ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮೆಟಾ ಒಡೆತನದ ವಾಟ್ಸ್ ಆ್ಯಪ್ ಚಲನಚಿತ್ರ ನಿರ್ಮಾಣ ಉದ್ಯಮಕ್ಕೆ ಕಾಲಿಡಲಿದೆ ಎಂಬ ಮಾಹಿತಿ ಬಂದಿದೆ. ವಾಟ್ಸ್ ಆ್ಯಪ್ ತನ್ನ ಮೊದಲ ಒರಿಜಿನಲ್ ಶಾರ್ಟ್ ಫಿಲ್ಮ್ ನೈಜಾ ಓಡಿಸ್ಸಿ (Naija Odyssey) ಅನ್ನು ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಯೂಟ್ಯೂಬ್ಗಳಲ್ಲಿ ಬಿಡುಗಡೆ ಮಾಡಲಿದೆ. 12 ನಿಮಿಷದ ಶಾರ್ಟ್ ಫಿಲ್ಮ್ ಎನ್ಬಿಎ ಆಟಗಾರ ಗಿಯಾನಿಸ್ ಅಂಟೆಟೊಕೊಂಪೊ ಅವರ ಕತೆಯನ್ನು ಹೇಳಲಿದೆ. ಗ್ರೀಸ್ನಲ್ಲಿ ಹುಟ್ಟಿದ ಆಟಗಾರ ಗಿಯಾನಿಸ್ ತಂದೆ-ತಾಯಿ ನೈಜೀರಿಯಾದವರು.
ದಿ ಗ್ರೀಕ್ ಫ್ರೀಕ್. ಅದು ನಾನಲ್ಲ, ಅದರಲ್ಲಿರುವುದೆಲ್ಲ ನಾನಲ್ಲ. ನೈಜಾ ಓಡಿಸ್ಸಿ, ಗಿಯಾನಿಸ್ ಅವರ ಬಹು ಸಂಸ್ಕೃತಿಗಳ ಕತೆ. ವಾಟ್ಸ್ಆ್ಯಪ್ ನಿಂದ. ಸೆಪ್ಟೆಂಬರ್ 21ರಂದು ಪ್ರೈಮ್ ವಿಡಿಯೋ ಮೇಲೆ ಸ್ಟ್ರೀಮಿಂಗ್ ಎಂದು ವಾಟ್ಸ್ಆ್ಯಪ್ ಟ್ವೀಟ್ ಮಾಡಿದೆ.