ಕರ್ನಾಟಕ

karnataka

ಕಮ್ಯುನಿಟಿ ಚಾಟ್ಸ್​: ಫೇಸ್​ಬುಕ್, ಮೆಸೆಂಜರ್​ನಲ್ಲಿ ಬರಲಿದೆ ರಿಯಲ್ ಟೈಮ್ ಮೆಸೇಜಿಂಗ್

By

Published : Sep 14, 2022, 12:00 PM IST

ಫೇಸ್​ಬುಕ್, ಮೆಸೆಂಜರ್​ನಲ್ಲಿ ಬರಲಿದೆ ರಿಯಲ್ ಟೈಮ್ ಮೆಸೇಜಿಂಗ್

ಫೇಸ್‌ಬುಕ್ (ಈಗ ಮೆಟಾ) ಕಮ್ಯುನಿಟಿ ಚಾಟ್ಸ್​ ಎಂಬ ಹೊಸ ವೈಶಿಷ್ಟ್ಯವನ್ನು ಪ್ರಕಟಿಸಿದೆ. ಬಳಕೆದಾರರು ತಮ್ಮ ಸಮುದಾಯಗಳೊಂದಿಗೆ ನೈಜ ಸಮಯದಲ್ಲಿ ಫೇಸ್‌ಬುಕ್ ಮತ್ತು ಮೆಸೆಂಜರ್ ಎರಡರಲ್ಲೂ ಪಠ್ಯ, ಆಡಿಯೋ ಮತ್ತು ವಿಡಿಯೋ ಮೂಲಕ ಸಂಪರ್ಕಿಸಲು ಶೀಘ್ರದಲ್ಲೇ ಇದು ಅನುವು ಮಾಡಿಕೊಡಲಿದೆ.

ನವದೆಹಲಿ: ಫೇಸ್‌ಬುಕ್ (ಈಗ ಮೆಟಾ) ಕಮ್ಯುನಿಟಿ ಚಾಟ್ಸ್​ ಎಂಬ ಹೊಸ ವೈಶಿಷ್ಟ್ಯವನ್ನು ಪ್ರಕಟಿಸಿದೆ. ಬಳಕೆದಾರರು ತಮ್ಮ ಸಮುದಾಯಗಳೊಂದಿಗೆ ನೈಜ ಸಮಯದಲ್ಲಿ ಫೇಸ್‌ಬುಕ್ ಮತ್ತು ಮೆಸೆಂಜರ್ ಎರಡರಲ್ಲೂ ಪಠ್ಯ, ಆಡಿಯೋ ಮತ್ತು ವಿಡಿಯೋ ಮೂಲಕ ಸಂಪರ್ಕಿಸಲು ಶೀಘ್ರದಲ್ಲೇ ಇದು ಅನುವು ಮಾಡಿಕೊಡಲಿದೆ. ಒಂದೇ ರೀತಿಯ ಆಸಕ್ತಿಗಳನ್ನು ಹೊಂದಿರುವ ಜನತೆ ಪರಸ್ಪರ ಸಂಪರ್ಕ ಸಾಧಿಸಲು ಹೊಸ ಮಾರ್ಗವಾಗಿ ಸಮುದಾಯ ಚಾಟ್‌ಗಳನ್ನು ಕಂಪನಿ ನಿರ್ಮಿಸುತ್ತಿದೆ ಎಂದು ಮೆಟಾ ಸಿಇಒ ಮಾರ್ಕ್ ಜುಕರ್​ಬರ್ಗ್​ ಹೇಳಿದ್ದಾರೆ.

1 ಬಿಲಿಯನ್‌ಗಿಂತಲೂ ಹೆಚ್ಚು ಜನರು ಸ್ನೇಹಿತರೊಂದಿಗೆ ಸಂವಹನ ನಡೆಸಲು ಮೆಸೆಂಜರ್ ಬಳಸುತ್ತಾರೆ ಮತ್ತು ಶೀಘ್ರದಲ್ಲೇ ನೀವು ಮೆಸೆಂಜರ್ ಮತ್ತು ಫೇಸ್‌ಬುಕ್ ಗುಂಪುಗಳಿಂದ ಕಮ್ಯುನಿಟಿ ಚಾಟ್‌ಗಳನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ ಎಂದು ಅವರು ಮಂಗಳವಾರ ಹೇಳಿದರು.

