ಕರ್ನಾಟಕ

karnataka

ETV Bharat / sports

ಬಿಸಿಸಿಐ ಎಷ್ಟು ಶ್ರೀಮಂತ ಕ್ರಿಕೆಟ್​ ಸಂಸ್ಥೆ ಎಂಬುದು ಗೊತ್ತಾ?: ಇದನ್ನು ಮೀರಿಸಲು ಸಾಧ್ಯವೇ ಇಲ್ಲ..!

BCCI net worth: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆದಾಯ ಎರಡನೇ ಶ್ರೀಮಂತ ಕ್ರಿಕೆಟ್​ ರಾಷ್ಟ್ರ ಆಸ್ಟ್ರೇಲಿಯಾಕ್ಕಿಂತ 28 ಪಟ್ಟು ಜಾಸ್ತಿ ಅಂತೆ.

BCCI net worth
BCCI net worth

By ETV Bharat Karnataka Team

Published : Dec 11, 2023, 4:55 PM IST

ಹೈದರಾಬಾದ್​​:ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವಾದ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಬಿಸಿಸಿಐ ಎಷ್ಟು ದೊಡ್ಡ ಆರ್ಥಿಕ ಸಂಸ್ಥೆ ಎಂದು ಕೇಳಿದರೆ ಒಮ್ಮೆಗೆ ಅಚ್ಚರಿಗೆ ಒಳಗಾಗುವುದಂತೂ ಖಂಡಿತಾ. ಏಕೆಂದರೆ ವಿಶ್ವದ ಎರಡನೇ ಶ್ರೀಮಂತ ಕ್ರಿಕೆಟ್​ ಬೋರ್ಡ್​​ ಆಸ್ಟ್ರೇಲಿಯಾ. ಈ ಕ್ರಿಕೆಟ್​ ಆಸ್ಟ್ರೇಲಿಯಾಕ್ಕಿಂತ ಬಿಸಿಸಿಐನ ಆದಾಯ ಶೇ 28 ಪ್ರತಿಶತ ಹೆಚ್ಚು ಎಂದು ವರದಿಯಾಗಿದೆ. ಕಳೆದ ತಿಂಗಳು ಬಿಸಿಸಿಐ ಒಟ್ಟು ಆಸ್ತಿ 2.25 ಶತಕೋಟಿ ಯುಎಸ್​ ಡಾಲರ್​ ಅಂದರೆ ಭಾರತೀಯ ರೂಪಾಯಿಯಲ್ಲಿ ಅಂದಾಜು 18,700 ಕೋಟಿ ರೂ ಆಗುತ್ತದೆ.

ಭಾರತದಲ್ಲಿ ಕ್ರಿಕೆಟ್​ ಅನ್ನು ಒಂದು ಧರ್ಮ ಎಂದೇ ಪರಿಗಣಿಸಲಾಗುತ್ತದೆ. ಇಲ್ಲಿ ಕ್ರೀಡೆ ಎಂದರೆ ಕ್ರಿಕೆಟ್​ ಎಂಬಷ್ಟು ಕ್ರೇಜ್​ ಜನರಲ್ಲಿದೆ. ಇದಕ್ಕೆ ಈ ವರ್ಷ ನಡೆದ ವಿಶ್ವಕಪ್, ಈ ಬಾರಿ ಅಭಿಮಾನಿಗಳು​ ಮೈದಾನಕ್ಕೆ ಹೋಗಿ ವೀಕ್ಷಿಸಿದ ಅಂಕಿ ಅಂಶವೇ ಇದಕ್ಕೆ ಸಾಕ್ಷಿ. ದೇಶದ ಕ್ರೀಡಾ ಪ್ರೇಮಿಗಳಲ್ಲಿ ಶೇಕಡಾ 90ರಷ್ಟು ಜನ ಕ್ರಿಕೆಟ್​ ಪ್ರೇಮಿಗಳಾಗಿದ್ದಾರೆ. ಹೀಗಾಗಿ ಇಲ್ಲಿ ನಡೆಯುವ ಎಲ್ಲ ರೀತಿಯ ಕ್ರಿಕೆಟ್​ ಆಟಗಳಿಗೆ ಹೆಚ್ಚಿನ ಜನಪ್ರಿಯತೆಯೂ ದೊರೆಯುತ್ತದೆ.

ವರಿದಿಯೊಂದರ ಪ್ರಕಾರ ಕ್ರಿಕೆಟ್​ ಆಸ್ಟ್ರೇಲಿಯಾ ಎರಡನೇ ಶ್ರೀಮಂತ ರಾಷ್ಟ್ರವಾಗಿದೆ. ಆಸ್ಟ್ರೇಲಿಯಾದ ಆದಾಯ ಅಂದಾಜು ರೂ 660 ಕೋಟಿ (US $ 79 ಮಿಲಿಯನ್) ಎಂದು ಹೇಳಲಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್​ ಸಂಸ್ಥೆಯ ನಡುವಿನ ಆದಾಯದಲ್ಲಿ ಅಜ ಗಜಾಂತರ ಇದೆ . ಟಾಪ್ 10 ಮಂಡಳಿಗಳ ಒಟ್ಟು ನಿವ್ವಳ ಮೌಲ್ಯದ ಶೇ. 85.88 ರಷ್ಟು ಬಿಸಿಸಿಐಯದ್ದೇ ಇದೆ. ಹೀಗಾಗಿ ಪ್ರಸ್ತುತ ಕ್ರಿಕೆಟ್​ ಸಂಸ್ಥೆಗಳಲ್ಲಿ ಬಿಸಿಸಿಐ ಬಾಸ್​ ಆಗಿ ಮೆರೆಯುತ್ತಿದೆ.

