ಕರ್ನಾಟಕ

karnataka

ತಂಡ ಸೇರಿದ ದಿಗ್ಗಜರು: ನಾಳೆ ಗೇಲ್​, ಎಬಿಡಿಗೆ ಹಾಲ್ ಆಫ್ ಫೇಮ್‌​ ಗೌರವ

By

Published : Mar 25, 2023, 5:07 PM IST

ನಾಳೆ ಗೇಲ್​, ಎಬಿಡಿಗೆ ಆರ್​ಸಿಬಿ ಹಾಲ್ ಆಫ್ ಫೇಮ್‌​ ಗೌರವ - ಬೆಂಗಳೂರಿಗೆ ಬಂದಿಳಿದ ವಿರಾಟ್​ - ನಾಳೆ ಈ ಆವೃತ್ತಿಯ ಜರ್ಸಿ ಬಿಡುಗಡೆ

AB de Villiers, Chris Gayle arrive in Bengaluru
ತಂಡ ಸೇರಿದ ದಿಗ್ಗಜರು

ಬೆಂಗಳೂರು:ಐಪಿಎಲ್​ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಎಲ್ಲಾ ತಂಡದ ಆಟಗಾರರು ತಂಡವನ್ನು ಸೇರಿದ್ದಾರೆ. ಅಂತಯೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಲೆಜೆಂಡರಿ ಬ್ಯಾಟರ್‌ಗಳಾದ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ಮತ್ತು ವಿರಾಟ್​ ಕೊಹ್ಲಿ ಸೇರ್ಪಡೆಯಾಗಿದ್ದಾರೆ. ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ಇದ್ದು, ಗೇಲ್​ ಮತ್ತು ಎಬಿ ಡಿವಿಲಿಯರ್ಸ್ ಅವರಿಗೆ ಹಾಲ್ ಆಫ್ ಫೇಮ್‌​ ಗೌರವ ನೀಡಲಾಗುತ್ತಿದೆ.

ವಿರಾಟ್​, ಗೇಲ್ ಮತ್ತು ಡಿವಿಲಿಯರ್ಸ್ ಬೆಂಗಳೂರಿಗೆ ಆಗಮಿಸುತ್ತಿರುವುದನ್ನು ಆರ್​ಸಿಬಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಹಂಚಿಕೊಂಡಿದೆ. "ಕಾಯುವಿಕೆ ಕೊನೆಗೊಂಡಿದ್ದು ವಿರಾಟ್ ಕೊಹ್ಲಿ ಬೆಂಗಳೂರಿನಲ್ಲಿ!" ಕಿಂಗ್ ಬ್ಯಾಕ್​ ಟು ಹೋಮ್​ ಎಂದು ಬರೆದುಕೊಂಡಿದೆ. ಆಸ್ಟ್ರೇಲಿಯಾ ಟೂರ್​ ಮುಗಿಸಿದ ವಿರಾಟ್​ ಆರ್​ಸಿಬಿ ಸೇರಿಕೊಂಡಿದ್ದಾರೆ.

"ಮದರ್‌ಶಿಪ್ ಇಳಿದಿದೆ. ನಾವು ಬೆಂಗಳೂರು ನೆಲೆಯಿಂದ ಏಲಿಯನ್ ವರದಿ ಮಾಡುತ್ತಿದ್ದೇವೆ. ಹ್ಯಾಪಿ ಹೋಮ್‌ಕಮಿಂಗ್, ಎಬಿ ಡಿವಿಲಿಯರ್ಸ್"! ಎಂದು ಟ್ವಿಟ್​ ಮಾಡಿದೆ. "ಯುನಿವರ್ಸ್ ಬಾಸ್ ತನ್ನ ನೆಚ್ಚಿನ ಮನೆಗೆ ಆಗಮಿಸಿದ್ದಾರೆ. ಮನರಂಜನೆಯು ಅಧಿಕೃತವಾಗಿ ಪ್ರಾರಂಭವಾಗಿದೆ. ಹ್ಯಾಪಿ ಹೋಮ್‌ಕಮಿಂಗ್, ಕ್ರಿಸ್! ಎಂದು ಗೇಲ್​ಗೆ ಸ್ವಾಗತಿಸಲಾಗಿದೆ.

