ಕರ್ನಾಟಕ

karnataka

ನಿಷೇಧಿತ ಔಷಧಗಳ ಪಟ್ಟಿ ಬಿಡುಗಡೆ: ಆ್ಯಸಿಡಿಟಿಗೆ ನೀಡುವ ರಾನಿಟಿಡಿನ್​ ಔಷಧ ಬಳಕೆಗೆ ನಿರ್ಬಂಧ

By

Published : Sep 13, 2022, 3:33 PM IST

center-removed-antacid

ಕ್ಯಾನ್ಸರ್​ಕಾರಕ ಅಂಶಗಳನ್ನು ತೋರ್ಪಡಿಸಿದ ಹೊಟ್ಟೆ ನೋವು ಮತ್ತು ಆ್ಯಸಿಡಿಟಿ ಸಮಸ್ಯೆಗೆ ನೀಡಲಾಗುತ್ತಿದ್ದ ರಾನಿಟಿಡಿನ್​ ಔಷಧವನ್ನು ಕೇಂದ್ರ ಆರೋಗ್ಯ ಸಚಿವಾಲಯ ನಿಷೇಧಿತ ಔಷಧಗಳ ಪಟ್ಟಿಗೆ ಸೇರಿಸಿದೆ. ಇದರ ಜೊತೆಗೆ ಇನ್ನೂ 25 ಔಷಧಗಳನ್ನು ಪಟ್ಟಿ ಮಾಡಿದೆ.

ನವದೆಹಲಿ:ಕ್ಯಾನ್ಸರ್​ಕಾರಕ ಅಂಶಗಳನ್ನು ಹೊಂದಿರುವ ಕಾರಣ ಆ್ಯಸಿಡಿಟಿ ಮತ್ತು ಹೊಟ್ಟೆ ನೋವಿಗೆ ನೀಡಲಾಗುತ್ತಿದ್ದ ಜನಪ್ರಿಯ ಆ್ಯಂಟಿಸಿಡ್​ ಸಾಲ್ಟ್​ ರಾನಿಟಿಡಿನ್​ ಔಷಧವನ್ನು ಕೇಂದ್ರ ಸರ್ಕಾರ ನಿಷೇಧಿತ ಪಟ್ಟಿಗೆ ಸೇರಿಸಿದೆ. ಇದು ಮಾತ್ರವಲ್ಲದೇ ಇನ್ನು 26 ಔಷಧಗಳನ್ನು ಪಟ್ಟಿ ಮಾಡಿದೆ.

ರಾನಿಟಿಡಿನ್ ಔಷಧವನ್ನು ಅಸಿಲೋಕ್, ಜಿನೆಟಾಕ್ ಮತ್ತು ರಾಂಟಾಕ್ ಎಂಬ ಬ್ರ್ಯಾಂಡ್​ಗಳ ಹೆಸರಿನಲ್ಲಿ ಉತ್ಪಾದನೆ ಮಾಡಲಾಗುತ್ತಿತ್ತು. ಇವುಗಳನ್ನು ಆ್ಯಸಿಡಿಟಿ ಮತ್ತು ಹೊಟ್ಟೆನೋವು ಸಂಬಂಧಿತ ಸಮಸ್ಯೆಗಳಿಗೆ ವೈದ್ಯರು ಇವುಗಳನ್ನು ಶಿಫಾರಸ್ಸು ಮಾಡುತ್ತಿದ್ದರು.

ಆದರೆ, ಈ ಔಷಧಿಯ ಬಳಕೆಯಿಂದ ದೇಹದಲ್ಲಿ ಕ್ಯಾನ್ಸರ್​ಕಾರಕ ಅಂಶಗಳು ಪತ್ತೆಯಾದ ಕಾರಣ ಇದರ ಬಳಕೆಯ ಮೇಲೆ ಅನುಮಾನ ಮೂಡಿತ್ತು. 2019 ರಲ್ಲಿ ಅಮೆರಿಕದ ಮೂಲದ ಔಷಧ ಗುಣಮಟ್ಟ ಸಂಸ್ಥೆ ಈ ಔಷಧದಲ್ಲಿ ಕ್ಯಾನ್ಸರ್ ಉಂಟುಮಾಡುವ ಅಂಶವನ್ನು ಪತ್ತೆ ಮಾಡಿತ್ತು. ಅಂದಿನಿಂದ ಈ ಔಷಧವನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ರಾನಿಟಿಡಿನ್ ಹೊಂದಿರುವ ಔಷಧಗಳಲ್ಲಿ ಸ್ವೀಕಾರಾರ್ಹವಲ್ಲದ ಮಟ್ಟದಲ್ಲಿ ಕ್ಯಾನ್ಸರ್ ಉಂಟುಮಾಡುವ ಅಂಶವಾದ ನೈಟ್ರೋಸೋಡಿಮೆಥೈಲಮೈನ್ (ಎನ್​ಡಿಎಂಎ) ಅನ್ನು ಡ್ರಗ್ ನಿಯಂತ್ರಕರು ಕಂಡು ಕೊಂಡಿದ್ದಾರೆ. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ಸಚಿವಾಲಯ ಅಗತ್ಯವಲ್ಲದ ಔಷಧಗಳ ಪಟ್ಟಿಗೆ ರಾನಿಟಿಡಿನ್​ ಔಷಧವನ್ನು ಸೇರಿಸಿದ್ದಾರೆ. ಇಷ್ಟಲ್ಲದೇ ನಿಷೇಧಿತ ಪಟ್ಟಿಗೆ ಸೇರಿದ 26 ಔಷಧಗಳು ಈ ಮುಂದಿನಂತಿದೆ.

