ETV Bharat / state

ಸೌರಶಕ್ತಿ ವಾಹನಗಳ ಸ್ಪರ್ಧೆಯಲ್ಲಿ ನಿಟ್ಟೆ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಗರಿ

author img

By

Published : May 29, 2023, 9:40 PM IST

ಸೌರಶಕ್ತಿಯ ವಾಹನ ನಿರ್ಮಾಣದ ಹೊಣೆಯನ್ನು ಶಿಕ್ಷಕ ಹಾಗೂ ವಿದ್ಯಾರ್ಥಿ ಒಕ್ಕೂಟದ ''ಟೀಂ ಹೋರಸ್'' ತೆಗೆದುಕೊಂಡಿತ್ತು. ಪೀಪಲ್ಸ್ ಚಾಯ್ಸ್ ಅವಾರ್ಡ್ ಪ್ರಶಸ್ತಿಯ ಜೊತೆಗೆ ಅತ್ಯುತ್ತಮ ವಿನ್ಯಾಸ ಪ್ರಶಸ್ತಿ, ಅತ್ಯುತ್ತಮ ಔದ್ಯಮಿಕ ಪ್ರಶಸ್ತಿ ಹಾಗೂ ಭವಿಷ್ಯದ ಭರವಸೆಯ ಪ್ರಶಸ್ತಿಗಳನ್ನು ಸಹ ಪಡೆದಿದೆ.

solar vehicle competition
ಸೌರಶಕ್ತಿ ವಾಹನಗಳ ಸ್ಪರ್ಧೆಯಲ್ಲಿ ನಿಟ್ಟೆ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಗರಿ

ಸೌರಶಕ್ತಿ ವಾಹನಗಳ ಸ್ಪರ್ಧೆಯಲ್ಲಿ ನಿಟ್ಟೆ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಗರಿ

ಯಲಹಂಕ: ಬೆಂಗಳೂರಿನ ನಿಟ್ಟೆ ಕಾಲೇಜ್​ನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಏಷ್ಯಾ ಖಂಡದ ಬೃಹತ್ ಸೌರಶಕ್ತಿ ವಾಹನಗಳ ಸ್ಪರ್ಧೆಯಲ್ಲಿ ಭಾಗವಹಿಸಿ, ಪೀಪಲ್ಸ್ ಚಾಯ್ಸ್ ಅವಾರ್ಡ್ ಪ್ರಶಸ್ತಿಯನ್ನು ಗೆದ್ದು ಎಲ್ಲರ ಮೆಚ್ಚಿಗೆ ಗಳಿಸಿದರು. ಗ್ರೇಟರ್ ನೋಯ್ಡಾದ ಗಲ್ಗೋತಿಯಾಸ್ ವಿಶ್ವವಿದ್ಯಾಲಯ ಹಾಗೂ ಇಂಪೀರಿಯಲ್ ಸೊಸೈಟಿ ಆಫ್ ಇನ್ನೋವೇಟಿವ್ ಇಂಜಿನಿರ್ಸ್ ಸಹಯೋಗದಲ್ಲಿ ವಾರ್ಷಿಕ ಎಲೆಕ್ಟ್ರಾನಿಕ್ ಸೋಲಾರ್ ವಾಹನಗಳ ರಾಷ್ಟ್ರೀಯ ಸ್ಪರ್ಧೆಯನ್ನು(ESVC-2023) ಆಯೋಜನೆ ಮಾಡಲಾಗಿತ್ತು.

ಇದು ಏಷ್ಯಾ ಖಂಡದ ಅತ್ಯಂತ ಬೃಹತ್ ಆದ ಸೌರಶಕ್ತಿ ವಾಹನಗಳ ಸ್ಪರ್ಧೆಯಾಗಿದೆ. ಈ ಸ್ಪರ್ಧೆಯಲ್ಲಿ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರ್ಮಿಸಿದ ವಾಹನ ಪ್ರದರ್ಶನ ಉತ್ತಮ ನೀಡಿತು. ನಿಟ್ಟೆ ವಿದ್ಯಾರ್ಥಿಗಳ ವಾಹನಕ್ಕೆ ಪೀಪಲ್ಸ್ ಚಾಯ್ಸ್ ಅವಾರ್ಡ್ (ವೀಕ್ಷಕರ ಆಯ್ಕೆ ಪ್ರಶಸ್ತಿ) ಸಿಕ್ಕಿರುವುದು ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸಂತಸಕ್ಕೆ ಕಾರಣವಾಯಿತು.

