ಕರ್ನಾಟಕ

karnataka

WhatsApp : 'ವಾಟ್ಸ್​ಆ್ಯಪ್​ ಚಾನಲ್ಸ್'​ ಎಂಬ ಹೊಸ ವೈಶಿಷ್ಟ್ಯ ಪರಿಚಯಿಸಿದ ವಾಟ್ಸ್​ಆ್ಯಪ್.. ಇಲ್ಲಿದೆ ಫುಲ್​ ಡಿಟೇಲ್ಸ್​!

By

Published : Jun 9, 2023, 10:47 AM IST

ಮೆಸೇಜಿಂಗ್​ ಅಪ್ಲಿಕೇಶನ್​ ವಾಟ್ಸ್​ಆ್ಯಪ್​ 'ವಾಟ್ಸ್​ಆ್ಯಪ್​ ಚಾನಲ್ಸ್'​ ಎಂಬ ಹೊಸ ವೈಶಿಷ್ಟ್ಯ ಪರಿಚಯಿಸಿದೆ. ಅದರ ಬಗ್ಗೆ ಇಲ್ಲಿದೆ ಮಾಹಿತಿ.

ವಾಟ್ಸಾಪ್​ ಚಾನಲ್ಸ್ ವಾಟ್ಸಾಪ್​ ಚಾನಲ್ಸ್
ವಾಟ್ಸಾಪ್​ ಚಾನಲ್ಸ್ ವಾಟ್ಸಾಪ್​ ಚಾನಲ್ಸ್

ವಾಷಿಂಗ್ಟನ್​​ (ಅಮೆರಿಕ) :ಪ್ರಪಂಚದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsApp ಇದೀಗ 'WhatsApp Channels' ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ಚಾನಲ್‌ಗಳ ವೈಶಿಷ್ಟ್ಯವು ಉದ್ಯಮಿಗಳಿಗೆ ಮತ್ತು ವಿಷಯ ರಚನೆಕಾರರಿಗೆ ವಿಶೇಷವಾಗಿ ಉಪಯುಕ್ತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಚಾನಲ್ ವೈಶಿಷ್ಟ್ಯದ ಬಳಕೆದಾರರು ಕಾಲಕಾಲಕ್ಕೆ ಬೇಕಾದ ಅಪ್​ಡೇಟ್ಸ್​ ಬಗ್ಗೆ ತಿಳಿಯಬಹುದಾಗಿದೆ. ಈ ಫೀಚರ್ ಬಳಕೆದಾರರಿಗೆ ತುಂಬಾ ಉಪಯುಕ್ತವಾಗಿರಲಿದೆ. ಸದ್ಯ ಪ್ರಾಯೋಗಿಕ ಹಂತದಲ್ಲಿದ್ದು ಶೀಘ್ರದಲ್ಲೆ ಎಲ್ಲಾ ವಾಟ್ಸ್​ಆ್ಯಪ್​​ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಮೆಟಾ ಕಂಪನಿ ತಿಳಿಸಿದೆ.

ವಾಟ್ಸ್​ಆ್ಯಪ್​ ಚಾನೆಲ್​ ವೈಶಿಷ್ಟ್ಯ:ವಾಟ್ಸ್​ಆ್ಯಪ್​​ ಚಾನಲ್ ವೈಶಿಷ್ಟ್ಯವು ಟೆಲಿಗ್ರಾಮ್‌ನ ಚಾನಲ್ ಮಾದರಿಯಲ್ಲೇ ಕಾರ್ಯನಿರ್ವಹಿಸುತ್ತದೆ. ಚಾನೆಲ್ ವೈಶಿಷ್ಟ್ಯದ ಸಹಾಯದಿಂದ, ನೀವು ಆಯ್ದ WhatsApp ಗುಂಪಿನಲ್ಲಿ ನಿಮ್ಮ ಸಂದೇಶಗಳನ್ನು ಪ್ರಸಾರ ಮಾಡಬಹುದಾಗಿದೆ. WhatsApp ಚಾನೆಲ್ ವೈಶಿಷ್ಟ್ಯವು ಮುಖ್ಯವಾಗಿ ಕಾಲೇಜುಗಳು, ಸಂಸ್ಥೆಗಳು ಮತ್ತು ಕಂಪನಿಗಳಿಗೆ ಬಹಳ ಉಪಯುಕ್ತ ವೈಶಿಷ್ಟ್ಯವಾಗಿದೆ.

ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ನೇರವಾಗಿ ವಾಟ್ಸ್​ಆ್ಯಪ್​​​ ನಲ್ಲಿ ಪ್ರಮುಖ ಅಪಡೇಟ್ಸ್​ ಪಡೆಯಲು ಇದು ಸುಲಭವಾದ ಮಾರ್ಗವಾಗಿದೆ. ಈ 'ಚಾನೆಲ್'ಗಳನ್ನು 'ಅಪ್‌ಡೇಟ್ಸ್' ಎಂಬ ಹೊಸ ಟ್ಯಾಬ್ ಮೂಲಕ ಪರಿಚಯಿಸಲಾಗುತ್ತದೆ. ಪ್ರಸ್ತುತ ಈ ವೈಶಿಷ್ಟ್ಯವನ್ನು ಕೊಲಂಬಿಯಾ ಮತ್ತು ಸಿಂಗಾಪುರದಲ್ಲಿ ಪ್ರಾರಂಭಿಸಲಾಗುತ್ತಿದೆ. ಶೀಘ್ರದಲ್ಲೇ ಇದು ಭಾರ ಸೇರದಿಂತೆ ಹಲವು ದೇಶದ ಬಳಕೆದಾರರಿಗೂ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.

