ಕರ್ನಾಟಕ

karnataka

ಚೀನಾ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ: 6 ತಿಂಗಳ ನಂತರ ಭೂಮಿಗೆ ಮರಳಿದ ಗಗನಯಾತ್ರಿಗಳು

By

Published : Jun 4, 2023, 5:35 PM IST

ಚೀನಾ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವೊಂದನ್ನು ನಿರ್ಮಾಣ ಮಾಡುತ್ತಿದೆ. ಈ ಬಾಹ್ಯಾಕಾಶ ನಿಲ್ದಾಣದಲ್ಲಿ ತೊಡಗಿಸಿಕೊಂಡಿದ್ದ ಮೂವರು ಗಗನಯಾತ್ರಿಗಳು ಆರು ತಿಂಗಳ ನಂತರ ಭೂಮಿಗೆ ಮರಳಿದ್ದಾರೆ.

3 Chinese astronauts return home safely after a six-month stint in space station
3 Chinese astronauts return home safely after a six-month stint in space station

ನವದೆಹಲಿ : ಮೂವರು ಗಗನಯಾತ್ರಿಗಳನ್ನು ಹೊತ್ತ ಚೀನಾದ ಶೆಂಜೌ-15 ಬಾಹ್ಯಾಕಾಶ ನೌಕೆಯು ಆರು ತಿಂಗಳ ನಂತರ ಭೂಮಿಗೆ ಮರಳಿದೆ. ದೇಶದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವ ಆರು ತಿಂಗಳ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಇದು ಭೂಮಿಗೆ ಮರಳಿದೆ. ನೌಕೆಯೊಂದಿಗೆ ಮೂವರು ಗಗನಯಾತ್ರಿಗಳು ಭೂಮಿಗೆ ಮರಳಿದ್ದು, ಈ ಗಗನಯಾತ್ರಿಗಳ ಬದಲಿಗೆ ಇತರ ಮೂವರು ಬಾಹ್ಯಾಕಾಶ ನಿಲ್ದಾಣದಲ್ಲಿ ಇನ್ನೂ ಐದು ತಿಂಗಳ ಕಾಲ ಇರಲಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು (International Space Station) 2030 ರ ವೇಳೆಗೆ ಸ್ಥಗಿತಗೊಳ್ಳಲಿದ್ದು, ಅದರ ನಂತರ ಚೀನಾ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಿರುವ ಏಕೈಕ ದೇಶವಾಗಲಿದೆ.

ಚೀನಾದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವ ಆರು ತಿಂಗಳ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ ನಂತರ ಚೀನಾದ ಮೂವರು ಗಗನಯಾತ್ರಿಗಳು ಭಾನುವಾರ ಶೆಂಜೌ-15 ಮಾನವಸಹಿತ ಬಾಹ್ಯಾಕಾಶ ನೌಕೆಯಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳಿದರು. ಗಗನಯಾತ್ರಿಗಳಾದ ಫೀ ಜುನ್‌ಲಾಂಗ್, ಡೆಂಗ್ ಕಿಂಗ್ಮಿಂಗ್ ಮತ್ತು ಝಾಂಗ್ ಲು ಅವರನ್ನು ಹೊತ್ತ ಶೆಂಝೌ-15 ರ ರಿಟರ್ನ್ ಕ್ಯಾಪ್ಸುಲ್ ಉತ್ತರ ಚೀನಾದ ಒಳ ಮಂಗೋಲಿಯಾ ಸ್ವಾಯತ್ತ ಪ್ರದೇಶದ ಡಾಂಗ್‌ಫೆಂಗ್ ಲ್ಯಾಂಡಿಂಗ್ ಸೈಟ್ ಅನ್ನು ಬೆಳಿಗ್ಗೆ 6:33 ಕ್ಕೆ (ಬೀಜಿಂಗ್ ಸಮಯ) ಮುಟ್ಟಿದೆ. ಮೂವರು ತಮ್ಮ ಆರು ತಿಂಗಳ ಬಾಹ್ಯಾಕಾಶ ನಿಲ್ದಾಣ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಚೀನಾ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ (CMSA) ತಿಳಿಸಿದೆ.

