ಕರ್ನಾಟಕ

karnataka

'ಇಂದು ಕಾಮಿಡಿಯಲ್ಲಿ ನಮ್ಮ ವಿಶೇಷ ಅತಿಥಿ..' ಎಂದ ರಕ್ಷಿತಾ..

By

Published : Jan 13, 2021, 4:24 PM IST

ಫೋಟೋ ಶೇರ್ ಮಾಡಿದ ಕೆಲವೇ ಹೊತ್ತಿನಲ್ಲಿ ಫೋಟೋ ಫ್ಯಾನ್ ಪೇಜ್​ಗಳಲ್ಲಿ ವೈರಲ್ ಆಗಿದೆ. ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ಹೊಸ ಸೀಸನ್ ಲಾಕ್​ಡೌನ್ ನಂತರ ಪ್ರಸಾರವಾಗಿತ್ತು. ವೀಕ್ಷಕರ ನೆಚ್ಚಿನ ಶೋ ಎನಿಸಿಕೊಂಡಿದೆ..

ಇನ್ಸ್ಟಾಗ್ರಾಂನಲ್ಲಿ ಫೋಟೋ ಶೇರ್​ ಮಾಡಿರುವ ರಕ್ಷಿತಾ
ಇನ್ಸ್ಟಾಗ್ರಾಂನಲ್ಲಿ ಫೋಟೋ ಶೇರ್​ ಮಾಡಿರುವ ರಕ್ಷಿತಾ

ನಟಿ ರಕ್ಷಿತಾ ಪ್ರೇಮ್ ಸದ್ಯ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ತೀರ್ಪುಗಾರ್ತಿಯಾಗಿ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ರಕ್ಷಿತಾ ಇದೀಗ ಕಾಮಿಡಿ ಕಿಲಾಡಿಗಳು ಜೊತೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ತೀರ್ಪುಗಾರ್ತಿಯಾಗಿದ್ದಾರೆ. ಇದರ ಹೊರತಾಗಿ ಸಾಮಾಜಿಕ ಜಾಲತಾಣದಲ್ಲಿ ಸದಾ ಚಟುವಟಿಕೆಯಿಂದಿರುವ ರಕ್ಷಿತಾ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ರಕ್ಷಿತಾ ಇತ್ತೀಚೆಗಷ್ಟೇ ಇನ್ಸ್‌ಸ್ಟಾಗ್ರಾಂನಲ್ಲಿ ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ ಸೆಟ್​ನಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ ಈ ಫೋಟೋದಲ್ಲಿ ರಕ್ಷಿತಾ ಅವರ ಗಂಡ ಹಾಗೂ ನಟ, ನಿರ್ದೇಶಕ ಪ್ರೇಮ್ ಇರುವುದು ವಿಶೇಷ ಸಂಗತಿ. ಗಂಡನ ಜೊತೆಗಿರುವ ಫೋಟೋ ಶೇರ್ ಮಾಡಿಕೊಂಡಿರುವ ರಕ್ಷಿತಾ 'ಇಂದು ಕಾಮಿಡಿಯಲ್ಲಿ ನಮ್ಮ ವಿಶೇಷ ಅತಿಥಿ' ಎಂದು ಬರೆದುಕೊಂಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಫೋಟೋ ಶೇರ್​ ಮಾಡಿರುವ ರಕ್ಷಿತಾ

ಓದಿ:ಬಿಗ್‌ಬಾಸ್ ಎಂಬ ಬೇರೆ ಜಗತ್ತಿಗೆ ಮೂರು ವರ್ಷಗಳು ಎಂದ ಜೆಕೆ

ಫೋಟೋ ಶೇರ್ ಮಾಡಿದ ಕೆಲವೇ ಹೊತ್ತಿನಲ್ಲಿ ಫೋಟೋ ಫ್ಯಾನ್ ಪೇಜ್​ಗಳಲ್ಲಿ ವೈರಲ್ ಆಗಿದೆ. ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ಹೊಸ ಸೀಸನ್ ಲಾಕ್​ಡೌನ್ ನಂತರ ಪ್ರಸಾರವಾಗಿತ್ತು. ವೀಕ್ಷಕರ ನೆಚ್ಚಿನ ಶೋ ಎನಿಸಿಕೊಂಡಿದೆ.

ಕಳೆದ 3 ಸೀಸನ್​ಗಳಲ್ಲಿ ಉತ್ತಮ ಸ್ಪರ್ಧಿಗಳನ್ನು ಶೋ ಆರಿಸಿದೆ. ಅಷ್ಟೇ ಅಲ್ಲ, ಸ್ಫರ್ಧಿಗಳ ಕನಸನ್ನು ನನಸಾಗಿಸಲು ಉತ್ತಮ ಅವಕಾಶ ಕೂಡ ನೀಡಿದೆ. ಈ ಶೋ ಮೂಲಕ 8 ತಿಂಗಳುಗಳ ನಂತರ ರಕ್ಷಿತಾ ಕಿರುತೆರೆಗೆ ಬಂದಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿಯೂ ಜಡ್ಜ್ ಆಗಿರುವ ರಕ್ಷಿತಾ ಯಶಸ್ಸು ಕಂಡಿದ್ದಾರೆ.

ABOUT THE AUTHOR

...view details