ಕರ್ನಾಟಕ

karnataka

ಆಟೋಮೊಬೈಲ್​ನಲ್ಲೂ ಕೃತಕ ಬುದ್ಧಿಮತ್ತೆ ಪ್ರಯೋಗಕ್ಕೆ ಮುಂದಾದ ಮಿಡಿಯಾ ಟೆಕ್ ​- ಎನ್​ವಿಡಿಯಾ

By

Published : May 30, 2023, 5:35 PM IST

ಮಿಡಿಯಾ ಟೆಕ್​ ಆಟೋಮೋಟಿವ್ ಸಿಸ್ಟಮ್ಸ್ ಅನ್​ ಚಿಪ್ಸ್​ಗಳ ಅಭಿವೃದ್ಧಿಪಡಿಸಿದರೆ, Nvidia ಎಐ ಮತ್ತು ಗ್ರಾಫಿಕ್ಸ್ ಬೌದ್ಧಿಕತೆ ಜಿಪಿಯು ಚಿಪ್ಲೆಟ್ ಅನ್ನು ವಿನ್ಯಾಸ ಆರ್ಕಿಟೆಕ್ಚರ್‌ಗೆ ಸಂಯೋಜಿಸುತ್ತದೆ.

Media Tech-Nvidia is ready to experiment with artificial intelligence in automobiles
Media Tech-Nvidia is ready to experiment with artificial intelligence in automobiles

ಸ್ಯಾನ್​ಫ್ರಾನ್ಸಿಸ್ಕೊ(ಅಮೆರಿಕ):ಸದ್ಯ ಕೃತಕ ಬುದ್ದಿಮತ್ತೆ ಇಂದು ಜಗತ್ತನ್ನು ಆಳಲು ಹೊರಟಿದೆ. ಈಗಾಗಲೇ ತಂತ್ರಜ್ಞಾನ ಮತ್ತು ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುತ್ತಿದೆ. ಇದೀಗ ಈ ಕೃತಕಬುದ್ದಿಮತ್ತೆ ಆಟೋ ಮೊಬೈಲ್​​ ಕ್ಷೇತ್ರದಲ್ಲೂ ಪ್ರಾಬಲ್ಯ ಸಾಧಿಸಲು ಮುಂದಾಗುತ್ತಿದೆ. ಅದಕ್ಕೆ ಇದೀಗ ಚಿಪ್​ ತಯಾರಕ ಕಂಪನಿಗಳಾದ ಮಿಡಿಯಾ ಟೆಕ್​ ಮತ್ತು Nvidia ಮುಂದಾಗಿದೆ.

ಕಾರಿನಲ್ಲಿ ಪ್ರಯಾಣಿಸುವ ಚಾಲಕರು ಮತ್ತು ಪ್ರಯಾಣಿಕರಿಗೆ ಹೊಸ ಅನುಭವಗಳನ್ನು ನೀಡಲು ಚಿಪ್​ ತಯಾರಕ ಮಿಡಿಯಾ ಟೆಕ್​ ಮತ್ತು Nvidia ಸಜ್ಜಾಗಿದೆ. ಇದಕ್ಕಾಗಿ ಅವರು ಕೃತಕ ಬುದ್ಧಿಮತ್ತೆ ಮತ್ತು ವೇಗ ವರ್ಧಿತ ಕಂಪ್ಯೂಟಿಕ್​ ಆಟೋ ಮೊಬೈಲ್ಸ್​ಗಳೊಂದಿಗೆ ಪರಿವರ್ತಿಸಲು ಕೆಲಸ ಮಾಡಲು ಚಿಂತನೆ ನಡೆಸಿದೆ. ಇದಕ್ಕಾಗಿ ಮಿಡಿಯಾ ಟೆಕ್​ ಆಟೋಮೋಟಿವ್ ಸಿಸ್ಟಮ್ಸ್ ಅನ್​ ಚಿಪ್ಸ್​ಗಳ ಅಭಿವೃದ್ಧಿಪಡಿಸಿದರೆ, Nvidia ಎಐ ಮತ್ತು ಗ್ರಾಫಿಕ್ಸ್ ಬೌದ್ಧಿಕ ಪ್ರಭಾವ, ಜಿಪಿಯು ಚಿಪ್ಲೆಟ್ ಅನ್ನು ವಿನ್ಯಾಸ ಆರ್ಕಿಟೆಕ್ಚರ್‌ಗೆ ಸಂಯೋಜಿಸುತ್ತದೆ.

ಚಿಪ್​ಲೆಟ್ಸ್​​ಗಳು ಅಲ್ಟ್ರಾ ಫಾಸ್ಟ್​​ ಮತ್ತು ಕೊಹೆರೆಂಟ್​ ಚಿಪ್​ಲೆಟ್​​ ಆಂತರಿಕ ತಂತ್ರಜ್ಞಾನದೊಂದಿಗೆ ಸಂಪರ್ಕ ಹೊಂದಿದೆ. ಈ ಎರಡು ಕಂಪನಿಗಳ ಸಹಭಾಗಿತ್ವವೂ, ಸಹಯೋಗದ ದೃಷ್ಟಿಯ ಆಟೋಮೋಟಿವ್ ಉದ್ಯಮಕ್ಕೆ ಜಾಗತಿಕವಾಗಿ ಒಂದೇ ಕೇಂದ್ರವನ್ನು ಒದಗಿಸುತ್ತದೆ. ಮುಂದಿನ ಪೀಳಿಗೆಯಲ್ಲಿ ಮತ್ತಷ್ಟು ಬೌದ್ಧಿಕ ಕೌಶಲ್ಯ ಸಂಪರ್ಕಿತ ವಾಹನಗಳನ್ನು ವಿನ್ಯಾಸಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಕಂಪನಿ ತಿಳಿಸಿದೆ

