ಕರ್ನಾಟಕ

karnataka

Chandrayāna 3: ಚಂದ್ರನ ಮೇಲ್ಮೈಯಲ್ಲಿ ಭೂಕಂಪನ ಬಗ್ಗೆ ಮಾಹಿತಿ ದಾಖಲಿಸಿದ 'ಐಎಲ್​ಎಸ್​ಎ ಪೇಲೋಡ್'

By ETV Bharat Karnataka Team

Published : Sep 1, 2023, 12:28 PM IST

Chandrayāna 3: ''ಚಂದ್ರಯಾನ-3 ಚಂದ್ರನ ಮೇಲ್ಮೈಯಲ್ಲಿ ಭೂಕಂಪನದ ಮಾಹಿತಿಯನ್ನು ದಾಖಲಿಸಿದೆ. ವಿಕ್ರಮ್ ಲ್ಯಾಂಡರ್‌ನಲ್ಲಿನ ಐಎಲ್​ಎಸ್​ಎ ಪೇಲೋಡ್ ಭೂಕಂಪನ ಅಳೆಯುತ್ತದೆ. ಭೂಕಂಪನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ'' ಎಂದು ಇಸ್ರೋ ಹೇಳಿದೆ.

Vikram lander records natural event on lunar surface, says ISRO
Chandrayāna 3: ಚಂದ್ರನ ಮೇಲ್ಮೈಯಲ್ಲಿ ಭೂಕಂಪ ದಾಖಲಿಸಿದ 'ಐಎಲ್​ಎಸ್​ಎ ಪೇಲೋಡ್': ಇಸ್ರೋ ಹೇಳಿಕೆ...

ನವದೆಹಲಿ:ಚಂದ್ರಯಾನ-3ರ ಲ್ಯಾಂಡರ್‌ ಮಾಡ್ಯೂಲ್‌ ವಿಕ್ರಮ್‌ನಲ್ಲಿನ ಇನ್‌ಸ್ಟ್ರುಮೆಂಟ್ ಆಫ್ ಲೂನಾರ್ ಸೆಸ್ಮಿಕ್ ಆಕ್ಟಿವಿಟಿ (ಐಎಲ್‌ಎಸ್‌ಎ) ಪೇಲೋಡ್ ಆಗಸ್ಟ್ 26 ರಂದು ಚಂದ್ರನ ಮೇಲ್ಮೈಯಲ್ಲಿ ಸಂಭವಿಸಿದ ನೈಸರ್ಗಿಕ ಘಟನೆಯನ್ನು ದಾಖಲಿಸಿದೆ. ಈ ಘಟನೆಯ ಮೂಲ ಅರಿತುಕೊಳ್ಳಲು ತನಿಖೆ ಮಾಡಲಾಗುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ಹೇಳಿದೆ.

"ಚಂದ್ರಯಾನ 3ರ ಲ್ಯಾಂಡರ್‌ನಲ್ಲಿನ ಇನ್ಸ್ಟ್ರುಮೆಂಟ್ ಫಾರ್ ಲೂನಾರ್ ಸೆಸ್ಮಿಕ್ ಆಕ್ಟಿವಿಟಿ (ILSA) ಪೇಲೋಡ್ ಚಂದ್ರನ ಮೇಲೆ ಮೈಕ್ರೋ ಎಲೆಕ್ಟ್ರೋ ಮೆಕ್ಯಾನಿಕಲ್ ಸಿಸ್ಟಮ್ಸ್ (MEMS) ತಂತ್ರಜ್ಞಾನ - ಆಧಾರಿತ ಉಪಕರಣದ ಮೊದಲ ನಿದರ್ಶನ ಇದಾಗಿದೆ. ವಿಕ್ರಮ್ ಲ್ಯಾಂಡರ್‌ನಲ್ಲಿ ಅಳವಡಿಸಲಾದ ಐಎಲ್​ಎಸ್​ಎ ಪೇಲೋಡ್ ಚಂದ್ರನ ಮೇಲ್ಮೈಯಲ್ಲಿ ಭೂಕಂಪಗಳ ನೈಸರ್ಗಿಕ ವಿದ್ಯಮಾನವನ್ನು ದಾಖಲಿಸಿದೆ. ಆಗಸ್ಟ್ 26 ರಂದು ಈ ಭೂಕಂಪ ಸಂಭವಿಸಿದೆ. ಭೂಕಂಪದ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಇಸ್ರೋ ತಿಳಿಸಿದೆ.