ಗಗನಯಾತ್ರಿಗಳ ಆರೋಗ್ಯ ಉತ್ತಮವಾಗಿದೆ ಮತ್ತು ಶೆಂಜೌ-15 ಮಾನವಸಹಿತ ಮಿಷನ್ ಯಶಸ್ವಿಯಾಗಿದೆ ಎಂದು ಸಂಸ್ಥೆ ಘೋಷಿಸಿದೆ. ಈಗ ಇತರ ಮೂವರು ಗಗನಯಾತ್ರಿಗಳು ಮೇ 30 ರಂದು ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿಯಾಗಿ ತಲುಪಿದ್ದಾರೆ. ಹೊಸ ಗಗನಯಾತ್ರಿಗಳು ಐದು ತಿಂಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿಯಲಿದ್ದಾರೆ. ಈಗ ಕಾರ್ಯಾಚರಣೆಯಲ್ಲಿರುವ ರಷ್ಯಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ವು ಹಲವಾರು ದೇಶಗಳ ಸಹಯೋಗದ ಯೋಜನೆಯಾಗಿದೆ. ಸದ್ಯ 2030ರ ವೇಳೆಗೆ ಐಎಸ್​ಎಸ್​ ಅನ್ನು ನಿಷ್ಕ್ರಿಯಗೊಳಿಸಲು ನಿರ್ಧರಿಸಲಾಗಿದೆ. ಹೀಗಾಗಿ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಿರುವ ಏಕೈಕ ದೇಶ ಚೀನಾವಾಗಲಿದೆ.

ಚೀನಾದ ಬಾಹ್ಯಾಕಾಶ ನಿಲ್ದಾಣದ ಗಮನಾರ್ಹ ವೈಶಿಷ್ಟ್ಯವೆಂದರೆ ಅದರ ಎರಡು ರೊಬೊಟಿಕ್ ಕೈಗಳು. ಈ ಕೈಗಳು ಬಾಹ್ಯಾಕಾಶದಲ್ಲಿ ತೇಲುತ್ತಿರುವ ಉಪಗ್ರಹಗಳು ಸೇರಿದಂತೆ ಇತರ ವಸ್ತುಗಳನ್ನು ಹಿಡಿದು ತರುವಷ್ಟು ಉದ್ದ ಮತ್ತು ಬಲವಾಗಿವೆ. "ನಾವು ಬಾಹ್ಯಾಕಾಶದಲ್ಲಿ ನಮ್ಮೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿದ್ದೇವೆ ಮತ್ತು ತಾಯ್ನಾಡಿಗೆ ಮರಳಿದ್ದು ಖುಷಿ ತಂದಿದೆ" ಎಂದು ಬಾಹ್ಯಾಕಾಶದಿಂದ ಮರಳಿದ ಮಿಷನ್ ಕಮಾಂಡರ್ ಫೆಯ್ ಹೇಳಿದರು. ಫೆಯ್ ಅಕ್ಟೋಬರ್ 2005 ರಲ್ಲಿ ದೇಶದ ಎರಡನೇ ಬಾಹ್ಯಾಕಾಶ ಮಿಷನ್ ಶೆಂಜೌ-6 ನಲ್ಲಿ ಕೂಡ ಭಾಗವಹಿಸಿದ್ದರು.

ರಿಟರ್ನ್ ಕ್ಯಾಪ್ಸುಲ್ ಇಳಿದ ಸ್ವಲ್ಪ ಸಮಯದ ನಂತರ ಅವರನ್ನು ಸುತ್ತುವರಿದ ತಜ್ಞರ ತಂಡ ಅವರ ಆರೋಗ್ಯ ಪರಿಶೀಲನೆ ನಡೆಸಿತು. ಗಗನಯಾತ್ರಿಗಳು ಆರೋಗ್ಯವಾಗಿದ್ದಾರೆ ಎಂದು ವೈದ್ಯಕೀಯ ಸಿಬ್ಬಂದಿ ಖಚಿತಪಡಿಸಿದ್ದಾರೆ. ಶೆಂಜೌ-15 ನಲ್ಲಿನ ಸಿಬ್ಬಂದಿಯು ಸರಾಸರಿ ವಯಸ್ಸಿನ ಪ್ರಕಾರ ಚೀನಾದ ಅತ್ಯಂತ ಹಳೆಯ ಮಿಷನ್ ಸಿಬ್ಬಂದಿಯಾಗಿದ್ದಾರೆ. ಇವರು ನಾಲ್ಕು ಎಕ್ಸ್‌ಟ್ರಾವೆಹಿಕ್ಯುಲರ್ ಕಾರ್ಯಾಚರಣೆಗಳನ್ನು (ಇವಿಎ) ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ : ಪ್ರತಿ ಮನೆಗೂ ಸಿಸಿಟಿವಿ ಕ್ಯಾಮೆರಾ: ಲಕ್ನೋ ಪೊಲೀಸರ ಹೊಸ ಅಭಿಯಾನ

ABOUT THE AUTHOR

...view details