ಕರ್ನಾಟಕ

karnataka

ಮುಂಬೈ ರಣಜಿ ತಂಡದಲ್ಲಿ ರಹಾನೆ, ಅರ್ಜುನ್​ ತೆಂಡೂಲ್ಕರ್​ಗೆ ಸ್ಥಾನ, ಪೃಥ್ವಿ ಶಾ ನಾಯಕ

By

Published : Feb 8, 2022, 5:57 PM IST

ಕಳೆದ ವರ್ಷ ಕೋವಿಡ್​ 19 ಕಾರಣದಿಂದ ರದ್ದುಗೊಳಿಸಲಾಗಿದ್ದ ಬಿಸಿಸಿಐ ಸಾಕಷ್ಟು ಟೀಕೆಗೆ ಗುರಿಯಾದ ಮೇಲೆ ಈ ವರ್ಷ 2 ಹಂತದಲ್ಲಿ ಆಯೋಜಿಸಲು ತೀರ್ಮಾನಿಸಿದೆ. ಫೆಬ್ರವರಿ 10ರಿಂದ ಮಾರ್ಚ್​ 15 ಮತ್ತು ಮೇ 30 ರಿಂದ ಜೂನ್​ 26 ರವರೆಗೆ ಆಯೋಜಿಸಲು ತೀರ್ಮಾನಿಸಿದೆ. ಏಪ್ರಿಲ್​ನಲ್ಲಿ ಐಪಿಎಲ್ ಇರುವುದರಿಂದ ಬಿಸಿಸಿಐ ಈ ಯೋಜನೆ ರೂಪಿಸಿಕೊಂಡಿದೆ. ಒಟ್ಟು 64 ಪಂದ್ಯಗಳು 62 ದಿನಗಳಲ್ಲಿ ನಡೆಯಲಿದೆ.

Arjun Tendulkar, Ajinkya Rahane named in Mumbai Ranji Trophy squad
ಮುಂಬೈ ರಣಜಿ ತಂಡದಲ್ಲಿ ರಹಾನೆ, ಅರ್ಜುನ್​ ತೆಂಡೂಲ್ಕರ್​ಗೆ ಸ್ಥಾನ, ಪೃಥ್ವಿ ಶಾ ನಾಯಕ

ಮುಂಬೈ: ಲೆಜೆಂಡರಿ ಕ್ರಿಕೆಟರ್​ ಸಚಿನ್​ ತೆಂಡೂಲ್ಕರ್​ ಮಗ ಅರ್ಜುನ್ ತೆಂಡೂಲ್ಕರ್​ ಮತ್ತು ಫಾರ್ಮ್​ ಕಂಡುಕೊಳ್ಳಲು ಎದುರು ನೋಡುತ್ತಿರುವ ಭಾರತ ತಂಡದ ಬ್ಯಾಟರ್​ ಅಜಿಂಕ್ಯ ರಹಾನೆ ಮುಂಬೈ ರಣಜಿ ಟ್ರೋಫಿ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.

ಕಳೆದ ವರ್ಷ ವಿಜಯ್​ ಹಜಾರೆ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಿ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ್ದ ಪೃಥ್ವಿ ಶಾ ಈ ಬಾರಿ ರಣಜಿ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ತಂಡದಿಂದ ಹೊರ ಬೀಳುವ ಆತಂಕ ಎದುರಿಸುತ್ತಿರುವ ರಹಾನೆ ರಣಜಿ ಟ್ರೋಫಿ ಫಾರ್ಮ್​ಗೆ ಮರಳಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುವುದಕ್ಕೆ ಉತ್ತಮ ಅವಕಾಶ ಸಿಕ್ಕಂತಾಗಿದೆ.

ಇನ್ನು ಅರ್ಜುನ್ ತೆಂಡೂಲ್ಕರ್​​ ಕಳೆದ ವರ್ಷದ ತಂಡದಲ್ಲೂ ಅವಕಾಶ ಪಡೆದಿದ್ದಾರೆ, ಟೂರ್ನಿ ನಡೆಯದ ಕಾರಣ ದೇಶಿ ಕ್ರಿಕೆಟ್​ನ ರಾಜಾ ಎಂದೇ ಬಿಂಬಿತವಾಗಿರುವ ರಣಜಿಯಲ್ಲಿ ಪದಾರ್ಪಣೆ ಮಾಡಿರಲಿಲ್ಲ. ಈ ವರ್ಷ ಮತ್ತೆ ಅವಕಾಶ ಪಡೆದುಕೊಂಡಿದ್ದಾರೆ.

