ಕರ್ನಾಟಕ

karnataka

ಪ್ರಯತ್ನಕ್ಕೆ ಎಂದಿಗೂ ಸೋಲಿಲ್ಲ, ಮತ್ತೆ ಮುನ್ನುಗ್ಗೋಣ... ಇಸ್ರೋ ಬೆನ್ನು ತಟ್ಟಿದ ಕ್ರೀಡಾದಿಗ್ಗಜರು

By

Published : Sep 7, 2019, 1:43 PM IST

ಇಸ್ರೋ ಹಾಗೂ ಇಸ್ರೋ ವಿಜ್ಞಾನಿಗಳ ಬಗ್ಗೆ ಭಾರತವೇ ಹೆಮ್ಮೆ ಪಡುತ್ತಿದೆದೆ. ಚಂದ್ರನನ್ನು ತಲುಪುವಲ್ಲಿ ಅಂತಿಮ ಹಂತದಲ್ಲಿ ಸಣ್ಣ ಅಂತರದಲ್ಲಿ ಹಿನ್ನಡೆ ಅನುಭವಿಸಿದ ಇಸ್ರೋಗೆ ಕ್ರೀಡಾ ಕ್ಷೇತ್ರದ ದಿಗ್ಗಜರು ಕೂಡಾ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಮುಂದಿನ ಪ್ರಯತ್ನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

Sports personalities salutes Isro scientists

ಹೈದರಾಬಾದ್​:ಇಸ್ರೋದ ಬಹುನಿರೀಕ್ಷಿತ ಚಂದ್ರಯಾನ -2 ಭಾಗವಾದ ವಿಕ್ರಂ ಲ್ಯಾಂಡರ್​ ಸಂಪರ್ಕ ಕಡಿದುಕೊಂಡಿರುವ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳಿಗೆ ಧೈರ್ಯ ತುಂಬಲು ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ವೀಟ್​ ಮೂಲಕ ಕ್ರಿಕೆಟ್​ ಹಾಗೂ ಕ್ರೀಡಾ ಕ್ಷೇತ್ರದ ವಿವಿಧ ನಾಯಕರುಗಳು ಇಸ್ರೋ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ಟ್ವಿಟ್ಟರ್​ ಮೂಲಕ ಇಸ್ರೋ ವಿಜ್ಞಾನಿಗಳನ್ನು ಹಲವು ಕ್ರೀಡಾ ನಾಯಕರು ಅಭಿನಂದಿಸಿದ್ದಾರೆ. ಭಾರತೀಯ ಕ್ರಿಕೆಟ್​ ತಂಡದ ಯುವ ಆಟಗಾರ ರಿಷಭ್​ ಪಂತ್​, ಶಿಖರ್​ ಧವನ್​, ಕುಸ್ತಿಪಟು ಯೋಗೇಶ್ವರ್​ ದತ್​, ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ರವಿ ಶಾಸ್ತ್ರಿ, ಸ್ಪಿನ್​ ಬೌಲರ್​ ಹರ್ಭಜನ್​ ಸಿಂಗ್​ ಟ್ವೀಟ್​ ಮಾಡಿದ್ದಾರೆ.

ರಿಷಭ್​ ಪಂತ್​

ಹಿನ್ನಡೆ ಎಂಬುದು ದೊಡ್ಡ ವಿಷಯವೇ ಅಲ್ಲ. ಇಲ್ಲಿಂದ ಮತ್ತೆ ಮುನ್ನುಗ್ಗುವುದಷ್ಟೇ. ಇಸ್ರೋ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ. ದೇಶಕ್ಕಾಗಿ ನಿಮ್ಮ ಕೊಡುಗೆ ಮತ್ತು ಸೇವೆ ಅಪಾರ.

ಯೋಗೇಶ್ವರ್​ ದತ್​

ನಮಗೆ ನಮ್ಮ ವಿಜ್ಞಾನಿಗಳ ಬಗ್ಗೆ ಅಪಾರ ಹೆಮ್ಮೆಯಿದೆ. ಚಂದ್ರನನ್ನು ಮುಟ್ಟುವ ಮುಂದಿನ ಪ್ರಯತ್ನದಲ್ಲಿ ನಾವು ಯಶಸ್ಸು ಗಳಿಸುತ್ತೇವೆ ಎಂಬ ನಂಬಿಕೆ ಇದೆ.

ಶಿಖರ್ ಧವನ್​

ಇಸ್ರೋ ಬಗ್ಗೆ ನಾವು ಹೆಮ್ಮೆಯಿಂದ ಮಾತನಾಡುತ್ತೇವೆ. ನಿಮ್ಮ ಎದೆಗುಂದದ ಕೆಲಸದ ಬಗ್ಗೆ ನಮಗೆ ತಿಳಿದಿದೆ. ನೀವು ಖಂಡಿತಾ ಸೋತಿಲ್ಲ. ಬದಲಾಗಿ ನಮ್ಮಿಂದ ಮತ್ತಷ್ಟು ಬೆಂಬಲ ಪಡೆದಿದ್ದೀರಿ. ಚಂದ್ರನ ಸೇರುವ ನಿಮ್ಮ ಕನಸು ಹೀಗೆ ಇರಲಿ.

ರವಿ ಶಾಸ್ತ್ರಿ

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವನ್ನು ವಿಶ್ವನಾಯಕನನ್ನಾಗಿ ಮಾಡಿದ ಇಸ್ರೋ ವಿಜ್ಞಾನಿಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಚಂದ್ರಯಾನ-2 ಭಾರತದ ಕೋಟ್ಯಂತರ ಮಕ್ಕಳಿಗೆ ಸ್ಫೂರ್ತಿಯಾಗಲಿದೆ.

ಹರ್ಭಜನ್​ ಸಿಂಗ್

ಪ್ರಯತ್ನ ಪಡುವವರಿಗೆ ಯಾವತ್ತೂ ಸೋಲಿಲ್ಲ. ನಮ್ಮ ಇಸ್ರೋ ಹಾಗೂ ನಮ್ಮ ವಿಜ್ಞಾನಿಗಳ ಬಗ್ಗೆ ನಮಗೆ ಹೆಮ್ಮೆ ಇದೆ.

ABOUT THE AUTHOR

...view details