ಅಮೆರಿಕದಲ್ಲಿ ಸಿಂಗಲ್​ ಡೋಸ್​ ಇಂಟ್ರಾನಾಸಲ್​ ಕೊರೊನಾ ಲಸಿಕೆ ಅಭಿವೃದ್ಧಿ

author img

By

Published : Sep 11, 2022, 10:41 PM IST

develops-antiviral-therapy

ದೇಶದಲ್ಲಿ ಭಾರತ್​ ಬಯೋಟೆಕ್​ ಕಂಪನಿ ಮೊದಲ ಇಂಟ್ರಾನಾಸಲ್​ ಕೊರೊನಾ ಲಸಿಕೆಯನ್ನು ಕಂಡುಹಿಡಿದಿದೆ. ಅದೇ ರೀತಿ ಅಮೆರಿಕದಲ್ಲಿ ಭಾರತ ಮೂಲದ ವಿಜ್ಞಾನಿಯಾದ ಸೋನಾಲಿ ಚತುರ್ವೇದಿ ನೇತೃತ್ವದ ತಂಡ ಇಂಟ್ರಾನಾಸಲ್​ ಸಿಂಗಲ್​ ಡೋಸ್​ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

ಸ್ಯಾನ್ ಫ್ರಾನ್ಸಿಸ್ಕೋ: ಕೊರೊನಾ ನಿಯಂತ್ರಣಕ್ಕಾಗಿ ಹಲವಾರು ಲಸಿಕೆಗಳನ್ನ ಕಂಡು ಹಿಡಿಯಲಾಗಿದೆ. ಲಸಿಕೆಯ 2 ಡೋಸ್​ಗಳಲ್ಲದೇ, ಬೂಸ್ಟರ್​ ಡೋಸ್​ ಕೂಡ ವಿಶ್ವಾದ್ಯಂತ ನೀಡಲಾಗಿದೆ. ಭಾರತದ ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್​ ಮೊದಲ ಬಾರಿಗೆ ಇಂಟ್ರಾನಾಸಲ್​ ಮೂಲಕ ನೀಡುವ ಲಸಿಕೆಯನ್ನು ಕಂಡುಹಿಡಿದಿತ್ತು. ಇದೀಗ ಅಮೆರಿಕದ ವಿಜ್ಞಾನಿಗಳ ತಂಡವೂ ಕೂಡ ಸಿಂಗಲ್​ ಡೋಸ್​ ಇಂಟ್ರಾನಾಸಲ್​ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ.

ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದಲ್ಲಿ ಈ ಲಸಿಕೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಭಾರತ ಮೂಲದ ವಿಜ್ಞಾನಿ ಸೋನಾಲಿ ಚತುರ್ವೇದಿ ಸೇರಿದಂತೆ ಅವರ ತಂಡ ಸಿಂಗಲ್​ ಡೋಸ್ ಇಂಟ್ರಾನಾಸಲ್ ಲಸಿಕೆಯನ್ನು ಕಂಡು ಹಿಡಿದಿದೆ. ಇದು ನೇಕ ಕೋವಿಡ್ ರೂಪಾಂತರಗಳನ್ನು ನಿಯಂತ್ರಿಸಬಲ್ಲ, ಸೋಂಕಿನ ಹರಡುವ ತೀವ್ರತೆಯನ್ನು ಕುಗ್ಗಿಸಬಲ್ಲ ಶಕ್ತಿ ಹೊಂದಿದೆ ಎಂದು ತಂಡ ಹೇಳಿಕೊಂಡಿದೆ.

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಗ್ಲಾಡ್‌ಸ್ಟೋನ್ ಸಂಸ್ಥೆಯ ಈ ತಂಡ, ಈ ಇಂಟ್ರಾನಾಸಲ್​ ಲಸಿಕೆ ಮನುಷ್ಯನಿಂದ ಮನುಷ್ಯನಿಗೆ ಹರಡುವ ಸೋಂಕನ್ನು ತಡೆಯುತ್ತದೆ. ಇದು ಏಕ ಡೋಸ್ ಆಂಟಿವೈರಲ್ ಆಗಿದೆ. ಕೋವಿಡ್ ರೋಗಲಕ್ಷಣಗಳು ಮತ್ತು ತೀವ್ರತೆ ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿ ಚತುರ್ವೇದಿ ಅವರು ತಿಳಿಸಿದ್ದಾರೆ.

SARS-CoV-2 ಸೇರಿದಂತೆ ಉಸಿರಾಟದ ಮೇಲೆ ಪರಿಣಾಮ ಬೀರುವ ಕೊರೊನಾ ರೂಪಾಂತಾರಿಗಳ ಪ್ರಸರಣವನ್ನು ತಡೆಯಲು ಆಂಟಿವೈರಲ್‌ಗಳು ಮತ್ತು ಲಸಿಕೆಗಳಿಗೆ ಈ ಇಂಟ್ರಾನಾಸಲ್​ ಲಸಿಕೆ ಅಸಾಧಾರಣವಾಗಿ ಕೆಲಸ ಮಾಡುತ್ತದೆ ಎಂಬುದು ವಿಜ್ಞಾನಿಗಳ ಸ್ಪಷ್ಟನೆ.

ಟಿಐಪಿ ವಿಧಾನವು ಸೋಂಕಿತ ಜೀವಕೋಶಗಳ ಒಳಗೆ ವೈರಸ್ ಅನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಟಿಐಪಿ ವಿಧಾನ ವೈರಸ್​ಗೆ ಗುರಿಯಾದ ಕೋಶಗಳ ಒಳಗೆ ನೆಲೆಸಿ ಚಿಕಿತ್ಸೆ ನೀಡುವುದರಿಂದ ನಿರೋಧಕ ಶಕ್ತಿ ಹೆಚ್ಚುತ್ತದೆ. ವೈರಸ್​ನ ಹೊ ತಳಿಗಳು ದಾಳಿ ಮಾಡಿದರೂ ಅದನ್ನು ತಡೆಯುವ ಶಕ್ತಿ ಇದಕ್ಕಿದೆ. ಹಲವು ರೂಪಾಂತರಗಳ ಮೇಲೆ ಈ ಇಂಟ್ರಾನಾಸಲ್​ ಲಸಿಕೆಯನ್ನು ಪ್ರಯೋಗ ಮಾಡಲಾಗಿದೆ.

ಕೋವಿಡ್ ಸೋಂಕಿಗೆ ಒಳಗಾದ ರೋಗಿಗಳಿಗೆ ಆಂಟಿವೈರಲ್ ಆಗಿ ಟಿಐಪಿ ಚಿಕಿತ್ಸೆಯನ್ನು ನೀಡಿದರು. ಆರಂಭಿಕ ಪ್ರಯೋಗದಲ್ಲಿ SARS-CoV-2 ನ ಡೆಲ್ಟಾ ತಳಿ ಮೇಲೆ ಇದನ್ನು ಬಳಸಲಾಯಿತು. 5 ದಿನಗಳಲ್ಲಿ ಸೋಂಕಿತ ವ್ಯಕ್ತಿಯಲ್ಲಿ ವೈರಸ್​ ಉಲ್ಬಣಗೊಳ್ಳುವುದನ್ನು ಈ ಲಸಿಕೆ ತಡೆದಿರುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಓದಿ: ಥಾಮ್ಸನ್ QLED ಟಿವಿ ಬಿಡುಗಡೆ: ಫ್ಲಿಪ್​ಕಾರ್ಟ್​ನಲ್ಲಿ ಲಾಂಚ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.