ಎಂಸಿಎ ಹಿರಿಯ ಆಯ್ಕೆ ಸಮಿತಿ ಅಧ್ಯಕ್ಷ ಸಲಿಲ್​ ಅಂಕೋಲಾ, ಗುಲಮ್ ಪಾರ್ಕರ್​, ಸುನಿಲ್ ಮೋರೆ, ಪ್ರಸಾದ್​ ದೇಸಾಯಿ ಮತ್ತು ಆನಂದ್​ ಯಲ್ವಿಗಿ ಮುಂಬರುವ ರಣಜಿ ಟ್ರೋಫಿಗಾಗಿ ಮುಂಬೈ ತಂಡವನ್ನು ಆಯ್ಕೆ ಮಾಡಿದ್ದಾರೆ ಎಂದು ಎಂಸಿಎ ತಂಡದ ಜೊತೆ ಹೇಳಿಕೆ ಬಿಡುಗಡೆ ಮಾಡಿದೆ.

ಇದನ್ನೂ ಓದಿ:ವಿರಾಟ್​ ಕೊಹ್ಲಿಯ 100 ಟೆಸ್ಟ್ ಬೆಂಗಳೂರಿನ ಬದಲು ಮೊಹಾಲಿಯಲ್ಲಿ ನಡೆಯುವ ಸಾಧ್ಯತೆ?

ಕಳೆದ ವರ್ಷ ಕೋವಿಡ್​ 19 ಕಾರಣದಿಂದ ರದ್ದುಗೊಳಿಸಲಾಗಿದ್ದ ಬಿಸಿಸಿಐ ಸಾಕಷ್ಟು ಟೀಕೆಗೆ ಗುರಿಯಾದ ಮೇಲೆ ಈ ವರ್ಷ 2 ಹಂತದಲ್ಲಿ ಆಯೋಜಿಸಲು ತೀರ್ಮಾನಿಸಿದೆ,. ಫೆಬ್ರವರಿ 10ರಿಂದ ಮಾರ್ಚ್​ 15 ಮತ್ತು ಮೇ 30ರಿಂದ ಜೂನ್​ 26 ರವರೆಗೆ ಆಯೋಜಿಸಲು ತೀರ್ಮಾನಿಸಿದೆ. ಏಪ್ರಿಲ್​ನಲ್ಲಿ ಐಪಿಎಲ್ ಇರುವುದರಿಂದ ಬಿಸಿಸಿಐ ಈ ಯೋಜನೆ ರೂಪಿಸಿಕೊಂಡಿದೆ. ಒಟ್ಟು 64 ಪಂದ್ಯಗಳು 62 ದಿನಗಳಲ್ಲಿ ನಡೆಯಲಿದೆ.

ಮುಂಬೈ ರಣಜಿ ತಂಡ

ಪೃಥ್ವಿ ಶಾ (ನಾಯಕ), ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ, ಆಕರ್ಷಿತ್ ಗೊಮೆಲ್, ಅರ್ಮಾನ್ ಜಾಫರ್, ಸರ್ಫರಾಜ್ ಖಾನ್, ಸಚಿನ್ ಯಾದವ್, ಆದಿತ್ಯ ತಾರೆ (ವಿಕೆಟ್ ಕೀಪರ್), ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಶಿವಂ ದುಬೆ, ಅಮಾನ್ ಖಾನ್, ಶಾಮ್ಸ್ ಮುಲಾನಿ, ತನುಶ್​ ಕೊಟಿಯಾನ್, ಪ್ರಶಾಂತ್ ಸೋಲಂಕಿ, ಶಶಾಂಕ್ ಅತ್ತಾರ್ಡೆ, ಧವಳ್ ಕುಲಕರ್ಣಿ, ಮೋಹಿತ್ ಅವಸ್ತಿ, ಪ್ರಿನ್ಸ್ ಬಡಿಯಾನಿ, ಸಿದ್ಧಾರ್ಥ್ ರಾವುತ್, ರಾಯ್ಸ್ಟನ್ ಡಯಾಸ್, ಅರ್ಜುನ್ ತೆಂಡೂಲ್ಕರ್

ಇದನ್ನೂ ಓದಿ:ಶ್ರೀಲಂಕಾ ಸರಣಿಗೂ ಮುನ್ನ ಫಾರ್ಮ್​ಗೆ ಮರಳಲು ಪೂಜಾರ-ರಹಾನೆ ಗೋಲ್ಡನ್​ ಚಾನ್ಸ್​

ABOUT THE AUTHOR

...view details