ETV Bharat / science-and-technology

ಕಂಟೆಂಟ್​ ಕ್ರಿಯೇಟರ್​ಗಳೊಂದಿಗೆ ಬಳಕೆದಾರರ ಇಮೇಲ್ ಐಡಿ ಶೇರ್: ಟ್ವಿಟರ್ ಘೋಷಣೆ

ಟ್ವಿಟರ್ ಚಂದಾದಾರರ ಇಮೇಲ್ ಐಡಿಗಳನ್ನು ಕಂಟೆಂಟ್​ ಕ್ರಿಯೇಟರ್​ಗಳೊಂದಿಗೆ ಶೇರ್ ಮಾಡಲಾಗುವುದು ಎಂದು ಟ್ವಿಟರ್ ಘೋಷಿಸಿದೆ.

Twitter to share emails of subscribers with content creators: Elon Musk

author img

By

Published : Jun 7, 2023, 3:48 PM IST

ಟ್ವಿಟರ್ ಇನ್ನು ಮುಂದೆ ತನ್ನ ಚಂದಾದಾರರ (ಒಪ್ಪಿಗೆ ಸೂಚಿಸಿದ ಬಳಕೆದಾರರು) ಇಮೇಲ್ ವಿಳಾಸಗಳನ್ನು ಕಂಟೆಂಟ್​ ಕ್ರಿಯೇಟರ್​ಗಳೊಂದಿಗೆ ಹಂಚಿಕೊಳ್ಳುವುದಾಗಿ ಘೋಷಿಸಿದೆ. ಕಂಟೆಂಟ್​ ಕ್ರಿಯೇಟರ್​ಗಳು ಟ್ವಿಟರ್​ನಿಂದ ಹೊರನಡೆಯುವ ಸಂದರ್ಭ ಬಂದಲ್ಲಿ ಅವರು ತಮ್ಮ ಚಂದಾದಾರರನ್ನು ತಮ್ಮೊಂದಿಗೆ ಕರೆದೊಯ್ಯುವ ಅವಕಾಶ ನೀಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ವಿಟರ್​ ಮಾಲೀಕ ಎಲೋನ್ ಮಸ್ಕ್ ಬುಧವಾರ ಹೇಳಿದ್ದಾರೆ.

  • This platform will provide email addresses of subscribers (who opt in) to content creators, so that creators are able to leave this platform easily & take their subscribers with them if they want

    — Elon Musk (@elonmusk) June 7, 2023 " class="align-text-top noRightClick twitterSection" data=" ">

ಟ್ವಿಟರ್​ನ ಹೊಸ ಕ್ರಮವು ಟ್ವಿಟರ್​ನಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದ್ದು, ಇದರ ಬಗ್ಗೆ ವಿವರವಾದ ಮಾಹಿತಿ ತಿಳಿಯಲು ಚಂದಾದಾರರು ಮತ್ತು ಕಂಟೆಂಟ್ ಕ್ರಿಯೇಟರ್​ಗಳು ತಡಕಾಡುತ್ತಿದ್ದಾರೆ. ಒಂದೊಮ್ಮೆ ತಮ್ಮ ಇಮೇಲ್ ಐಡಿಗಳನ್ನು ಕಂಟೆಂಟ್ ಕ್ರಿಯೇಟರ್​ಗಳೊಂದಿಗೆ ಹಂಚಿಕೊಳ್ಳಬಹುದಾದರೆ ಅವರ ಇಮೇಲ್ ಐಡಿಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಬಹುದೇ ಎಂದು ಮಸ್ಕ್​ಗೆ ಅನೇಕರು ಪ್ರಶ್ನೆ ಮಾಡಿದ್ದಾರೆ.

ತಾವೂ ಕೂಡ ಬೇರೆ ಸೋಶಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ಚಂದಾದಾರರನ್ನು ಹೊಂದಿರುವುದರಿಂದ ಕಂಟೆಂಟ್​ ಕ್ರಿಯೇಟರ್​ಗಳ ಇಮೇಲ್​ ಐಡಿಯನ್ನು ತಮ್ಮೊಂದಿಗೆ ಹಂಚಿಕೊಳ್ಳಬಹುದಲ್ಲ ಎಂದು ಅನೇಕರು ಕೇಳಿದ್ದಾರೆ. ಅಲ್ಲದೆ ಈ ಮಾಹಿತಿಯನ್ನು ಯಾವ ಮಾದರಿಯಲ್ಲಿ ಹಂಚಿಕೊಳ್ಳಲಾಗುತ್ತದೆ ಎಂದು ಅನೇಕರು ಪ್ರಶ್ನಿಸಿದ್ದಾರೆ.

