ಹೊಸ ಫೀಚರ್ಸ್​ ಪರಿಚಯಿಸುತ್ತಿರುವ ಸ್ನ್ಯಾಪ್‌ಚಾಟ್‌: ವಿಶೇಷತೆ ಏನ್​ ಗೊತ್ತಾ ?

author img

By

Published : Sep 16, 2022, 5:08 PM IST

ಸ್ನ್ಯಾಪ್‌ಚಾಟ್‌

ಈಗಾಗಲೇ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿರುವ ಸ್ನ್ಯಾಪ್‌ಚಾಟ್‌ ಇದೀಗ ಹೊಸ ಫೀಚರ್ಸ್​ವೊಂದನ್ನು ಪರಿಚಯಿಸಿದೆ. ಐಫೋನ್​ ಬಳಕೆದಾರರಿಗಾಗಿ iOS 16 ಲಾಕ್ ಸ್ಕ್ರೀನ್ ವಿಜೆಟ್‌ ಒಳಗೊಂಡ ಹೊಸ ಫೀಚರ್ಸ್​ ಪರಿಚಯಿಸಿದೆ.

ಸ್ಯಾನ್ ಫ್ರಾನ್ಸಿಸ್ಕೋ: ಜನಪ್ರಿಯ ಸೋಷಿಯಲ್​​ ಮೀಡಿಯಾ ಅಪ್ಲಿಕೇಶನ್‌ಗಳಲ್ಲಿ ಸ್ನ್ಯಾಪ್‌ಚಾಟ್‌ ಕೂಡ ಒಂದಾಗಿದೆ. ಇದು ಐಫೋನ್​ ಬಳಕೆದಾರರಿಗಾಗಿ iOS 16 ಲಾಕ್ ಸ್ಕ್ರೀನ್ ವಿಜೆಟ್‌ಗಳನ್ನು ಒಳಗೊಂಡ ಹೊಸ ಫೀಚರ್ಸ್​ನನ್ನು ಪರಿಚಯಿಸಿದೆ. ಸ್ನೇಹಿತರೊಂದಿಗೆ ಸುಲಭವಾಗಿ ಸಂಭಾಷಣೆ ನಡೆಸಲು ಸಹಾಯ ಮಾಡುವ ಹೊಸ ಫೀಚರ್ಸ್​ನನ್ನು ಪರಿಚಯಿಸುತ್ತಿದೆ ಎಂದು ಕಂಪನಿ ಹೇಳಿದೆ.

ಚಾಟ್ ಟ್ಯಾಬ್‌ನ ಮೇಲ್ಭಾಗದಲ್ಲಿರುವ ತನ್ನ ಹೊಸ ಚಾಟ್ ಶಾರ್ಟ್‌ ಕಟ್‌ಗಳನ್ನು ಇನ್ನಷ್ಟು ಸುಲಭಗೊಳಿಸಲಿದೆ. ಇದರಿಂದ ಓದದಿರುವ ಸ್ನ್ಯಾಪ್‌ಗಳು ಮತ್ತು ಸ್ನೇಹಿತರ ಚಾಟ್‌ಗಳನ್ನು ಗುರುತಿಸುವುದು, ಮಿಸ್ಡ್ ಕಾಲ್‌ಗಳನ್ನು ನೋಡುವುದು ಮತ್ತು ಕಥೆಗಳಿಗೆ ಪ್ರತ್ಯುತ್ತರ ನೀಡಬಹುದಾಗಿದೆ ಎಂದು ಸ್ನ್ಯಾಪ್ ಚಾಟ್ ಉಲ್ಲೇಖಿಸಿದೆ.

ನಮ್ಮ ಹೊಸ ಲಾಕ್ ಸ್ಕ್ರೀನ್ ವಿಜೆಟ್‌ಗಳು, ಈಗ iOS 16 ನೊಂದಿಗೆ ಲಭ್ಯವಿದೆ. ಇದು ನಿಮ್ಮ ಬೆಸ್ಟಿಯೊಂದಿಗಿನ ಸಂಭಾಷಣೆಯನ್ನು ಲಾಕ್ ಸ್ಕ್ರೀನ್‌ನಲ್ಲಿಯೇ ಉಳಿಸುತ್ತದೆ. ಆದ್ದರಿಂದ ನೀವು ಒಂದು ಟ್ಯಾಪ್‌ನಲ್ಲಿ ಚಾಟ್‌ಗಳನ್ನು ಪ್ರಾರಂಭಿಸಬಹುದು ಎಂದು ಕಂಪನಿಯು ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ: ಭಾರತೀಯ ಗ್ರಾಹಕರಿಗೆ ಮೊಮೆಂಟಮ್ 4 ವೈರ್‌ಲೆಸ್​ ಹೆಡ್‌ಸೆಟ್ ಪರಿಚಯಿಸಿದ ಸೆನ್‌ಹೈಸರ್

ಸ್ನ್ಯಾಪ್‌ಚಾಟ್ ಪ್ರಶ್ನೆ ಸ್ಟಿಕ್ಕರ್‌ಗಳಂತಹ ಹೊಸ ಪರಿಕರಗಳನ್ನು ಸಹ ಪರಿಚಯಿಸುತ್ತಿದೆ. ಕಳೆದ ತಿಂಗಳು, ಪ್ಲಾಟ್‌ಫಾರ್ಮ್ ಸ್ನ್ಯಾಪ್‌ಚಾಟರ್‌ಗಳಿಗೆ ಒಂದೇ ಸಮಯದಲ್ಲಿ ಅನೇಕ ದೃಷ್ಟಿಕೋನಗಳು ಮತ್ತು ಥೀಮ್‌ಗಳನ್ನು ಸೆರೆಹಿಡಿಯಲು ಡ್ಯುಯಲ್ ಕ್ಯಾಮೆರಾ ವೈಶಿಷ್ಟ್ಯವನ್ನು ಪರಿಚಯಿಸಿತು. ಡ್ಯುಯಲ್ ಕ್ಯಾಮೆರಾ ವೈಶಿಷ್ಟ್ಯವು ವರ್ಟಿಕಲ್​, ಹಾರಿಜೆಂಟಲ್​​, ಪಿಕ್ಚರ್​​ - ಇನ್- ಪಿಕ್ಚರ್ ಮತ್ತು ಕಟೌಟ್ ಸೇರಿದಂತೆ ನಾಲ್ಕು ಲೇಔಟ್‌ಗಳನ್ನು ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.