ಟೀಂ ಹೋರಸ್: ಸೌರಶಕ್ತಿಯ ವಾಹನ ನಿರ್ಮಾಣದ ಹೊಣೆಯನ್ನು ಶಿಕ್ಷಕ ಹಾಗೂ ವಿದ್ಯಾರ್ಥಿ ಒಕ್ಕೂಟದ ''ಟೀಂ ಹೋರಸ್'' ತೆಗೆದುಕೊಂಡಿತ್ತು. ಪೀಪಲ್ಸ್ ಚಾಯ್ಸ್ ಅವಾರ್ಡ್ ಪ್ರಶಸ್ತಿಯ ಜೊತೆಗೆ ಅತ್ಯುತ್ತಮ ವಿನ್ಯಾಸ ಪ್ರಶಸ್ತಿ, ಅತ್ಯುತ್ತಮ ಔದ್ಯಮಿಕ ಪ್ರಶಸ್ತಿ ಹಾಗೂ ಭವಿಷ್ಯದ ಭರವಸೆಯ ಪ್ರಶಸ್ತಿಗಳನ್ನು ಸಹ ಪಡೆದಿದೆ. ಪ್ರಶಸ್ತಿ ಪಡೆದ ತಂಡಕ್ಕೆ ಅಭಿವಂದನೆ ಸಲ್ಲಿಸಲು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಮಾರಂಭವನ್ನೂ ಕೂಡ ಆಯೋಜಿಸಲಾಗಿತ್ತು.

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಹಾಗೂ ‘ಟೀಂ ಹೋರಸ್’ನ ಶಿಕ್ಷಕ ಸಂಯೋಜಕ ಡಾ.ಎಲ್.ಹರೀಶ್ ಕುಮಾರ್ ಮಾತನಾಡಿದ ಅವರು, ''ಹೆಚ್ಚುತ್ತಿರುವ ತಾಪಮಾನದ ಕಾರಣ, ಸಾಂಪ್ರದಾಯಿಕ ಇಂಧನ ಮೂಲಗಳ ಬಳಕೆಯನ್ನು ಕಡಿಮೆ ಮಾಡಿ, ಶುದ್ಧ ವಾತಾವರಣಕ್ಕೆ ಅನುವು ಮಾಡಿಕೊಡಲು ಹಾಗೂ ನೈಸರ್ಗಿಕ ಇಂಧನ ಮೂಲಗಳ ಬಗ್ಗೆ ಅರಿವು ಮೂಡಿಸಲು, 2017ರಲ್ಲಿ ಟೀಂ ಹೋರಸ್ ತಂಡವನ್ನು ಪ್ರಾರಂಭಿಸಲಾಗಿತ್ತು.

ಈಗ ಅದು ಫಲ ಕೊಟ್ಟಿದೆ. ತಂಡ ನಿರ್ಮಿಸಿದ ಸೌರಶಕ್ತಿಯ ವಾಹನ ನೂರಾರು ಕಿ.ಮೀ. ಯಾವುದೇ ಅಡ್ಡಿ ಆತಂಕಗಳಿಲ್ಲದೇ ದೆಹಲಿ - ಆಗ್ರಾ ಹೆದಾರಿಯಲ್ಲಿ ಸಂಚರಿಸಿ ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸುವ ಮೂಲಕ ಜಗತ್ತಿನ ಗಮನ ಸೆಳೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಹೆಚ್.ಸಿ.ನಾಗರಾಜ್ ಮಾತನಾಡಿ, ''ನಮ್ಮ ಸಂಸ್ಥೆ, ನವೀಕರಿಸಬಹುದಾದ ಇಂಧನ, ವಿದ್ಯುತ್ ಚಾಲಿತ ವಾಹನ, ಸೌರಶಕ್ತಿಯ ವಾಹನ ಇತ್ಯಾದಿ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿಲು ಉತ್ತಮ ಅವಕಾಶ ಕಲ್ಪಿಸಿದೆ. ಭವಿಷ್ಯದ ಅಗತ್ಯತೆಗಳನ್ನು ಅರಿತು.

ಆ ನಿಟ್ಟಿನಲ್ಲಿ ಅನ್ವೇಷಣೆಗಳನ್ನು ಅವರು ಸಮರ್ಥವಾಗಿ ನಡೆಸಲಿ ಎಂಬುದು ನಮ್ಮ ಉದ್ದೇಶ. ಕೇವಲ ಆರು ವರ್ಷಗಳ ಹಿಂದೆ ಪ್ರಾರಂಭವಾದ ಈ ಪ್ರಯತ್ನ ಇಂದು ಯಶಸ್ವಿಯಾಗಿದೆ'' ಎಂದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ.ವಿ.ಶ್ರೀಧರ್ ಹಾಗೂ ಅಕೆಡೆಮಿಕ್ ನಿರ್ದೇಶಕ ಡಾ.ಸಂದೀಪ್ ಶಾಸ್ತ್ರಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಗೂಗಲ್​ನಲ್ಲಿ ಶೇ 1300 ಪಟ್ಟು ಲೈಂಗಿಕ ವಿಷಯಗಳ ಹುಡುಕಾಟಕ್ಕೆ ಸಮಯ ಮೀಸಲು: ಏನೆಲ್ಲಾ ನೋಡ್ತಾರೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.