ಕರ್ನಾಟಕ

karnataka

"ಪೆಪೆ": ಗ್ಯಾಂಗ್ ಸ್ಟಾರ್ ಅವತಾರದಲ್ಲಿ ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್

By

Published : Feb 17, 2022, 8:29 PM IST

ವಿನಯ್ ರಾಜ್ ಕುಮಾರ್ ಕೈಯಲ್ಲಿ ಮಚ್ಚು ಹಿಡಿದು ಬರುವ ಎಂಟ್ರಿ ಅವರ ಅಭಿಮಾನಿಗಳಿಗೆ ಕಿಕ್ ನೀಡುತ್ತೆ. ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ಜೋಡಿಯಾಗಿ ಕಾಜಲ್ ಕುಂದರ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅರುಣಾ ಬಾಲರಾಜ್, ಕಿಟ್ಟಿ, ಸಂಧ್ಯಾ ಅರಕೆರೆ, ಶಿವು, ಮೇದಿನಿ ಕೆಳಮನೆ ಹೀಗೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ.

ಪೆಪೆ ಚಿತ್ರದ ಟೀಸರ್ ಬಿಡುಗಡೆ
ಪೆಪೆ ಚಿತ್ರದ ಟೀಸರ್ ಬಿಡುಗಡೆ

ದೊಡ್ಮನೆ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ಸದ್ಯ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ "ಪೆಪೆ" ಎಂಬ ಕ್ಯಾಚೀ ಟೈಟಲ್ ಹೊಂದಿರುವ ಸಿನಿಮಾವನ್ನ ವಿನಯ್ ರಾಜ್ ಕುಮಾರ್ ಮಾಡುತ್ತಿರೋದು ಗೊತ್ತಿರುವ ವಿಚಾರ. ಇದೀಗ ಪೆಪೆ ಸಿನಿಮಾದ ಟೀಸರ್ ರಿವೀಲ್ ಆಗಿದ್ದು, ಥೇಟ್ ತಮಿಳು ಸಿನಿಮಾದ ಶೈಲಿಯಲ್ಲಿ ಟೀಸರ್ ಮೂಡಿ ಬಂದಿದೆ.

ಪೆಪೆ ಸಿನಿಮಾಕ್ಕೆ ಶುಭ ಹಾರೈಯಿಸಿದ ಅಭಿಮಾನಿಗಳು

ಲವರ್ ಬಾಯ್ ಇಮೇಜ್ ನಿಂದ ಕನ್ನಡಿಗರ ಮನ ಗೆದ್ದಿದ್ದ, ವಿನಯ್ ರಾಜ್ ಕುಮಾರ್, ಈ ಚಿತ್ರದಲ್ಲಿ ಗ್ಯಾಂಗ್​ ಸ್ಟಾರ್​ ​​ ಅವತಾರ ತಾಳಿದ್ದಾರೆ. ಆ ತೊರೆಗೊಂದು ಶಾಪ ಇದೆಯಂತೆ, ಅಲ್ಲಿ ಹರಿಯೋ ನೀರಿನ ಕೆಳಗೆ ರಾಕ್ಷಸನ ಕೈಯಿಂದ ಜಾರಿಬಿದ್ದ ಒಂದು ವಸ್ತು ಅದೇ ಅಂತೆ ಜೀವ. ಹೀಗೆ ಪಂಚಿಂಗ್ ಡೈಲಾಗ್​​​​ಗಳಿಂದ ಕೂಡಿರುವ ಪೆಪೆ ಸಸ್ಪೆನ್ಸ್ ನಿಂದ ಕೂಡಿದೆ. ಇದೊಂದು ಗ್ಯಾಂಗ್ ಸ್ಟರ್ ಕಥೆಯಾಗಿದ್ದು 1970ರಿಂದ 2020 ರವರೆಗಿನ ನಡೆಯುವ ಕಥೆಯಂತೆ.

ವಿನಯ್ ರಾಜ್ ಕುಮಾರ್ ಕೈಯಲ್ಲಿ ಮಚ್ಚು ಹಿಡಿದು ಬರುವ ಎಂಟ್ರಿ ಅವರ ಅಭಿಮಾನಿಗಳಿಗೆ ಕಿಕ್ ನೀಡುತ್ತೆ. ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ಜೋಡಿಯಾಗಿ ಕಾಜಲ್ ಕುಂದರ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅರುಣಾ ಬಾಲರಾಜ್, ಕಿಟ್ಟಿ, ಸಂಧ್ಯಾ ಅರಕೆರೆ, ಶಿವು, ಮೇದಿನಿ ಕೆಳಮನೆ ಹೀಗೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ.

ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ನಿರ್ದೇಶನ ಮಾಡಿರೋ ಪೆಪೆ ಸಿನಿಮಾವನ್ನ ಉದಯಶಂಕರ ಎಸ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಸಮರ್ಥ ಉಪಾದ್ಯ ಅವರ ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದಾರೆ. ಮನು ಶೇಡ್ಗಾರ್ ಸಂಕಲನವಿದೆ.

ಈಗಾಗಲೇ ಸಿದ್ಧಾರ್ಥ, ರನ್ ಆ್ಯಂಟನಿ, ಅನಂತು ವರ್ಸಸ್ ನುಸ್ರತ್ ಸಿನಿಮಾಗಳಿಂದ ಕನ್ನಡಿಗರ ಮನ ಗೆದ್ದಿರುವ ವಿನಯ್ ರಾಜ್​ಕುಮಾರ್, ಪೆಪೆ ಸಿನಿಮಾ ಟೀಸರ್ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ದೊಡ್ಮನೆ ಕುಟುಂಬದ ಅಭಿಮಾನಿಗಳು ಪೆಪೆ ಟೀಸರ್ ಬಿಡುಗಡೆಗೂ ಮುಂಚೆ ಮೆಜೆಸ್ಟಿಕ್ ನಲ್ಲಿ ಅಣ್ಣಮ್ಮ ದೇವಸ್ಥಾನಕ್ಕೆ ವಿಶೇಷ ಪೂಜೆ ಮಾಡಿಸಿ ಶುಭ ಹಾರೈಯಿಸಿದ್ದಾರೆ.

ಇದನ್ನು ಓದಿ:ಮದುವೆಯಾಗಲು ನಾನಿನ್ನೂ ಚಿಕ್ಕ ಹುಡುಗಿ ಎಂದ ರಶ್ಮಿಕಾ

ABOUT THE AUTHOR

...view details