ಐಎಲ್‌ಎಸ್‌ಎನಿಂದ ಭೂಕಂಪನ ಮಾಹಿತಿ ದಾಖಲು:ಸಾಮಾಜಿಕ ಮಾಧ್ಯಮವಾದ ಎಕ್ಸ್​ನಲ್ಲಿ ಪೋಸ್ಟ್‌ನಲ್ಲಿ ಇಸ್ರೋ ಸಂಸ್ಥೆಯು, ಚಂದ್ರಯಾನ-3 ಲ್ಯಾಂಡರ್‌ನಲ್ಲಿನ ILSA ಪೇಲೋಡ್ ಮೈಕ್ರೋ ಎಲೆಕ್ಟ್ರೋ ಮೆಕ್ಯಾನಿಕಲ್ ಸಿಸ್ಟಮ್ಸ್ (MEMS) ತಂತ್ರಜ್ಞಾನವನ್ನು ಆಧರಿಸಿದೆ. ಇಂತಹ ಉಪಕರಣವನ್ನು ಚಂದ್ರನ ಮೇಲ್ಮೈಗೆ ಕಳುಹಿಸಿರುವುದು ಇದೇ ಮೊದಲು. ಈ ಉಪಕರಣವು ರೋವರ್ ಮತ್ತು ಇತರ ಪೇಲೋಡ್‌ಗಳ ಚಲನೆಯಿಂದ ಚಂದ್ರನ ಮೇಲಿನ ಕಂಪನಗಳ ದತ್ತಾಂಶಗಳನ್ನು ದಾಖಲಿಸಿದೆ.

ಐಎಲ್​ಎಸ್​ಎಯು ಆರು ಉನ್ನತ-ಸೂಕ್ಷ್ಮತೆಯ ವೇಗವರ್ಧಕಗಳ ಸಮೂಹವನ್ನು ಒಳಗೊಂಡಿದೆ. ಇವುಗಳನ್ನು ಸಿಲಿಕಾನ್ ಮೈಕ್ರೋಮ್ಯಾಚಿನಿಂಗ್ ಪ್ರಕ್ರಿಯೆಯನ್ನು ಬಳಸಿಕೊಂಡು ಸ್ಥಳೀಯವಾಗಿ ತಯಾರಿಸಲಾಗಿದೆ. ಕೋರ್ ಸೆನ್ಸಿಂಗ್ ಅಂಶವು ರಚನಾತ್ಮಕ ವಿದ್ಯುದ್ವಾರಗಳೊಂದಿಗೆ ಸ್ಪ್ರಿಂಗ್- ಮಾಸ್ ಸಿಸ್ಟಮ್ ಅನ್ನು ಒಳಗೊಂಡಿದೆ. ಬಾಹ್ಯ ಕಂಪನಗಳು ವಿಚಲನಕ್ಕೆ ಕಾರಣವಾಗುತ್ತವೆ. ಇದರ ಪರಿಣಾಮವಾಗಿ ಬದಲಾವಣೆಯನ್ನು ವೋಲ್ಟೇಜ್ ಆಗಿ ಪರಿವರ್ತಿಸಲಾಗುತ್ತದೆ.

