ಕರ್ನಾಟಕ

karnataka

ಎಲೆಕ್ಟ್ರಿಕ್ ವಾಹನಗಳ ಮೇಲೆ ನಿಷೇಧ ಹೇರಲಿದೆಯಾ ಸ್ವಿಟ್ಜರ್ಲೆಂಡ್ ?

By

Published : Dec 6, 2022, 4:52 PM IST

ಬ್ಲ್ಯಾಕ್‌ಔಟ್ ಮತ್ತು ವಿದ್ಯುತ್ ಕಡಿತ ತಡೆಯುವ ಸಲುವಾಗಿ ಸ್ವಿಟ್ಜರ್ಲೆಂಡ್ ಎಲೆಕ್ಟ್ರಿಕ್​ ವಾಹನಗಳ ಬಳಕೆ ಮೇಲೆ ನಿಷೇಧ ಹೇರಬಹುದು ಎಂದು ವರದಿಯಾಗಿದೆ.

electric vehicles ban in switzerland
ಎಲೆಕ್ಟ್ರಿಕ್ ವಾಹನಗಳ ಮೇಲೆ ನಿಷೇಧ

ಸ್ವಿಟ್ಜರ್ಲೆಂಡ್:ಎಲೆಕ್ಟ್ರಿಕ್ ವಾಹನಗಳನ್ನು ನಿಷೇಧಿಸುವ ಬಗ್ಗೆ ಸ್ವಿಟ್ಜರ್ಲೆಂಡ್​ ಚಿಂತಿಸುತ್ತಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ಮಾಧ್ಯಮವೊಂದರ ವರದಿಯ ಪ್ರಕಾರ, ಬ್ಲ್ಯಾಕ್‌ಔಟ್ ಮತ್ತು ವಿದ್ಯುತ್ ಕಡಿತವನ್ನು ತಡೆಯುವ ಸಲುವಾಗಿ ಅಧಿಕಾರಿಗಳು ಇಂತಹ ಪ್ರಸ್ತಾಪವೊಂದನ್ನು ಇಟ್ಟಿದ್ದಾರೆ ಎನ್ನಲಾಗ್ತಿದೆ. ಒಂದು ವೇಳೆ ಅಲ್ಲಿನ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದರೆ, ಎಲೆಕ್ಟ್ರಿಕ್​ ವಾಹನಗಳನ್ನು ನಿಷೇಧಿಸಿದ ಮೊದಲ ದೇಶ ಸ್ವಿಟ್ಜರ್ಲೆಂಡ್ ಆಗಲಿದೆ.

ಸ್ವಿಟ್ಜರ್ಲೆಂಡ್ ತನ್ನ ವಿದ್ಯುತ್​ ಅವಶ್ಯಕತೆಗಳನ್ನು ಪೂರೈಸಲು ಜಲವಿದ್ಯುತ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ದೇಶದಲ್ಲಿ ಸುಮಾರು 60 ಪ್ರತಿಶತ ವಿದ್ಯುತ್, ಹೈಡ್ರೋಪವರ್​ನಿಂದ ಉತ್ಪತಿಯಾಗುತ್ತಿದೆ. ಇನ್ನೂ ಚಳಿಗಾಲದ ತಿಂಗಳಿನಲ್ಲಿ ಈ ಉತ್ಪಾದನೆ ನಿಧಾನಗೊಳ್ಳುತ್ತದೆ. ಈ ವೇಳೆ, ದೇಶವು ನೆರೆಯ ಫ್ರಾನ್ಸ್ ಮತ್ತು ಜರ್ಮನಿಯಿಂದ ವಿದ್ಯುತ್ ಆಮದು ಮಾಡಿಕೊಳ್ಳುತ್ತದೆ. ಆದರೀಗ ಈ ಎರಡು ದೇಶಗಳು ಉಕ್ರೇನ್ ಯುದ್ಧದಿಂದಾಗಿ ಯುರೋಪಿನ ಉಳಿದ ಭಾಗಗಳಂತೆ ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿವೆ.

ಇದನ್ನೂ ಓದಿ:ಡಿಜಿಟಲ್​ ರೂಪಾಂತರಕ್ಕೆ ಭಾರತದ ಒತ್ತು.. ಮುಂಬರುವ ದಿನಗಳಲ್ಲಿ 85 ಬಿಲಿಯನ್​​​ ಡಾಲರ್​​ ವೆಚ್ಚ

ಪರಮಾಣು ರಿಯಾಕ್ಟರ್ ಸ್ಥಗಿತಗಳ ಕಾರಣದಿಂದಾಗಿ ಫ್ರೆಂಚ್ ಯುಟಿಲಿಟಿ EDF 2022ರಲ್ಲಿ, 30 ವರ್ಷಕ್ಕಿಂತ ಕಡಿಮೆ ವಿದ್ಯುತ್ ಉತ್ಪಾದನೆಯನ್ನು ಮಾಡಿದೆ. ಹೀಗಾಗಿ ಸ್ವಿಟ್ಜರ್ಲೆಂಡ್ ಸಂಭವನೀಯ ಬ್ಲ್ಯಾಕ್ಔಟ್​​ಗೆ ತಯಾರಿ ನಡೆಸುತ್ತಿದೆ. ವಿದ್ಯುತ್​​ ಉಳಿಸುವ ಸಲುವಾಗಿ ಕಟ್ಟಡಗಳಲ್ಲಿ ವಿದ್ಯುತ್​ ಬಳಕೆಗೆ ನಿಷೇಧ, ಸಂಗೀತ ಕಚೇರಿ, ನಾಟಕ ಪ್ರದರ್ಶನಗಳು ಮತ್ತು ಕ್ರೀಡಾಕೂಟಗಳನ್ನು ಸಹ ನಿಷೇಧಿಸಬೇಕು ಎಂದು ಪ್ರಸ್ತಾವನೆಯಲ್ಲಿ ಸೂಚಿಸಲಾಗಿದೆಯಂತೆ.

ಪರಿಸ್ಥಿತಿ ಹದಗೆಟ್ಟರೆ, ಸ್ವಿಟ್ಜರ್ಲೆಂಡ್ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಅಗತ್ಯ ಪ್ರವಾಸಗಳಿಗೆ ಮಾತ್ರ ಸೀಮಿತಗೊಳಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ABOUT THE AUTHOR

...view details