ಕರ್ನಾಟಕ

karnataka

ಜೀವನದಲ್ಲಿ ಮಾಡುವ 'ತಪ್ಪು'ಗಳಿಂದ ಕಲಿಯುವ ಬಗ್ಗೆ ಶಿಲ್ಪಾ ಶೆಟ್ಟಿ ಹೇಳಿದ್ದು ಹೀಗೆ..

By

Published : Aug 27, 2021, 1:17 PM IST

"ನಾನು ತಪ್ಪುಗಳನ್ನು ಮಾಡುತ್ತೇನೆ, ನನ್ನನ್ನು ನಾನು ಕ್ಷಮಿಸಿಕೊಳ್ಳುತ್ತೇನೆ ಹಾಗೂ ಅದರಿಂದ ಕಲಿತುಕೊಳ್ಳುತ್ತೇನೆ" ಎಂಬ ಸಾಲಿರುವ ಪುಸ್ತಕವೊಂದರ ಟಿಪ್ಪಣಿಯನ್ನು ಬಾಲಿವುಡ್​ ಬೆಡಗಿ ಶಿಲ್ಪಾ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ

ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ತನ್ನ ಪತಿ ರಾಜ್ ಕುಂದ್ರಾ ಬಂಧನಕ್ಕೊಳಗಾದ ಸುಮಾರು ಒಂದು ತಿಂಗಳ ಬಳಿಕ ಬಾಲಿವುಡ್​ ಬೆಡಗಿ ಶಿಲ್ಪಾ ಶೆಟ್ಟಿ ಡ್ಯಾನ್ಸ್ ರಿಯಾಲಿಟಿ ಶೋ ಸೂಪರ್ ಡ್ಯಾನ್ಸರ್ - ಸೀಸನ್​ 4 ಸೆಟ್​ಗೆ ಮರಳಿದ್ದಾರೆ. ನಿನ್ನೆ ತಮ್ಮ ಇನ್‌ಸ್ಟಾಗ್ರಾಮ್​ ಖಾತೆಯಲ್ಲಿ ಟಿಪ್ಪಣಿಯೊಂದನ್ನು ಪೋಸ್ಟ್ ಮಾಡಿರುವ ನಟಿ, ನಾವು ತಪ್ಪುಗಳಿಂದ ಕಲಿಯುವ ಬಗ್ಗೆ ಹೇಳಿದ್ದಾರೆ.

ಶಿಲ್ಪಾ ಶೆಟ್ಟಿ ಶೇರ್​ ಮಾಡಿರುವ ಪುಸ್ತಕವೊಂದರ 'Mistakes' (ತಪ್ಪುಗಳು) ಎಂಬ ಶೀರ್ಷಿಕೆಯ ಆಯ್ದ ಭಾಗವು ಇಟಾಲಿಯನ್ ನಟಿ ಸೋಫಿಯಾ ಲೊರೆನ್ ಅವರ ಸಂದೇಶದೊಂದಿಗೆ ಪ್ರಾರಂಭವಾಗುತ್ತದೆ. ಆ ಸಂದೇಶ ಹೀಗಿದೆ - "ತಪ್ಪುಗಳು ಜೀವನದುದ್ದಕ್ಕೂ ಪಾವತಿ ಮಾಡುವ ಬಾಕಿ ಹಣದಂತೆ"

ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿದ ಟಿಪ್ಪಣಿ

ಈ ಸಂದೇಶದ ಬಳಿಕ ಪುಸ್ತಕದ ಟಿಪ್ಪಣಿಯಲ್ಲಿ "ಇಲ್ಲಿ- ಅಲ್ಲಿ ಕೆಲವು ತಪ್ಪುಗಳನ್ನು ಮಾಡದೆ ಇದ್ದರೆ ನಾವು ನಮ್ಮ ಜೀವನವನ್ನು ಆಸಕ್ತಿದಾಯಕವಾಗಿಸಲು ಸಾಧ್ಯವಿಲ್ಲ. ಆದರೆ ಅವು ಅಪಾಯಕಾರಿ ಅಥವಾ ಇತರ ಜನರನ್ನು ನೋಯಿಸುವ ತಪ್ಪುಗಳಾಗಿರಬಾರದು ಎಂದು ನಾವು ಭಾವಿಸುತ್ತೇವೆ. ಆದರೆ ತಪ್ಪುಗಳು ಆಗ್ತಾ ಇರತ್ತೆ. ತಪ್ಪುಗಳಿಂದ ನಾವು ಕಲಿತದ್ದರಿಂದ ನಮ್ಮ ತಪ್ಪುಗಳನ್ನು ನಾವು ಮರೆಯಲು ಇಷ್ಟಪಡುವ ವಸ್ತುಗಳಂತೆ ನೋಡಬಹುದು" ಎಂದು ಬರೆಯಲಾಗಿದೆ.

