ETV Bharat / sports

ಪಾಕಿಸ್ತಾನಕ್ಕೆ ಸೋಲು: 11 ವರ್ಷಗಳ ನಂತರ ಮುಖಾಮುಖಿಯಲ್ಲಿ ಅಫ್ಘಾನ್​ಗೆ​​ ಐತಿಹಾಸಿಕ ಗೆಲುವು

author img

By

Published : Mar 25, 2023, 3:19 PM IST

ಪಾಕಿಸ್ತಾನದ ವಿರುದ್ಧ ಗೆಲುವು ದಾಖಲಿಸಿದ ಅಫ್ಘಾನ್ - 11 ವರ್ಷಗಳ ನಂತರದ ಉಭಯ ತಂಡಗಳು ಮುಖಾಮುಖಿ - ಮೊದಲ ಬಾರಿಗೆ ಪಾಕ್​ ವಿರುದ್ಧ ಅಂತಾರಾಷ್ಟ್ರಿಯ ಟಿ20 ಗೆಲುವು

Afghanistan Created Historic win against Pakistan
11 ವರ್ಷಗಳ ನಂತರ ಮುಖಾಮುಖಿಯಲ್ಲಿ ಅಫ್ಘಾನ್​ಗೆ​​ ಐತಿಹಾಸಿಕ ಗೆಲುವು

ಶಾರ್ಜಾ(ಯುಎಇ): ಮೊಹಮ್ಮದ್ ನಬಿಯ ಆಲ್​ರೌಂಡರ್​ ಪ್ರದರ್ಶನ ಮತ್ತು ಅಫ್ಘಾನಿಸ್ತಾನ ಬೌಲರ್‌ಗಳ ದಾಳಿಗೆಯ ನೆರವಿನಿಂದ ತಂಡವು ಶುಕ್ರವಾರ ಶಾರ್ಜಾದಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಟಿ20ಯಲ್ಲಿ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವು ಅಫ್ಘಾನಿಸ್ತಾನಕ್ಕೆ ಐತಿಹಾಸ ಕ್ಷಣವಾಗಿದೆ.

11 ವರ್ಷಗಳ ನಂತರ ಉಭಯ ತಂಡಗಳು ಮುಖಾಮುಖಿಯಾಗಿದ್ದು, ರಶೀದ್ ಖಾನ್ ಪಡೆ ಅಂತಿಮವಾಗಿ ಪಾಕಿಸ್ತಾನದ ವಿರುದ್ಧ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನ ಟಾಸ್​​ ಗೆದ್ದು ಬ್ಯಾಟಿಂಗ್​ ಮಾಡುವ ನಿರ್ಣಯವನ್ನು ತೆಗೆದುಕೊಂಡತು. ಆದರೆ ಪಕ್​ ​ನಾಯಕ ಬ್ಯಾಟಿಂಗ್​ ಮಾಡುವ ಚಿಂತನೆ ಬುಡಮೇಲಾಯಿತು. ಅತೀ ಕಡಿಮೆ ರನ್​ ಗುರಿಯನ್ನು ಪಾಕ್​ ತಂಡ ಅಫ್ಘಾನ್​ಗೆ ನೀಡಿತು.

20 ಓವರ್​ಗೆ ಪಾಕ್​ ತಂಡ 9 ವಿಕೆಟ್​ ನಷ್ಟ ಅನುಭವಿಸಿ ಕೇವಲ 93ರನ್​ನ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತಿದ ಅಘ್ಫಾನ್ 17.5 ಓವರ್​ನಲ್ಲೇ 4 ವಿಕೆಟ್​ ನಷ್ಟಕ್ಕೆ 98 ರನ್​ ಗಳಿಸಿ ಐತಿಹಾಸಿಕ ಗೆಲುವು ದಾಖಲಿಸಿತು. ಪಾಕಿಸ್ತಾನ ಟಿ20ಯಲ್ಲಿ ಗಳಿಸಿದ ಅತೀ ಕನಿಷ್ಠ ರನ್​ ಪಟ್ಟಿಯಲ್ಲಿ ಇದು ಐದನೇಯದ್ದಾಗಿದೆ. ಈ ಹಿಂದೆ 2012ರಲ್ಲಿ ದುಬೈನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 74 ರನ್​, 2014ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 82, 2016 ರಲ್ಲಿ ಭಾರತದ ವಿರುದ್ಧ 83, 2010ರಲ್ಲಿ ಇಂಗ್ಲೆಂಡ್ ವಿರುದ್ಧ 89 ಮತ್ತು ನಿನ್ನೆ ಅಫ್ಘಾನಿಸ್ತಾನದ ವಿರುದ್ಧ 92 ರನ್​ ಗಳಿಸಿದೆ.

