ಕರ್ನಾಟಕ

karnataka

ಲೈಂಗಿಕ ಕಿರುಕುಳ ತಡೆ ನೀತಿಗೆ ಅನುಮೋದನೆ ನೀಡಿದ ಬಿಸಿಸಿಐ

By

Published : Sep 20, 2021, 11:02 PM IST

Updated : Sep 21, 2021, 6:51 AM IST

BCCI's sexual harassment policy brings India players to its purview

ಲೈಂಗಿಕ ಕಿರುಕುಳ ದೂರುಗಳ ತನಿಖೆಗಾಗಿ ನಾಲ್ಕು ಸದಸ್ಯರ ಆಂತರಿಕ ಸಮಿತಿಯನ್ನು ರಚಿಸಲಾಗುವುದು ಎಂದು ಬಿಸಿಸಿಐ ಹೇಳಿದೆ. ಸೋಮವಾರ ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಆ ಸದಸ್ಯರನ್ನು ಆಯ್ಕೆ ಮಾಡಲಿಲ್ಲ. ಈ ಆಂತರಿಕ ಸಮಿತಿ ಅಧಿಕಾರಿಯಾಗುವವರು ಉನ್ನತ ದರ್ಜೆಯ ಉದ್ಯೋಗಿರುವ ಮಹಿಳೆಯಾಗಿರಬೇಕು ಎಂದು ಬಿಸಿಸಿಐನ ಹೊಸ ನೀತಿ ಹೇಳಿದೆ.

ನವದೆಹಲಿ:ಸೋಮವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಬಿಸಿಸಿಐ ಲೈಂಗಿಕ ದೌರ್ಜನ್ಯ ತಡೆಯಲು ತನ್ನದೇ ಆದ ಲೈಂಗಿಕ ಕಿರುಕಳ ತಡೆ ನೀತಿ( Prevention of Sexual Harassment )ಗೆ ಅನುಮೋದನೆ ನೀಡಿದೆ.

ಇಲ್ಲಿಯವರೆಗೆ, ಲೈಂಗಿಕ ಕಿರುಕುಳದ ವಿಚಾರಗಳನ್ನು ನಿಭಾಯಿಸುವ ಯಾವುದೇ ನಿರ್ದಿಷ್ಟ ನೀತಿ ಮಂಡಳಿಗೆ ಇರಲಿಲ್ಲ. ಇದೀಗ ಜಾರಿಗೆ ತಂದಿರುವ ಈ POSH ನೀತಿ ಕ್ರಿಕೆಟಿಗರ ಜೊತೆಗೆ ಆಡಳಿತ ಮಂಡಳಿ, ಅಫೆಕ್ಸ್ ಕೌನ್ಸಿಲ್ ಸದಸ್ಯರು ಮತ್ತು ಐಪಿಎಲ್ ಗವರ್ನಿಂಗ್ ಕೌನ್ಸಿಲ್​ಗೂ ಅನ್ವಯವಾಗಲಿದೆ.

ಲೈಂಗಿಕ ಕಿರುಕುಳ ದೂರುಗಳ ತನಿಖೆಗಾಗಿ ನಾಲ್ಕು ಸದಸ್ಯರ ಆಂತರಿಕ ಸಮಿತಿಯನ್ನು ರಚಿಸಲಾಗುವುದು ಎಂದು ಬಿಸಿಸಿಐ ಹೇಳಿದೆ. ಸೋಮವಾರ ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಆ ಸದಸ್ಯರನ್ನು ಆಯ್ಕೆ ಮಾಡಲಿಲ್ಲ. ಈ ಆಂತರಿಕ ಸಮಿತಿ ಅಧಿಕಾರಿಯಾಗುವವರು ಉನ್ನತ ದರ್ಜೆಯ ಉದ್ಯೋಗಿರುವ ಮಹಿಳೆಯಾಗಿರಬೇಕು ಎಂದು ಬಿಸಿಸಿಐನ ಹೊಸ ನೀತಿ ಹೇಳಿದೆ.

" ಆಂತರಿಕ ಸಮಿತಿಯ 2 ಸದಸ್ಯರನ್ನು ಉದ್ಯೋಗಿಗಳಿಂದ ಆಯ್ಕೆ ಮಾಡಲಾಗುತ್ತದೆ. ಸದಸ್ಯರು ಮಹಿಳೆಯರ ವಿಚಾರದಲ್ಲಿ ಬದ್ಧರಾಗಿರುವವರು ಅಥವಾ ಸಾಮಾಜಿಕ ಕೆಲಸದಲ್ಲಿ ಅನುಭವ ಹೊಂದಿರುವವರು ಅಥವಾ ಕಾನೂನು ಜ್ಞಾನ ಹೊಂದಿರುವವರಾಗಿರಬೇಕು.

ಮತ್ತೊಬ್ಬರು ಸರ್ಕಾರೇತರ ಸಂಸ್ಥೆ ಅಥವಾ ಮಹಿಳೆಯ ಕಾರಣಕ್ಕೆ ಬದ್ಧರಾಗಿರುವ ಸಂಘದಿಂದ ಆಯ್ಕೆ ಮಾಡಲಾಗುತ್ತದೆ. ಈ ಸಮಿತಿಯಲ್ಲಿ ಅರ್ಧದಷ್ಟು ಸದಸ್ಯರು ಮಹಿಳೆಯಾಗಿರಬೇಕು ಎಂದು ಈ ನೀತಿ ಹೇಳುತ್ತಿದೆ.

ಇದನ್ನು ಓದಿ: ದೇಶಿ ಕ್ರಿಕೆಟಿಗರಿಗೆ ಬಿಸಿಸಿಐ ಗುಡ್​ ನ್ಯೂಸ್: ಪಂದ್ಯ ಶುಲ್ಕ ಹೆಚ್ಚಳದ ಜೊತೆಗೆ ಕೋವಿಡ್​ ಪರಿಹಾರ ಘೋಷಣೆ

Last Updated :Sep 21, 2021, 6:51 AM IST

ABOUT THE AUTHOR

...view details