ಕರ್ನಾಟಕ

karnataka

ಕೀರ್ತಿ ಸುರೇಶ್​​ಗೆ ಕೋವಿಡ್: ಸೋಂಕು ನಿರ್ಲಕ್ಷಿಸಬೇಡಿ ಎಂದ ದ.ಭಾರತದ ಖ್ಯಾತ ನಟಿ

By

Published : Jan 11, 2022, 7:36 PM IST

ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್​ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಟ್ವಿಟರ್​​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Keerthy Suresh Tests Covid-19 Positive
Keerthy Suresh Tests Covid-19 Positive

ಮುಂಬೈ:ಒಬ್ಬರ ಹಿಂದೊಬ್ಬರಂತೆ ಸಿನಿಮಾ ರಂಗದ ನಟ-ನಟಿಯರಿಗೆ ಕೊರೊನಾ ಸೋಂಕು ಬಾಧಿಸುತ್ತಿದೆ. ಇದೀಗ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್​​ಗೂ ಸೋಂಕು ದೃಢಪಟ್ಟಿದೆ.

'ನನಗೆ ಕೊರೊನಾ ಕಾಣಿಸಿಕೊಂಡಿದ್ದು, ಸೌಮ್ಯ ಲಕ್ಷಣಗಳಿವೆ. ದೇಶದಲ್ಲಿ ಕೋವಿಡ್ ಮೂರನೇ ಅಲೆ ತೀವ್ರವಾಗಿದ್ದು, ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ ಸಹ ಸೋಂಕು ದೃಢಪಟ್ಟಿದೆ' ಎಂದಿದ್ದಾರೆ.


'ಯಾವುದೇ ಕಾರಣಕ್ಕೂ ಕೊರೊನಾ ಸೋಂಕು ನಿರ್ಲಕ್ಷಿಸಬೇಡಿ. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ. ಲಸಿಕೆ ಪಡೆದುಕೊಂಡಿಲ್ಲವೆಂದರೆ ಆದಷ್ಟು ಬೇಗ ತೆಗೆದುಕೊಳ್ಳಿ' ಎಂದು ಮನವಿ ಮಾಡಿದ್ದಾರೆ.


ಇದನ್ನೂ ಓದಿ:ನಟ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ, ಪುತ್ರ ಅಕಿರ್​​ ನಂದನ್​ಗೆ ಕೋವಿಡ್​

ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಕೀರ್ತಿ ಸುರೇಶ್ ಕಳೆದ ಕೆಲ ದಿನಗಳ ಹಿಂದೆ ರಜನಿಕಾಂತ್​​ ಅವರೊಂದಿಗೆ 'ಅಣ್ಣಾಥೆ'ಯಲ್ಲಿ ಕಾಣಿಸಿಕೊಂಡಿದ್ದರು.

ABOUT THE AUTHOR

...view details