ಪಾಕಿಸ್ತಾನದ ನಾಲ್ಕು ಬ್ಯಾಟರ್ ಮಾತ್ರ 10+ ರನ್​ ಗಳಿಸಿದರು. ಇಮಾದ್ ವಾಸಿಂ 18, ಚೊಚ್ಚಲ ಆಟಗಾರ ಸೈಮ್ ಅಯೂಬ್ 17 ಮತ್ತು ತಯ್ಯಬ್ ತಾಹಿರ್ 16 ಹಾಗೂ ನಾಯಕ ಶಾದಾಬ್ ಖಾನ್ 12 ರನ್​ ಗಳಿಸಿದ್ದೇ ಹೆಚ್ಚಿನ ರನ್​ ಆಗಿತ್ತು. ಅಫ್ಘಾನ್​ ಪರ ಮುಜೀಬ್ ಉರ್ ರೆಹಮಾನ್, ಫಜಲ್ಹಕ್ ಫಾರೂಕಿ ಮತ್ತು ಮೊಹಮ್ಮದ್ ನಬಿ ತಲಾ ಎರಡು ವಿಕೆಟ್​ ಪಡೆದರು.

ಈ ಸಂಕ್ಷಿಪ್ತ ರನ್​ ಗುರಿ ಬೆನ್ನು ಹತ್ತಿದ ಅಫ್ಘಾನಿಸ್ತಾನದ ಬ್ಯಾಟರ್​ಗಳಿಗೆ ಪಾಕ್​ ಬೌಲರ್​ಗಳು ಕಾಡಿದರು. 45 ರನ್​ ಗಳಿಸುವಷ್ಟರಲ್ಲಿ ಅಫ್ಘಾನ್ 4 ವಿಕೆಟ್​ ಕಳೆದುಕೊಂಡಿತು. ಸಂಕಷ್ಟದಲ್ಲಿದ್ದ ಅಫ್ಘಾನ್​ಗೆ ನಬಿ ಮತ್ತೆ ನೆರವಾದರು. ನಬಿಯ ರಕ್ಷಣಾತ್ಮಕ ಆಟದಿಂದ ಪಾಕಿಸ್ತಾನ ಸೋಲನುಭವಿಸಿತು. 38 ಬಾಲ್​ನಲ್ಲಿ 38 ರನ್​ ಗಳಿಸಿ ತಂಡದ ಗೆಲುವಿಗೆ ಕಾರಣರಾದರು ಇವರ ಬ್ಯಾಟಿಂಗ್​ ಮತ್ತು ಬೌಲಿಂಗ್​ನ ಗಮನಾರ್ಹ ಕೊಡುಗೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಇವರ ಜೊತೆಗೆ ನಜಿಬುಲ್ಲಾ ಜದ್ರಾನ್ 23 ಎಸೆತಗಳಲ್ಲಿ 17ರನ್​ ಗಳಿಸಿ ಇನ್ನೊಂಡೆದೆ ವಿಕೆಟ್ ನಿಲ್ಲಿಸಿದ್ದರು. ಪಾಕಿಸ್ತಾನದ ವಿರುದ್ಧ ಟಿ20ಯಲ್ಲಿ ರಶೀದ್​ ಖಾನ್​ ನಾಯಕತ್ವದಲ್ಲಿ ಅಫ್ಘಾನ್​ 6 ವಿಕೆಟ್​ ಗೆಲುವಿನ ನಗೆ ಬೀರಿತು.

ಪಾಕಿಸ್ತಾನ: ಸೈಮ್ ಅಯೂಬ್, ಮೊಹಮ್ಮದ್ ಹ್ಯಾರಿಸ್, ಅಬ್ದುಲ್ಲಾ ಶಫೀಕ್, ತಯ್ಯಬ್ ತಾಹಿರ್, ಶಾದಾಬ್ ಖಾನ್ (ನಾಯಕ), ಅಜಮ್ ಖಾನ್ (ವಿಕೆಟ್​ ಕೀಪರ್​), ಫಹೀಮ್ ಅಶ್ರಫ್, ಇಮಾದ್ ವಾಸಿಮ್, ನಸೀಮ್ ಶಾ, ಜಮಾನ್ ಖಾನ್, ಇಹ್ಸಾನುಲ್ಲಾ

ಅಫ್ಘಾನಿಸ್ತಾನ ತಂಡ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್​), ಇಬ್ರಾಹಿಂ ಝದ್ರಾನ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಮ್ ಜನತ್, ಅಜ್ಮತುಲ್ಲಾ ಒಮರ್ಜಾಯ್, ಗುಲ್ಬದಿನ್ ನೈಬ್, ರಶೀದ್ ಖಾನ್ (ನಾಯಕ), ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ, ನವೀನ್-ಉಲ್-ಹಕ್

ಇದನ್ನೂ ಓದಿ: ಬೆಟ್ಟಿಂಗ್​ ದಂಧೆ: 13 ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಗಳಲ್ಲಿ ಫಿಕ್ಸಿಂಗ್​ - ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.