ಹೆಚ್ಚುವರಿಯಾಗಿ, ಮೀಡಿಯಾ ಟೆಕ್ ಈ ಹೊಸ ಆಟೋಮೋಟಿವ್ ಎಸ್​ಒಸಿ ಗಳಲ್ಲಿ Nvidia DRIVE OS, DRIVE IX, CUDA ಮತ್ತು TensorRT ಸಾಫ್ಟ್‌ವೇರ್ ತಂತ್ರಜ್ಞಾನಗಳನ್ನು ಸಂಪರ್ಕಿತ ಮಾಹಿತಿ ಮತ್ತು ಇನ್-ಕ್ಯಾಬಿನ್ ಅನುಕೂಲತೆ ಮತ್ತು ಸುರಕ್ಷತಾ ಕಾರ್ಯಗಳನ್ನು ಸಕ್ರಿಯಗೊಳಿಸುತ್ತದೆ. ಮೀಡಿಯಾ ಟೆಕ್‌ನ ಉದ್ಯಮ ಪ್ರಮುಖ ಸಿಸ್ಟಮ್ ಆನ್​ ಚಿಪ್ ಜೊತೆಗೆ ಎನ್ವಿಡಿಯಾದ ಜಿಪಿಯು ಮತ್ತು ಎಐ ಸಾಫ್ಟ್‌ವೇರ್ ತಂತ್ರಜ್ಞಾನಗಳ ಸಂಯೋಜನೆಯು ಹೊಸ ಬಳಕೆದಾರರ ಅನುಭವಗಳು, ವರ್ಧಿತ ಸುರಕ್ಷತೆ ಮತ್ತು ಎಲ್ಲ ವಾಹನ ವಿಭಾಗಗಳಿಗೆ ಹೊಸ ಸಂಪರ್ಕಿತ ಸೇವೆಗಳನ್ನು ಐಷಾರಾಮಿಯಿಂದ ಎಲ್ಲ ಪ್ರಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಎನ್ವಿಡಿಯಾ ಸಂಸ್ಥಾಪಕ ಮತ್ತು ಸಿಇಒ ಜೆನ್ಸನ್ ಹುವಾಂಗ್ ಹೇಳಿದ್ದಾರೆ.

ಕೃತಕ ಬುದ್ದಿಮತ್ತೆ, ಕ್ಲೌಡ್, ಗ್ರಾಫಿಕ್ಸ್ ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್ ಪರಿಸರ ವ್ಯವಸ್ಥೆಯಲ್ಲಿ Nvidia ಪ್ರಮುಖ ಪರಿಣತಿಯನ್ನು ನಿಯಂತ್ರಿಸುವ ಮೂಲಕ ಮತ್ತು ಅದನ್ನು Nvidiaಯಾದ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳೊಂದಿಗೆ ಸಂಯೋಜಿಸುತ್ತದೆ. ಈ ಮೂಲಕ MediaTek ತನ್ನ ಡೈಮೆನ್ಸಿಟಿ ಆಟೋ ಪ್ಲಾಟ್‌ಫಾರ್ಮ್‌ನ ಸಾಮರ್ಥ್ಯಗಳನ್ನು ಹೆಚ್ಚಿಸಬಹುದು ಎಂದು ಚಿಪ್‌ಮೇಕರ್ ಹೇಳಿದ್ದಾರೆ. ಈ ಪ್ಲಾಟ್‌ಫಾರ್ಮ್ ಡೈಮೆನ್ಸಿಟಿ ಆಟೋ ಕಾಕ್‌ಪಿಟ್ ಅನ್ನು ಒಳಗೊಂಡಿದೆ. ಇದು ಸ್ಮಾರ್ಟ್ ಮಲ್ಟಿ-ಡಿಸ್ಪ್ಲೇಗಳು, ಹೈ-ಡೈನಾಮಿಕ್ ರೇಂಜ್ ಕ್ಯಾಮೆರಾಗಳು ಮತ್ತು ಆಡಿಯೊ ಪ್ರೊಸೆಸಿಂಗ್ ಅನ್ನು ಬೆಂಬಲಿಸುತ್ತದೆ. ಆದ್ದರಿಂದ ಚಾಲಕರು ಮತ್ತು ಪ್ರಯಾಣಿಕರು ಕಾಕ್‌ಪಿಟ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಳೊಂದಿಗೆ ಇಚ್ಚೆ ಅನುಸಾರವಾಗಿ ಸಂವಹನ ಮಾಡಬಹುದು.

ಇದನ್ನೂ ಓದಿ:ಸೌರಶಕ್ತಿ ವಾಹನಗಳ ಸ್ಪರ್ಧೆಯಲ್ಲಿ ನಿಟ್ಟೆ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಗರಿ

ABOUT THE AUTHOR

...view details