ನೈಸರ್ಗಿಕ ಭೂಕಂಪಗಳು, ಪರಿಣಾಮಗಳು ಮತ್ತು ಕೃತಕ ಘಟನೆಗಳಿಂದ ಉತ್ಪತ್ತಿಯಾಗುವ ನೆಲದ ಕಂಪನಗಳನ್ನು ಅಳೆಯುವುದು ಐಎಲ್​ಎಸ್​ಎನ ಪ್ರಾಥಮಿಕ ಉದ್ದೇಶವಾಗಿದೆ. ಆಗಸ್ಟ್ 25, 2023 ರಂದು ರೋವರ್ ನ್ಯಾವಿಗೇಷನ್ ಸಮಯದಲ್ಲಿ ದಾಖಲಾದ ಕಂಪನಗಳನ್ನು ಚಿತ್ರದಲ್ಲಿ ಚಿತ್ರಿಸಲಾಗಿದೆ. ಹೆಚ್ಚುವರಿಯಾಗಿ, ಆಗಸ್ಟ್ 26, 2023 ರಂದು ರೆಕಾರ್ಡ್ ಮಾಡಲಾದ ಘಟನೆಯನ್ನು ಸಹ ತೋರಿಸಲಾಗಿದೆ. ಈ ಘಟನೆಯ ಮೂಲದ ಪತ್ತೆ ಮಾಡುವ ನಿಟ್ಟಿನಲ್ಲಿ ಪ್ರಸ್ತುತ ತನಿಖೆ ಮಾಡಲಾಗುತ್ತಿದೆ.

ಐಎಲ್​ಎಸ್​ಎ ಪೇಲೋಡ್​ ಕಾರ್ಯವೇನು?:ಐಎಲ್​ಎಸ್​ಎ ಪೇಲೋಡ್ ಅನ್ನು ಖಾಸಗಿ ಕೈಗಾರಿಕೆಗಳ ಬೆಂಬಲದೊಂದಿಗೆ ಬೆಂಗಳೂರಿನ LEOS ನಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ. ಐಎಲ್​ಎಸ್​ಎ ಅನ್ನು ಚಂದ್ರನ ಮೇಲ್ಮೈಯಲ್ಲಿ ಇರಿಸಲು ನಿಯೋಜನೆಯ ಕಾರ್ಯವಿಧಾನವನ್ನು ಬೆಂಗಳೂರಿನ ಯುಆರ್​ಎಸ್​ಸಿ ಅಭಿವೃದ್ಧಿಪಡಿಸಲಾಗಿದೆ.

ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಚಂದ್ರನ ದಕ್ಷಿಣ ಧ್ರುವವನ್ನು ಯಶಸ್ವಿಯಾಗಿ ಮುಟ್ಟಿದ ಕಾರಣ ಭಾರತವು ಆಗಸ್ಟ್ 23 ರಂದು ದೈತ್ಯ ಸಾಧನೆ ಮಾಡಿತ್ತು. ಇದು ಐತಿಹಾಸಿಕ ಸಾಧನೆ ಮೊದಲ ದೇಶವಾಗಿದೆ. ಇನ್ನೂ ಚಂದ್ರನ ಮೇಲೆ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇರಿಸಿದ ದೇಶ ಅಮೆರಿಕ, ಚೀನಾ ಮತ್ತು ರಷ್ಯಾ ನಂತರದ ನಾಲ್ಕನೇ ಸ್ಥಾನದಲ್ಲಿ ಭಾರತ ಇದೆ.

ಚಂದ್ರನ ಮೇಲ್ಮೈಯಲ್ಲಿರುವ ವಿಕ್ರಮ್ ಲ್ಯಾಂಡರ್‌ನ ಇಳಿದಿರುವ ಸ್ಥಳವನ್ನು ಇನ್ನು ಮುಂದೆ 'ಶಿವಶಕ್ತಿ' ಪಾಯಿಂಟ್ ಎಂದು ಕರೆಯಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ-3ರ ಯಶಸ್ವಿಯಾದ ನಂತರ ಘೋಷಿಸಿದ್ದರು.(ಎಎನ್​ಐ)

ಇದನ್ನೂ ಓದಿ:ಮಹತ್ವಾಕಾಂಕ್ಷೆಯ ಆದಿತ್ಯ ಎಲ್​​1 ಸೋಲಾರ್​ ಮಿಷನ್​ ಉಡ್ಡಯನಕ್ಕೆ ಕ್ಷಣಗಣನೆ: ಇಸ್ರೋ

ABOUT THE AUTHOR

...view details