ಇದನ್ನೂ ಓದಿ:Blue Film Case​​: ರಾಜ್ ಕುಂದ್ರಾಗೆ ರಿಲೀಫ್​ ನೀಡಲು ಬಾಂಬೆ ಹೈಕೋರ್ಟ್​ ನಿರಾಕರಣೆ

ಕೊನೆಯಲ್ಲಿ, "ನಾನು ತಪ್ಪುಗಳನ್ನು ಮಾಡುತ್ತೇನೆ, ನನ್ನನ್ನು ನಾನು ಕ್ಷಮಿಸಿಕೊಳ್ಳುತ್ತೇನೆ ಹಾಗೂ ಅದರಿಂದ ಕಲಿತುಕೊಳ್ಳುತ್ತೇನೆ" ಎಂಬ ಸಾಲು ಈ ಟಿಪ್ಪಣಿಯಲ್ಲಿದೆ. ಇದನ್ನು ಶೇರ್​ ಮಾಡುವ ಮೂಲಕ ಶಿಲ್ಪಾ ಶೆಟ್ಟಿ ತಾವು ಮಾಡಿದ್ದ ತಪ್ಪನ್ನು ಒಪ್ಪಿಕೊಂಡು, ಅದರಿಂದ ಹೊಸ ಪಾಠವನ್ನು ಕಲಿತಿರುವಂತೆ ಹೇಳಿಕೊಂಡಂತಿದೆ.

ಇದನ್ನೂ ಓದಿ:ಶಿಲ್ಪಾ ಶೆಟ್ಟಿ ಕಮ್​ ಬ್ಯಾಕ್​​: 'ನಿಮ್ಮ ರಕ್ಷಣೆಗಾಗಿ ನೀವೇ ಯೋಧರಾಗಿರಿ' ಎಂದ 'ಹಂಗಾಮ' ಬೆಡಗಿ

ಲಂಡನ್ ಮೂಲದ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು, ಮೊಬೈಲ್ ಆ್ಯಪ್ ಮೂಲಕ ಅಶ್ಲೀಲ ವಿಡಿಯೋ ಸ್ಟ್ರೀಮಿಂಗ್ ಮಾಡುವ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪದಡಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್​ ಕುಂದ್ರಾ ಮತ್ತು ರಯಾನ್ ಥಾರ್ಪೆ ಸೇರಿ 11 ಮಂದಿಯನ್ನು ಜುಲೈ 19 ರಂದು ಮುಂಬೈ ಪೊಲೀಸರು ಬಂಧಿಸಿದ್ದರು. ಕೆಲ ದಿನಗಳ ಕಾಲ ಮೌನವಾಗಿದ್ದ ನಟಿ ಸುದೀರ್ಘ ವಿರಾಮದ ನಂತರ ಆಗಸ್ಟ್ 23ರಂದು ಇನ್‌ಸ್ಟಾಗ್ರಾಮ್​ನಲ್ಲಿ ಯೋಗ ಮಾಡುವ ವಿಡಿಯೋವನ್ನು ಪೋಸ್ಟ್​ ಮಾಡುವ ಮೂಲಕ 'ನಿಮ್ಮ ರಕ್ಷಣೆಗಾಗಿ ನೀವೇ ಯೋಧರಾಗಿರಿ' ಎಂದು ಅಭಿಮಾನಿಗಳಿಗೆ ಸಲಹೆ ನೀಡಿದ್ದರು.

ABOUT THE AUTHOR

...view details