1. ಆಲ್ಟೆಪ್ಲೇಸ್

2. ಅಟೆನೊಲೊಲ್

3. ಬ್ಲೀಚಿಂಗ್ ಪೌಡರ್

4. ಕ್ಯಾಪ್ರಿಯೊಮೈಸಿನ್

5. ಸೆಟ್ರಿಮೈಡ್

6. ಕ್ಲೋರ್ಫೆನಿರಾಮೈನ್

7. ಡಿಲೋಕ್ಸನೈಡ್ ಫ್ಯೂರೋಯೇಟ್

8. ಡಿಮರ್ಕಾಪ್ರೊಲ್

9. ಎರಿಥ್ರೊಮೈಸಿನ್

10. ಎಥಿನೈಲ್ಸ್ಟ್ರಾಡಿಯೋಲ್

11. ಎಥಿನೈಲ್‌ಸ್ಟ್ರಾಡಿಯೋಲ್ (ಎ) ನೊರೆಥಿಸ್ಟರಾನ್ (ಬಿ)

12. ಗ್ಯಾನ್ಸಿಕ್ಲೋವಿರ್

13. ಕನಮೈಸಿನ್

14. ಲ್ಯಾಮಿವುಡಿನ್ (ಎ) + ನೆವಿರಾಪಿನ್ (ಬಿ) + ಸ್ಟಾವುಡಿನ್ (ಸಿ)

15. ಲೆಫ್ಲುನೊಮೈಡ್

16. ಮೆಥಿಲ್ಡೋಪಾ

17. ನಿಕೋಟಿನಮೈಡ್

18. ಪೆಗಿಲೇಟೆಡ್ ಇಂಟರ್ಫೆರಾನ್ ಆಲ್ಫಾ 2 ಎ, ಪೆಗೈಲೇಟೆಡ್ ಇಂಟರ್ಫೆರಾನ್ ಆಲ್ಫಾ 2 ಬಿ

19. ಪೆಂಟಾಮಿಡಿನ್

20. ಪ್ರಿಲೊಕೇನ್ (ಎ) + ಲಿಗ್ನೋಕೇನ್ (ಬಿ)

21. ಪ್ರೊಕಾರ್ಬಜಿನ್

22. ರಾನಿಟಿಡಿನ್

23. ರಿಫಾಬುಟಿನ್

24. ಸ್ಟಾವುಡಿನ್ (ಎ) + ಲ್ಯಾಮಿವುಡಿನ್ (ಬಿ) 25. ಸುಕ್ರಾಲ್ಫೇಟ್

26. ಬಿಳಿ ಪೆಟ್ರೋಲಾಟಮ್

ರಾನಿಟಿಡಿನ್​ ಔಷಧವುಳ್ಳ ಜಿಂಟೆಕ್​​ 1988 ರಲ್ಲಿ ಭಾರೀ ಪ್ರಮಾಣದಲ್ಲಿ ಅಗತ್ಯ ಔಷಧ ಎಂದು ಪರಿಗಣಿತವಾಗಿತ್ತು. ಇದು ವಾರ್ಷಿಕ ಮಾರಾಟದಲ್ಲಿ 1 ಬಿಲಿಯನ್​ ತಲುಪಿದ ವಿಶ್ವದ ಮೊದಲ ಔಷಧಗಳಲ್ಲಿ ಒಂದಾಗಿತ್ತು.

ಇನ್ನು ಹೊಸ ಅಗತ್ಯ ಔಷಧ ಪಟ್ಟಿಯಲ್ಲಿ 384 ಔಷಧಗಳ ಪಟ್ಟಿಯನ್ನು ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ್ದು, ಇದರಲ್ಲಿ ಹೆಚ್ಚಿನ ಬೇಡಿಕೆಯ ಔಷಧಿಗಳಾದ ಮಧುಮೇಹ ನಿಯಂತ್ರಿಸುವ ಇನ್ಸುಲಿನ್ ಗ್ಲಾರ್ಜಿನ್, ಕ್ಷಯರೋಗ ಔಷಧವಾದ ಡೆಲಾಮಾನಿಡ್ ಮತ್ತು ಆಂಟಿಪರಾಸೈಟ್ ದರ ಕಡಿತವಾಗುವ ಸಾಧ್ಯತೆ ಇದೆ.

ಓದಿ:ಅಮೆರಿಕದಲ್ಲಿ ಸಿಂಗಲ್​ ಡೋಸ್​ ಇಂಟ್ರಾನಾಸಲ್​ ಕೊರೊನಾ ಲಸಿಕೆ ಅಭಿವೃದ್ಧಿ

ABOUT THE AUTHOR

...view details