ಹೊಸ ಸಿಇಒ ಆಗಮನದ ನಂತರ ಮಹತ್ವದ ನಿರ್ಧಾರ: ಟ್ವಿಟರ್ ಸಿಇಒ ಆಗಿ ಲಿಂಡಾ ಯಕರಿನೊ ಅವರು ಅಧಿಕಾರ ವಹಿಸಿಕೊಂಡ ಎರಡು ದಿನಗಳ ನಂತರ ಟ್ವಿಟರ್ ಈ ಮಹತ್ವದ ಕ್ರಮ ಜಾರಿಗೊಳಿಸಿರುವುದು ಗಮನಾರ್ಹ. ಅಮೆರಿಕದಲ್ಲಿ ಟ್ವಿಟರ್ ಜಾಹೀರಾತು ಆದಾಯ ಕಡಿಮೆಯಾಗಿರುವುದು ಹಾಗೂ ಎಲೋನ್ ಮಸ್ಕ್ ಅವರು ಟೆಸ್ಲಾ ಮತ್ತು ಸ್ಪೇಸ್​ ಎಕ್ಸ್​ ಮೇಲೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗುವಂತೆ ಮಾಡಲು ಟ್ವಿಟರ್​ಗೆ ಹೊಸ ಸಿಇಓ ನೇಮಕ ಮಾಡಲಾಗಿದೆ.

ಈ ಮುನ್ನ ಯಕರಿನೊ ಎನ್​ಬಿಸಿ ಯುನಿವರ್ಸಲ್ ಕಂಪನಿಯ ಗ್ಲೋಬಲ್ ಆಡ್ವರ್ಟೈಸಿಂಗ್ ಆ್ಯಂಡ್ ಪಾರ್ಟನರ್​ಶಿಪ್ಸ್​ ನ ಮುಖ್ಯಸ್ಥರಾಗಿದ್ದರು. ಇದೀಗ ಅವರು ತಮ್ಮ ಲಿಂಕ್ಡ್​ಇನ್ ಪ್ರೊಫೈಲ್​ನಲ್ಲಿ ತಮ್ಮ ಬಯೋ ಅನ್ನು ಟ್ವಿಟರ್ ಸಿಇಓ ಎಂದು ಅಪ್ಡೇಟ್ ಮಾಡಿದ್ದಾರೆ. ಟ್ವಿಟರ್‌ನ ಅಮೆರಿಕದಲ್ಲಿನ ಜಾಹೀರಾತು ಆದಾಯವು ಏಪ್ರಿಲ್ 1 ರಿಂದ ಮೇ ಮೊದಲ ವಾರದ ಐದು ವಾರಗಳವರೆಗೆ 88 ಮಿಲಿಯನ್ ಡಾಲರ್ ಆಗಿತ್ತು. ಇದು ಹಿಂದಿನ ವರ್ಷಕ್ಕಿಂತ 59 ಶೇಕಡಾ ಕಡಿಮೆಯಾಗಿದೆ. "ಟ್ವಿಟರ್​ನ ಆಂತರಿಕ ಮುನ್ಸೂಚನೆಗಳಲ್ಲಿ ಕಂಪನಿಯ ಜಾಹೀರಾತು ಮಾರಾಟ ಕ್ಷೀಣಿಸಲಿದೆ ಮತ್ತು ಇದು ಹೊಸ ಮುಖ್ಯ ಕಾರ್ಯನಿರ್ವಾಹಕರಿಗೆ ಕಠಿಣ ಸವಾಲನ್ನು ಒಡ್ಡಲಿದೆ" ಎಂದು ವರದಿ ಹೇಳಿದೆ.

"ಉಜ್ವಲ ಭವಿಷ್ಯವನ್ನು ಸೃಷ್ಟಿಸುವ ನಿಮ್ಮ ದೃಷ್ಟಿಕೋನದಿಂದ ನಾನು ದೀರ್ಘಕಾಲದಿಂದ ಸ್ಫೂರ್ತಿ ಪಡೆದಿದ್ದೇನೆ. ಈ ದೃಷ್ಟಿಯನ್ನು ಟ್ವಿಟರ್‌ಗೆ ತರಲು ಮತ್ತು ಈ ವ್ಯವಹಾರವನ್ನು ಒಟ್ಟಿಗೆ ಪರಿವರ್ತಿಸಲು ಸಹಾಯ ಮಾಡಲು ನಾನು ಉತ್ಸುಕಳಾಗಿದ್ದೇನೆ" ಎಂದು ಲಿಂಡಾ ಯಕರಿನೊ ಎಲೋನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಟ್ವಿಟರ್​ನ ಭವಿಷ್ಯಕ್ಕಾಗಿ ನಾನು ಬದ್ಧಳಾಗಿದ್ದೇನೆ. ಆ ಭವಿಷ್ಯಕ್ಕೆ ನಿಮ್ಮ ಪ್ರತಿಕ್ರಿಯೆ ಅತ್ಯಗತ್ಯ. ಎಲ್ಲದಕ್ಕೂ ನಾನು ಇಲ್ಲಿದ್ದೇನೆ. ಸಂಭಾಷಣೆಯನ್ನು ಮುಂದುವರಿಸೋಣ ಮತ್ತು ಟ್ವಿಟರ್ 2.0 ಅನ್ನು ಒಟ್ಟಿಗೆ ನಿರ್ಮಿಸೋಣ ಎಂದು ಅವರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ : ಭಾರತದಲ್ಲಿ ಐಡಿ ವೆರಿಫಿಕೇಶನ್ ಆರಂಭಿಸಿದ ಲಿಂಕ್ಡ್​ ಇನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.