿಯಾಗಿದ್ದೆ, ಪತ್ನಿ ಸಾವಿನ ಬಳಿಕ ತ್ಯಜಿಸಿದೆ: ವಾಸಿಂ ಅಕ್ರಂ

By

Published : Oct 30, 2022, 7:23 AM IST

ಮೈದಾನದಲ್ಲಿ ತಮ್ಮ ವೇಗದಿಂದಲೇ ಬ್ಯಾಟರ್​ಗಳ ನಿದ್ದೆಗೆಡಿಸಿದ್ದ ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಂ ಕ್ರಿಕೆಟ್​ನಿಂದ ನಿವೃತ್ತರಾದ ಬಳಿಕ ಡ್ರಗ್ಸ್​ ದಾಸನಾದ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ಮುಂಬರುವ ಆತ್ಮಚರಿತ್ರೆಯಲ್ಲಿ ಈ ಬಗ್ಗೆ ದಾಖಲಿಸಿದ್ದಾರೆ.

Cricketer Wasim Akram on Drug addiction
ವಾಸಿಂ ಅಕ್ರಮ್

ನವದೆಹಲಿ:ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಂ ಅವರು ಕ್ರಿಕೆಟ್​ನಿಂದ ನಿವೃತ್ತಿಯಾದ ಬಳಿಕ ಸಂಪೂರ್ಣವಾಗಿ ಡ್ರಗ್ಸ್​ ವ್ಯಸನಿಯಾಗಿದ್ದರು. ಮೊದಲ ಪತ್ನಿಯ ಸಾವಿನ ಬಳಿಕ ಈ ಚಟವನ್ನು ತ್ಯಜಿಸಿದರಂತೆ. ಇದನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ. ಮುಂಬರುವ ತಮ್ಮ ಆತ್ಮಚರಿತ್ರೆಯಾದ "ಸುಲ್ತಾನ್​ ಎ ಮೆಮೊಯಿರ್​"ನಲ್ಲಿ ಈ ಬಗ್ಗೆ ವಿವರಿಸಿದ್ದಾರೆ.

2003 ರಲ್ಲಿ ಪಾಕಿಸ್ತಾನ ವಿಶ್ವಕಪ್​ನಲ್ಲಿ ಕಳಪೆ ಆಟ ಪ್ರದರ್ಶಿಸಿದ ಬಳಿಕ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದ ಅಕ್ರಂ, ತಲೆನೋವು ಮತ್ತು ಮೂಡ್​ಸ್ವಿಂಗ್​ ಬಾಧೆಗೆ ಒಳಗಾಗಿದ್ದರು. ಇದರಿಂದ ಪರಿಹಾರ ಕಂಡುಕೊಳ್ಳಲು ಡ್ರಗ್ಸ್​ ವ್ಯಸನಕ್ಕೆ ತುತ್ತಾಗಿದ್ದೆ ಎಂದು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಕೊಕೇನ್​ಗೆ ಶರಣಾಗಿದ್ದ ಕ್ರಿಕೆಟಿಗ ಅದನ್ನು ವಿಪರೀತವಾಗಿ ಸೇವಿಸುತ್ತಿದ್ದರು. ಇದರಿಂದ ನೋವು ಮರೆಯುತ್ತಿದ್ದೆ. ಮಾದಕ ದ್ರವ್ಯ​ ಸೇವಿಸಿಯೇ ಕಾರ್ಯಕ್ರಮಗಳಿಗೂ ಭಾಗಿಯಾಗುತ್ತಿದ್ದೆ ಎಂದೂ ಪುಸ್ತಕದಲ್ಲಿ ಅಕ್ರಂ ಬಹಿರಂಗಪಡಿಸಿದ್ದಾರೆ.

ಈ ಮಾದಕ ದ್ರವ್ಯವನ್ನು​ ಆರಂಭದಲ್ಲಿ ಒಂದು ಪಾಕೆಟ್​ ಸೇವಿಸುತ್ತಿದ್ದೆ. ಬಳಿಕ ಅದು ಎರಡಾಯಿತು. ಎರಡರಿಂದ ಒಂದು ಗ್ರಾಂ. ಬಳಿಕ ಎರಡು ಗ್ರಾಂ ಡ್ರಗ್ಸ್​ ಅನ್ನು ಏಕಕಾಲಕ್ಕೆ ಸೇವಿಸುತ್ತಿದ್ದೆ. ಅದೆಷ್ಟೋ ದಿನ ಊಟ, ನಿದ್ದೆಯನ್ನೇ ಮರೆತಿದ್ದೆ ಎಂದು ಅಚ್ಚರಿಯ ವಿಚಾರವನ್ನು ಹೇಳಿಕೊಂಡಿದ್ದಾರೆ.

ಪತ್ನಿಯ ಸಾವಿನ ಬಳಿಕ ನಿರ್ಧಾರ ಬದಲು:ವಿಪರೀತ ಮಾದಕ ದ್ರವ್ಯದ​ ಚಟಕ್ಕೆ ಬಿದ್ದಿದ್ದ ವಾಸಿಂ ಅಕ್ರಂ, ಪತ್ನಿಯಿಂದ ದೂರವಾಗಿದ್ದರು. ಇದು ಪತ್ನಿಗೂ ಸಹ್ಯವಾಗಿರಲಿಲ್ಲ. ಒಮ್ಮೆ ಕೊಕೇನ್​ ಅನ್ನು ತಮ್ಮ ಶರ್ಟ್​ನಲ್ಲಿ ಪತ್ತೆ ಮಾಡಿದ ಪತ್ನಿ ಈ ಬಗ್ಗೆ ತಗಾದೆ ತೆಗೆದು ವೈದ್ಯರ ಸಮಾಲೋಚನೆಗೆ ಸೂಚಿಸಿದ್ದರು.

"ಇದಾದ ಬಳಿಕ ವೈದ್ಯರ ಸಮಾಲೋಚನೆಗೆ ತೆರಳಿ ಮನಸ್ಸು ಬದಲಿಸಿಕೊಂಡೆ. ಬಳಿಕ ನಡೆದ ಘಟನೆ ನನ್ನನ್ನು ಇನ್ನಷ್ಟು ವಿಚಲಿತನನ್ನಾಗಿ ಮಾಡಿತು. ಅದು ಪತ್ನಿಯ ಸಾವು. 2009 ರಲ್ಲಿ ಮೊದಲ ಪತ್ನಿ ಹುಮಾ ಸಾವಿನ ಬಳಿಕ ನಾನು ಡ್ರಗ್ಸ್​ ತೆಗೆದುಕೊಳ್ಳುವುದನ್ನು ಬಿಟ್ಟುಬಿಟ್ಟೆ. ಅಂದಿನಿಂದ ಡ್ರಗ್ಸ್​ ಸೇವನೆಯಿಂದಲೇ ದೂರವಾದೆ" ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ಸಾರ್ವಕಾಲಿಕ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾದ ವಾಸಿಂ ಅಕ್ರಂ, 1985 ರಿಂದ ದೇಶದ ಪರವಾಗಿ 104 ಟೆಸ್ಟ್ ಮತ್ತು 356 ಏಕದಿನ ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 414 ಟೆಸ್ಟ್, 502 ಏಕದಿನ ವಿಕೆಟ್‌ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ:India vs South Africa: ಬಲಿಷ್ಠ ಟೀಂ ಇಂಡಿಯಾಗೆ ಕಾಡುತ್ತಿದೆ ರಾಹುಲ್​ ಪ್ರದರ್ಶನದ ಚಿಂತೆ

ABOUT THE AUTHOR

...view details