ಕರ್ನಾಟಕ

karnataka

Drone attack: ರಷ್ಯಾ ರಾಜಧಾನಿ ಮಾಸ್ಕೋ ಮೇಲೆ ಉಕ್ರೇನ್ ಡ್ರೋನ್ ದಾಳಿ

By

Published : Jul 30, 2023, 1:14 PM IST

Ukraine drone attack in Moscow: ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದ್ದು ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ.

Drone attack
ಮಾಸ್ಕೋ ಮೇಲೆ ಉಕ್ರೇನ್ ಡ್ರೋನ್ ದಾಳಿ

ಮಾಸ್ಕೋ (ರಷ್ಯಾ) : ಇಂದು ಬೆಳಗ್ಗೆ ರಷ್ಯಾದ ರಾಜಧಾನಿ ಮಾಸ್ಕೋ ಮೇಲೆ ಉಕ್ರೇನ್ ಡ್ರೋನ್‌ ದಾಳಿ ನಡೆಸಿದ್ದು 2 ಕಟ್ಟಡಗಳಿಗೆ ಹಾನಿಯುಂಟಾಗಿದೆ. ಕಟ್ಟಡದ ಮುಂಭಾಗ ಹಾನಿಗೊಳಗಾಗಿದ್ದು Oko-2 ಎಂಬ ಹೆಸರಿನ ಕಟ್ಟಡದಲ್ಲಿನ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ಇದಕ್ಕೂ ಮೊದಲು ಮಾಸ್ಕೋ ಮೇಯರ್ ಸೆರ್ಗೆಯ್ ಸೊಬಯಾನಿನ್ ಅವರು ನಗರದಲ್ಲಿ ಉಕ್ರೇನಿಯನ್ ಡ್ರೋನ್‌ಗಳು ದಾಳಿ ನಡೆಸಿವೆ ಎಂದು ಹೇಳಿದ್ದಾರೆ. "ಇಂದು ಬೆಳಗ್ಗೆ ಉಕ್ರೇನಿಯನ್ ಡ್ರೋನ್ ದಾಳಿ ನಡೆದಿದೆ. ಮಾಸ್ಕೋ ನಗರದಲ್ಲಿ ಎರಡು ಕಚೇರಿ ಕಟ್ಟಡಗಳ ಮುಂಭಾಗಗಳು ಸ್ವಲ್ಪ ಹಾನಿಗೊಳಗಾಗಿವೆ. ಯಾವುದೇ ಸಾವು-ನೋವು ವರದಿಯಾಗಿಲ್ಲ" ಎಂದು ಅವರು ತಮ್ಮ ಟೆಲಿಗ್ರಾಮ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :Russia - Ukraine War : ರಷ್ಯಾದಿಂದ ಭೀಕರ ಕ್ಷಿಪಣಿ ದಾಳಿ; ಉಕ್ರೇನ್​ನ 25 ವಾಸ್ತುಶಿಲ್ಪ ಸ್ಮಾರಕಗಳಿಗೆ ಹಾನಿ

ಈ ಘಟನೆಗೂ ಹಿಂದಿನ ದಿನ ಅಂದರೆ ನಿನ್ನೆ ರಷ್ಯಾದ ರಕ್ಷಣಾ ಸಚಿವಾಲಯವು ಓಡಿಂಟ್ಸೊವೊ ಜಿಲ್ಲೆಯ ಭೂಪ್ರದೇಶದಲ್ಲಿ ಡ್ರೋನ್​ವೊಂದನ್ನು ಹೊಡೆದುರುಳಿಸಿದೆ. ಘಟನೆಯಿಂದಾಗಿ ರಾಜಧಾನಿಯಲ್ಲಿರುವ ವ್ನುಕೊವೊ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕ ಆಗಮನ ಮತ್ತು ನಿರ್ಗಮನವನ್ನು ಸ್ಥಗಿತಗೊಳಿಸಲಾಗಿದೆ. ವಿಮಾನಗಳನ್ನು ಇತರೆ ವಿಮಾನ ನಿಲ್ದಾಣಗಳಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ.