ಒನ್ ಟು ಮೆನಿ ಕಾನ್ಸೆಪ್ಟ್ ನೊಂದಿಗೆ ವಾಟ್ಸ್ಆಪ್ ಈ ಚಾನೆಲ್ ಫೀಚರ್ ಕ್ರಿಯೇಟ್ ಮಾಡಿದೆ ಎನ್ನುತ್ತಾರೆ ಟೆಕ್ ತಜ್ಞರು. ಅದರಲ್ಲೂ ಬಳಕೆದಾರರು ತಮಗೆ ಇಷ್ಟವಾದ ಚಾನೆಲ್​ಗಳನ್ನು ಆಯ್ಕೆ ಮಾಡಿ ಅಪ್​ಡೇಟ್​ಗಳನ್ನು ಪಡೆದುಕೊಳ್ಳಬಹುದಾಗಿದೆಯಂತೆ. ಈ ಚಾನಲ್‌ಗಳ ವೈಶಿಷ್ಟ್ಯದಲ್ಲಿ WhatsApp ಗೌಪ್ಯತೆ ಬಗ್ಗೆಯೂ ಪ್ರಾಮುಖ್ಯತೆಯನ್ನು ನೀಡುತ್ತಿದೆ ಎಂದು ಕಂಪನಿ ಹೇಳುತ್ತದೆ.

ಆಯ್ದ ಚಾನಲ್‌ಗಳಿಂದ ನಾವು ಸ್ವೀಕರಿಸುವ ಸಂದೇಶಗಳು ಎಂಡ್ - ಟು -ಎಂಡ್ ಎನ್‌ಕ್ರಿಪ್ಶನ್ ಆಗಿರುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಕಂಪನಿಯು ಖಾಸಗಿತನದ ವಿಷಯದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದೆ. ಚಾನಲ್​ಗಳನ್ನು ಅನುಸರಿಸುವವರ ಫೋನ್ ಸಂಖ್ಯೆ ಮತ್ತು ಇತರ ವಿವರಗಳನ್ನು ಗೌಪ್ಯವಾಗಿಡಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸಾಮಾನ್ಯವಾಗಿ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಾವು ಅನುಸರಿಸುವ ಚಾನಲ್‌ಗಳು ಎಲ್ಲರಿಗೂ ಗೋಚರಿಸುತ್ತವೆ. ಆದರೆ ವಾಟ್ಸ್​ಆ್ಯಪ್​ ಪರಿಚಯಿಸಿರುವ ಈ ಚಾನೆಲ್​ಗಳಲ್ಲಿ ನಾವು ಅನುಸರಿಸುವ ಚಾನೆಲ್​ಗಳ ವಿವರ ಬೇರೆಯವರಿಗೆ ತಿಳಿಯುವುದಿಲ್ಲ ಎಂದು ಕಂಪನಿ ಹೇಳಿದೆ.

ಒನ್ ವೇ ಕಮ್ಯುನಿಕೇಶನ್: ಚಾನೆಲ್​ ಫೀಚರ್​ನಲ್ಲಿ ಒನ್ ವೇ ಕಮ್ಯುನಿಕೇಶನ್ ಇರಲಿದೆ. ಅದರ ಸಹಾಯದಿಂದ, ನಿರ್ವಾಹಕರು ತಮ್ಮ ಅನುಯಾಯಿಗಳಿಗೆ ಫೋಟೋಗಳು, ವಿಡಿಯೋಗಳು, ಸ್ಟಿಕ್ಕರ್‌ಗಳು ಮತ್ತು ಸಮೀಕ್ಷೆಗಳನ್ನು ತ್ವರಿತವಾಗಿ ಕಳುಹಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ, WhatsApp ಬಳಕೆದಾರರು ತಮ್ಮ ನೆಚ್ಚಿನ ಚಾನಲ್​ ಅನ್ನು ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಹುಡುಕಲು ಸಾಧ್ಯವಾಗಲಿದೆ.

ವಾಟ್ಸ್​​ಆಪ್ ಈಗಾಗಲೇ ಹಲವು ಅಪ್​ಡೇಟ್ ಗಳೊಂದಿಗೆ ಬಳಕೆದಾರರಿಗೆ ಹೊಸ ಅನುಭವ ನೀಡಲು ತಯಾರಿ ನಡೆಸುತ್ತಿದೆ. ತನ್ನ ಪ್ರತಿಸ್ಪರ್ಧಿಗಳಿಂದ ಬರುತ್ತಿರುವ ಸ್ಪರ್ಧೆಯನ್ನು ತಡೆದುಕೊಳ್ಳಲು WhatsApp ಈಗಾಗಲೇ ಹೊಸ ವೈಶಿಷ್ಟ್ಯಗಳೊಂದಿಗೆ ಪರಿಚಯಿಸುತ್ತಲೆ ಇದೆ.

ಇದನ್ನೂ ಓದಿ:ಕಂಟೆಂಟ್​ ಕ್ರಿಯೇಟರ್​ಗಳೊಂದಿಗೆ ಬಳಕೆದಾರರ ಇಮೇಲ್ ಐಡಿ ಶೇರ್: ಟ್ವಿಟರ್ ಘೋಷಣೆ

ABOUT THE AUTHOR

...view details