ಅಹ್ಮದಾಬಾದ್: ಹಾಲಿ ರಣಜಿ ಚಾಂಪಿಯನ್ ಸೌರಾಷ್ಟ್ರ ವಿರುದ್ಧ ಆಕರ್ಷಕ ಶತಕ ಸಿಡಿಸುವ ಮೂಲಕ ಭಾರತದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಶ್ರೀಲಂಕಾ ಸರಣಿಗೂ ಮುನ್ನ ಫಾರ್ಮ್ ಕಂಡುಕೊಳ್ಳವಲ್ಲಿ ಯಶಸ್ವಿಯಾಗಿದ್ದಾರೆ.
ಅಹ್ಮದಾಬಾದ್ನಲ್ಲಿ ನಡೆಯುತ್ತಿರುವ ಡಿ ಗುಂಪಿನ ಮೊದಲ ಪಂದ್ಯದಲ್ಲಿ ಆರಂಭಿಕ ಆಘಾತ ಅನುಭವಿಸಿದ್ದ ಮುಂಬೈ ತಂಡ ರಹಾನೆ ಮತ್ತು ಸರ್ಫರಾಜ್ ಖಾನ್ ಅವರ ಶತಕದಿಂದ ಚೇತರಿಸಿಕೊಂಡಿದೆ. ಫಾರ್ಮ್ ಕಳೆದುಕೊಂಡು ಭಾರತ ತಂಡದಿಂದ ಹೊರ ಬೀಳುವ ಭೀತಿಯಲ್ಲಿದ್ದ ಅಜಿಂಕ್ಯ ರಹಾನೆ 212 ಎಸೆತಗಳಲ್ಲಿ ಶತಕ ಪೂರೈಸಿದರು. ಅವರ ಇನ್ನಿಂಗ್ಸ್ನಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್ಗಳು ಸೇರಿದ್ದವು. ಇದು ಅವರು 36ನೇ ಪ್ರಥಮ ದರ್ಜೆ ಶತಕವಾಗಿದೆ.
44ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಯುವ ಆಟಗಾರ ಸರ್ಫರಾಜ್ ಖಾನ್ ಜೊತೆಗೂಡಿದ ರಹಾನೆ 4ನೇ ವಿಕೆಟ್ ಜೊತೆಯಾಟದಲ್ಲಿ 200ಕ್ಕೂ ಹೆಚ್ಚು ರನ್ಗಳ ಜೊತೆಯಾಟ ನಡೆಸಿ ಕ್ರೀಸ್ನಲ್ಲಿದ್ದಾರೆ. ಸರ್ಫರಾಜ್ 191 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ಗಳ ನೆರವಿನಿಂದ ಶತಕ ಪೂರ್ಣಗೊಳಿಸಿ ಆಡುತ್ತಿದ್ದಾರೆ.
ನಾಯಕ ಪೃಥ್ವಿ ಶಾ(1)ಮ,ಆಕಾಶ್ ಗೋಮಲ್ (8) ಸಚಿನ್ ಯಾದವ್(19) ಕೇವಲ 13 ಓವರ್ಗಳ ಒಳಗೆ ವಿಕೆಟ್ ಒಪ್ಪಿಸಿದರು. ರಹಾನೆ ದಕ್ಷಿಣ ದಕ್ಷಿಣ ಆಫ್ರಿಕಾ ವಿರುದ್ಧ 6 ಇನ್ನಿಂಗ್ಸ್ಗಳಲ್ಲಿ ಕೇವಲ 136 ರನ್ಗಳಿಸಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. 2021ರಲ್ಲಿ 20.8ರ ಸರಾಸರಿಯಲ್ಲಿ ರನ್ಗಳಿಸಿದ್ದ ರಹಾನೆಯನ್ನು ಈಗಾಗಲೆ ಉಪನಾಯಕ ಸ್ಥಾನದಿಂದ ಕೆಳಗಿಳಿಸಲಾಗಿತ್ತು.
ಇದನ್ನೂ ಓದಿ:Ranji Trophy: ರೈಲ್ವೇಸ್ ವಿರುದ್ಧ 83 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ ಮನೀಶ್ ಪಾಂಡೆ