ಇದನ್ನೂ ಓದಿ :12 ದಿನಗಳ ವಿರಾಮದ ಬಳಿಕ ಕೀವ್ ಮೇಲೆ ಮತ್ತೆ ಡ್ರೋನ್ ದಾಳಿ ಪ್ರಾರಂಭಿಸಿದ ರಷ್ಯಾ

ಇನ್ನು ಜುಲೈ ತಿಂಗಳ ಆರಂಭದಲ್ಲಿ ಕೀವ್ ಆಡಳಿತವು S-200 ವಾಯು ರಕ್ಷಣಾ ವ್ಯವಸ್ಥೆಯ ವಿಮಾನ ವಿರೋಧಿ ಕ್ಷಿಪಣಿಯೊಂದಿಗೆ ಭಯೋತ್ಪಾದಕ ದಾಳಿ ನಡೆಸಿತ್ತು. ಹಾಗೆಯೇ. ಕಳೆದ 2 ದಿನಗಳ ಹಿಂದೆ, ಶುಕ್ರವಾರ ನಗರದ ಮಧ್ಯದಲ್ಲಿ ರಾಕೆಟ್ ಸ್ಫೋಟ ಸಂಭವಿಸಿದೆ ಎಂದು ಪ್ರಾದೇಶಿಕ ಗವರ್ನರ್ ವಾಸಿಲಿ ಗೊಲುಬೆವ್ ಹೇಳಿದ್ದರು. ಘಟನೆಯಿಂದ ಅನೇಕರು ತೊಂದರೆ ಅನುಭವಿಸಿದ್ದಾರೆ, ಗಾಜು ಒಡೆದು ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹಾನಿಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎಂದು ಹೇಳಿದ್ದರು. ನಂತರ 14 ಜನರು ಗಾಯಗೊಂಡಿದ್ದಾರೆ ಎಂದು ರಷ್ಯಾದ ಆರೋಗ್ಯ ಸಚಿವಾಲಯ ತಿಳಿಸಿತ್ತು.

ಇದನ್ನೂ ಓದಿ :Russia - Ukraine War : ಉಕ್ರೇನ್​ಗೆ ಸಿಗುತ್ತಾ ನ್ಯಾಟೋ ಸದಸ್ಯತ್ವ? ಏನಂತಾರೆ ಬೈಡನ್?

ರಷ್ಯಾದ ರಕ್ಷಣಾ ಸಚಿವಾಲಯವು ಸಹ ಈ ಬಗ್ಗೆ ಮಾಹಿತಿ ನೀಡಿದೆ. ಶುಕ್ರವಾರ ರಾತ್ರಿ ಮಾಸ್ಕೋ ಪ್ರದೇಶದ ಮೇಲೆ ಡ್ರೋನ್ ದಾಳಿಯನ್ನು ಪ್ರಾರಂಭಿಸಿದೆ. ಆದರೆ ಶುಕ್ರವಾರ ರಷ್ಯಾ, ಉಕ್ರೇನ್‌ನ ಗಡಿಯಲ್ಲಿರುವ ದಕ್ಷಿಣ ರೋಸ್ಟೋವ್ ಪ್ರದೇಶದ ಮೇಲೆ ಎರಡು ಉಕ್ರೇನಿಯನ್ ಕ್ಷಿಪಣಿಗಳನ್ನು ನಮ್ಮ ಪಡೆ ತಡೆದಿದೆ. ಯಾವುದೇ ಹಾನಿ ಅಥವಾ ಸಾವು-ನೋವುಗಳಿಗೆ ಕಾರಣವಾಗಲಿಲ್ಲ ಎಂದು ತಿಳಿಸಿದೆ.

ಇದನ್ನೂ ಓದಿ :Russia Ukraine War : ಕ್ಲಸ್ಟರ್​ ಬಾಂಬ್​ ಸಾಕಷ್ಟಿವೆ, ಅಗತ್ಯ ಬಿದ್ದರೆ ಪ್ರಯೋಗಿಸುತ್ತೇವೆ; ಪುಟಿನ್ ವಾರ್ನಿಂಗ್

ABOUT THE AUTHOR

...view details