ಮತ್ತಷ್ಟು ಫೇಸ್​ಬುಕ್ ಗುಂಪುಗಳಿಗೆ ನಾವು ಸಮುದಾಯ ಚಾಟ್‌ಗಳನ್ನು ವಿಸ್ತರಿಸಲಿದ್ದೇವೆ ಎಂದು ಮೆಸೆಂಜರ್‌ನ ಮುಖ್ಯಸ್ಥ ಲೊರೆಡಾನಾ ಕ್ರಿಸನ್ ಹೇಳಿದ್ದಾರೆ. ಇನ್ನುಮುಂದೆ ಆ್ಯಡ್ಮಿನ್​ಗಳು ನಿರ್ದಿಷ್ಟ ವಿಷಯವೊಂದರ ಕುರಿತು ಸಂವಾದ ಪ್ರಾರಂಭಿಸಬಹುದು ಮತ್ತು ಪೋಸ್ಟ್​ ಒಂದಕ್ಕೆ ಜನ ಕಮೆಂಟ್ ಮಾಡುವುದಕ್ಕೆ ಕಾಯುವ ಬದಲು ತಕ್ಷಣ ಪ್ರತಿಕ್ರಿಯೆಗಳನ್ನು ಪಡೆಯಬಹುದು.

ಒಂದೇ ಮೆಸೆಂಜರ್ ಗ್ರೂಪ್ ಚಾಟ್‌ನಲ್ಲಿ ಅನೇಕ ವಿಷಯಗಳನ್ನು ನ್ಯಾವಿಗೇಟ್ ಮಾಡುವ ಬದಲು, ಕಮ್ಯುನಿಟಿ ಚಾಟ್ ಆರಂಭಿಸುವ ವ್ಯಕ್ತಿಯು ಚಾಟ್‌ಗಳನ್ನು ಕೆಟೆಗರಿಗಳಲ್ಲಿ ಆಯೋಜಿಸಬಹುದು. ಇದರಿಂದ ಗ್ರೂಪ್ ಸದಸ್ಯರು ತಮಗೆ ಹೆಚ್ಚು ಆಸಕ್ತಿಕರ ವಿಷಯಗಳನ್ನು ಸುಲಭವಾಗಿ ಹುಡುಕಿಕೊಳ್ಳಬಹುದು ಎಂದು ಕ್ರಿಸನ್ ಹೇಳಿದರು. ಯಾವುದಾದರೂ ಗುಂಪಿನ ಮೆಂಬರ್​ ಆಗಿರುವವರು ಮಾತ್ರ ಕಮ್ಯುನಿಟಿ ಚಾಟ್​ಗಳಿಗೆ ಪ್ರವೇಶ ಪಡೆಯಬಹುದು.

ಗ್ರೂಪ್ ಸದಸ್ಯರನ್ನು ನಿರ್ಬಂಧಿಸುವುದು, ಮ್ಯೂಟ್ ಮಾಡುವುದು ಅಥವಾ ಅಮಾನತುಗೊಳಿಸುವುದು, ಸದಸ್ಯರನ್ನು ಅಥವಾ ಸಂದೇಶಗಳನ್ನು ತೆಗೆದುಹಾಕುವುದು, ಹಾಗೆಯೇ ಅಡ್ಮಿನ್ ಅಸಿಸ್ಟ್‌ನಂತಹ ಮಾಡರೇಶನ್ ಸಾಮರ್ಥ್ಯಗಳು ಸೇರಿದಂತೆ ಚಾಟ್ ಮತ್ತು ಆಡಿಯೋ ಅನುಭವಗಳನ್ನು ಸುಲಭವಾಗಿ ನಿರ್ವಹಿಸಲು ಆ್ಯಡ್ಮಿನ್​​ಗಳಿಗೆ ಸಹಾಯ ಮಾಡಲು ದೃಢವಾದ ಸೂಟ್ ಪರಿಕರಗಳನ್ನು ಅಭಿವೃದ್ಧಿಪಡಿಸಿದೆ ಎಂದು ಫೇಸ್​ಬುಕ್ ಹೇಳಿದೆ. ಕಮ್ಯುನಿಟಿ ಚಾಟ್‌ಗಳ ಸದಸ್ಯರು ಗ್ರೂಪ್ ಆ್ಯಡ್ಮಿನ್​ಗಳಿಗೆ ಅಥವಾ ಮೆಟಾಗೆ ಸಂದೇಶಗಳನ್ನು ವರದಿ ಮಾಡಬಹುದು, ಬಳಕೆದಾರರನ್ನು ನಿರ್ಬಂಧಿಸಬಹುದು ಅಥವಾ ಯಾವುದೇ ಸಮಯದಲ್ಲಿ ಚಾಟ್ ನಿಂದ ಹೊರಗೆ ಹೋಗಬಹುದು.

ABOUT THE AUTHOR

...view details