ಆರ್​ಸಿಬಿ ಅನ್‌ಬಾಕ್ಸ್ ಈವೆಂಟ್ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ತಾರೆಗಳಾದ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್ ಮುಂತಾದವರನ್ನು ತಂಡದ ಮೊದಲ ಅಭ್ಯಾಸದ ಅವಧಿಯಲ್ಲಿ ನೋಡುವ ಅವಕಾಶವನ್ನು ನೀಡಿದೆ. 2023 ರ ಸೀಸನ್‌ಗಾಗಿ ಜರ್ಸಿಯನ್ನು ಸಹ ಈ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಲಾಗುತ್ತದೆ. ಈವೆಂಟ್‌ನಲ್ಲಿ ಆರ್‌ಸಿಬಿಯ ಮೂರು ದೊಡ್ಡ ತಾರೆಗಳಾದ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್‌ನ ಪುನರ್ಮಿಲನವೂ ನಡೆಯಲಿದೆ.

ಡಿವಿಲಿಯರ್ಸ್ 2011-2021ರಲ್ಲಿ 157 ಪಂದ್ಯಗಳಲ್ಲಿ ಆರ್​ಸಿಬಿ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು 41.10 ರ ಸರಾಸರಿಯಲ್ಲಿ 4,522 ರನ್ ಗಳಿಸಿದ್ದು, 158 ಸ್ಟ್ರೈಕ್ ರೇಟ್‌ನಲ್ಲಿ ಎರಡು ಶತಕ ಮತ್ತು 37 ಅರ್ಧಶತಕಗಳನ್ನು ಗಳಿಸಿದ್ದಾರೆ. ಅಂತೆಯೇ ಯುನಿವರ್ಸಲ್​ ಬಾಸ್​ ಗೇಲ್ 2011-17 ರಿಂದ 91 ಪಂದ್ಯಗಳಲ್ಲಿ ಆರ್​ಸಿಬಿಯನ್ನು ಪ್ರತಿನಿಧಿಸಿದ್ದು, 154ರ ಸ್ಟ್ರೈಕ್ ರೇಟ್‌ನಲ್ಲಿ ಐದು ಶತಕ ಮತ್ತು 21 ಅರ್ಧ ಶತಕ ಗಳಿಸಿ 3,420 ರನ್ ದಾಖಲಿಸಿದ್ದಾರೆ. 175 ಅವರ ಉತ್ತಮ ಸ್ಕೋರ್ ಆಗಿದೆ.

ಆರ್​ಸಿಬಿ ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 2023 ರ ಆವೃತ್ತಿಯ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ (MI) ವಿರುದ್ಧದ ಆಡಲಿದೆ. ಕಳೆದ ವರ್ಷ ಆರ್​ಸಿಬಿ ಕ್ವಾಲಿಫೈಯರ್ 2 ನಲ್ಲಿ ಏಳು ವಿಕೆಟ್‌ಗಳಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತ ನಂತರ ಪ್ಲೇ-ಆಫ್​ನಿಂದ ಹೊರಗುಳಿದು, ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು:ಐಪಿಎಲ್​ 2023 ಹರಾಜಿನಲ್ಲಿ ಖರೀದಿಸಿದ ಆಟಗಾರರು - ರೀಸ್ ಟೋಪ್ಲಿ (1.9 ಕೋಟಿ), ಹಿಮಾಂಶು ಶರ್ಮಾ (20 ಲಕ್ಷ), ವಿಲ್ ಜ್ಯಾಕ್ಸ್ (3.2 ಕೋಟಿ), ಮನೋಜ್ ಭಾಂಡಗೆ (20 ಲಕ್ಷ), ರಾಜನ್ ಕುಮಾರ್ (70 ಲಕ್ಷ), ಅವಿನಾಶ್ ಸಿಂಗ್ (60 ಲಕ್ಷ).

ಉಳಿಸಿಕೊಂಡಿರುವ ಆಟಗಾರರು:ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೋಮ್ಮರ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್.

ಇದನ್ನೂ ಓದಿ:ಪಾಕಿಸ್ತಾನಕ್ಕೆ ಸೋಲು: 11 ವರ್ಷಗಳ ನಂತರ ಮುಖಾಮುಖಿಯಲ್ಲಿ ಅಫ್ಘಾನ್​ಗೆ​​ ಐತಿಹಾಸಿಕ ಗೆಲುವು

ABOUT THE AUTHOR

...view details