ಭಾರತದ ವಿರುದ್ಧ ಆಡುವುದೇ ಲಾಭಕ್ಕಾಗಿ: ಇಷ್ಟು ಶ್ರೀಮಂತ ಸಂಸ್ಥೆಯ ವಿರುದ್ಧ ಸರಣಿಗಳನ್ನು ಆಡುವುದರಿಂದ ಎದುರಾಳಿ ತಂಡಕ್ಕೂ ಲಾಭಗಳಾಗುತ್ತದೆ. ಡಿಸೆಂಬರ್​ 10 ರಿಂದ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಒಂದು ತಿಂಗಳ ಕಾಲ ಟೀಮ್​ ಇಂಡಿಯಾ ಅಲ್ಲಿ ಪಂದ್ಯಗಳನ್ನು ಆಡಲಿದೆ. ಈ ಪ್ರವಾಸದಿಂದ ಹರಿಣಗಳ ರಾಷ್ಟ್ರ US $ 68.7 ಮಿಲಿಯನ್ ಗಳಿಸುವ ನಿರೀಕ್ಷೆಯಿದೆ. ಇದು ಪ್ರತಿ ಪಂದ್ಯಕ್ಕೆ US$8.6 ಮಿಲಿಯನ್ ಅಥವಾ ಒಂದು ದಿನದಲ್ಲಿ US$2.29 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಸದ್ಯ ವರದಿ ಪ್ರಕಾರ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಸಂಸ್ಥೆ ಶ್ರೀಮಂತಿಕೆಯ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

ಲೀಗ್​ ಮತ್ತು ದೇಶಿ ಕ್ರಿಕೆಟ್​ಗೆ ಮಹತ್ವ:ಬಿಸಿಸಿಐನ ಆದಾಯದ ಬಹುಪಾಲು ಇಂಡಿಯನ್​ ಪ್ರೀಮಿಯರ್​ ಲೀಗ್​ನಿಂದಲೇ ಬರುತ್ತಿದೆ. ಸತತ 16 ವರ್ಷಗಳಿಂದ ಐಪಿಎಲ್ ಅ​ನ್ನು ಬಿಸಿಸಿಐ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಪ್ರತೀ ವರ್ಷ ಲೀಗ್​ ಕ್ರಿಕೆಟ್​​ಗೆ ಜನಪ್ರಿಯತೆ ಹೆಚ್ಚುತ್ತಿದೆ. ಎಲ್ಲಾ ದೇಶಗಳಲ್ಲೂ ಈಗ ಲೀಗ್​ ಕ್ರಿಕೆಟ್​ ನಡೆಸಲಾಗುತ್ತದೆ. ಆದರೆ ಐಪಿಎಲ್​ನಷ್ಟು ಖ್ಯಾತಿ ಮತ್ತು ಹಣವನ್ನು ಯಾವುದೇ ಲೀಗ್​ ಮಾಡಿಲ್ಲ.

ಬಿಸಿಸಿಐ ದೇಶೀಯ ಕ್ರಿಕೆಟ್​ ಋತುವನ್ನು ಉತ್ತಮವಾಗಿ ಆಯೋಜಿಸಿಕೊಂಡು ಬರುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಉತ್ತಮ ಆಟಗಾರರು ಬರುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಐಸಿಸಿ ನೀಡುವ ಶ್ರೇಯಾಂಕದಲ್ಲಿ ಭಾರತ ತಂಡ ಮೂರೂ ಮಾದರಿ ಕ್ರಿಕೆಟ್​ನಲ್ಲಿ ನಂ.1 ಆಗಿದೆ. ಅಲ್ಲದೇ ಏಕದಿನ, ಟಿ20 ಬ್ಯಾಟಿಂಗ್​ ಶ್ರೇಯಾಂಕದಲ್ಲಿ ಕ್ರಮವಾಗಿ ಶುಭಮನ್​ ಗಿಲ್​, ಸೂರ್ಯಕುಮಾರ್​ ಯಾದವ್​ ನಂ. 1 ಆದರೆ, ಟಿ20 ಬೌಲಿಂಗ್​ ಶ್ರೇಯಾಂಕದಲ್ಲಿ ರವಿ ಬಿಷ್ಣೋಯ್​ ಅಗ್ರಸ್ಥಾನದಲ್ಲಿದ್ದಾರೆ. ಟೆಸ್ಟ್​​ ಬೌಲಿಂಗ್​ನಲ್ಲಿ ರವಿ ಚಂದ್ರನ್​​ ಅಶ್ವಿನ್​, ಆಲ್​ರೌಂಡರ್​ನಲ್ಲಿ ರವೀಂದ್ರ ಜಡೇಜಾ ಅಗ್ರ ಶ್ರೇಯಾಂಕಿತರಾಗಿದ್ದಾರೆ. ಹಣದ ಜೊತೆಗೆ ಬಿಸಿಸಿಐ ಉತ್ತಮ ಕ್ರಿಕೆಟ್​ ಅನ್ನು ಆಡುತ್ತಿದೆ. (ಐಎಎನ್​ಎಸ್​)

ಇದನ್ನೂ ಓದಿ:ಐಪಿಎಲ್‌ನಿಂದ ನಿವೃತ್ತಿ ನಂತರ ಕ್ಯಾಪ್ಟನ್ ಕೂಲ್ ಈ ಲೀಗ್‌ನಲ್ಲಿ ಆಡ್ತಾರಾ?

ABOUT THE AUTHOR

...view details