ETV Bharat / sitara

ಶಿಲ್ಪಾ ಶೆಟ್ಟಿ ಕಮ್​ ಬ್ಯಾಕ್​​: 'ನಿಮ್ಮ ರಕ್ಷಣೆಗಾಗಿ ನೀವೇ ಯೋಧರಾಗಿರಿ' ಎಂದ 'ಹಂಗಾಮ' ಬೆಡಗಿ

author img

By

Published : Aug 23, 2021, 10:31 PM IST

ಸಾಕಷ್ಟು ವಿವಾದಗಳಿಂದ ಸೋಷಿಯಲ್​ ಮೀಡಿಯಾದಿಂದ ದೂರವಾಗಿದ್ದ ನಟಿ ಶಿಲ್ಪಾ ಶೆಟ್ಟಿ ಕಮ್​ ಬ್ಯಾಕ್​ ಮಾಡಿದ್ದು, ತಮ್ಮ ಅಭಿಮಾನಿಗಳಿಗೆ ಯೋಗ ಮಾಡುವ ವಿಡಿಯೋ ಒಂದನ್ನು ಶೇರ್​ ಮಾಡಿದ್ದಾರೆ. ಅಲ್ಲದೇ, ನಿಮ್ಮ 'ರಕ್ಷಣೆಗಾಗಿ ನೀವೆ ಯೋಧರಾಗಿರಿ' ಎಂದು ಪ್ರೋತ್ಸಾಹಿಸಿದ್ದಾರೆ.

shilpa shetty
ಶಿಲ್ಪಾ ಶೆಟ್ಟಿ

ಪತಿಯ ಬಂಧನದಿಂದ ಕುಗ್ಗಿದ್ದ ನಟಿ ಶಿಲ್ಪಾ ಶೆಟ್ಟಿ ಸುದೀರ್ಘ ವಿರಾಮದ ನಂತರ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು, ಯೋಗ ಮಾಡುವ ವಿಡಿಯೋವನ್ನು ಪೋಸ್ಟ್​ ಮಾಡುವ ಮೂಲಕ 'ನಿಮ್ಮ ರಕ್ಷಣೆಗಾಗಿ ನೀವೇ ಯೋಧರಾಗಿರಿ' ಎಂದು ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

ತಮ್ಮ ಇನ್​​​ಸ್ಟಾಗ್ರಾಂ ಖಾತೆಯಲ್ಲಿ ನಿಮ್ಮ ರಕ್ಷಣೆಗಾಗಿ ನೀವೆ ಯೋಧರಾಗಿರಿ, ಆಗ ಮಾತ್ರ ಜೀವನದಲ್ಲಿ ಉಂಟಾಗುವ ಏರಿಳಿತಗಳನ್ನು ಸುಲಭವಾಗಿ ಎದುರಿಸಬಹದು. ನಾನು ಪಾಸಿಟಿವ್​​ನೆಸ್​​​​​​ಗಾಗಿ ಯೋಗದ ಮೊರೆ ಹೋಗುವೆ. ಇದಕ್ಕಾಗಿ ವೀರಭದ್ರಾಸನ, ಮಾಲಾಸನ ಮತ್ತು ಕ್ರಿಯಾತ್ಮಕ ಹಿಪ್​ ಓಪನಿಂಗ್​​ ಆಸನಗಳನ್ನು ಮಾಡುವುದಾಗಿ ತಿಳಿಸಿದ್ದಾರೆ.

ಸಾಕಷ್ಟು ವಿವಾದಗಳ ನಂತರ ಶಿಲ್ಪಾ ಡ್ಯಾನ್ಸ್ ರಿಯಾಲಿಟಿ ಶೋ 'ಸೂಪರ್ ಡ್ಯಾನ್ಸರ್ 4' ಗೆ ಸೆಲೆಬ್ರಿಟಿ ಜಡ್ಜ್ ಆಗಿ ಮರಳಿದ್ದಾರೆ. ಅಶ್ಲೀಲ ಪ್ರಕರಣದಲ್ಲಿ ಆಕೆಯ ಪತಿ ರಾಜ್ ಕುಂದ್ರಾ ಬಂಧನದ ವಿವಾದ ನಡೆಯುತ್ತಿರುವ ಕಾರಣ ಅವರು ಕಾರ್ಯಕ್ರಮದಿಂದ ವಿರಾಮ ಪಡೆದಿದ್ದರು. ಶನಿವಾರ, ಧಡ್ಕನ್ ತಾರೆ ಡ್ಯಾನ್ಸ್ ರಿಯಾಲಿಟಿ ಶೋನ ಫೋಟೋಶೂಟ್​​​​ ಚಿತ್ರಗಳನ್ನು ಸಹ ಹಂಚಿಕೊಂಡಿದ್ದರು.

ರಾಜ್​ ಕುಂದ್ರಾನನ್ನು ಅಶ್ಲೀಲ ಚಿತ್ರಗಳ ಚಿತ್ರೀಕರಣ ಆರೋಪದ ಮೇಲೆ ಜುಲೈ 19 ರಂದು ಬಂಧಿಸಲಾಗಿತ್ತು. ನಂತರ ಶಿಲ್ಪಾ ಸಾಕಷ್ಟು ಅವಮಾನ ಅನುಭವಿಸಿ ಟ್ರೋಲ್​ಗೆ ಒಳಗಾಗಿದ್ದರು. ನಂತರ ಸೋಷಿಯಲ್ ಮೀಡಿಯಾದಿಂದಲೇ ದೂರವಾಗಿದ್ದರು. ಸದ್ಯ ಕಮ್​ ಬ್ಯಾಕ್​ ಮಾಡಿರುವ ನಟಿ, ಹಂಗಾಮಾ-2 ಚಿತ್ರಿಕರಣದಲ್ಲಿ ಬ್ಯುಸಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.